ಶ್ರವಣ್ಗೆ ಬೆಳ್ಳಿ
ತೈಪೇ ಸಿಟಿ: ಹರಿಯಾಣದ ಶ್ರವಣ್ ಖರಬ್ ಅವರು ತೈಪೇ ಮುನಿಷಿಪಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನ 10 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಭಾರತದ ಓಟಗಾರ ಶ್ರವಣ್ ಅವರು 31.52.37 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಎರಡನೇ ಸ್ಥಾನದ ಗೌರವ ಪಡೆದರು. ಆದರೆ ಭಾರತೀಯ ಓಟಗಾರನಿಗೆ ತಮ್ಮ ಶ್ರೇಷ್ಠ ಸಾಧನೆಯಾದ 28:55.31 ಸೆಕೆಂಡುಗಳ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಚಿನ್ನದ ಪದಕ ಗೆದ್ದುಕೊಂಡ ಜಪಾನ್ ಓಟಗಾರ ಹಜುಮಾ ಹಟೋರಿ ಅವರು 31:10.60 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಮೊದಲ ಸ್ಥಾನ ಪಡೆದರು. ಯೆಮನ್ನ ಯಾಸಿರ್ ಸಲೇಮ್ ಬಾಘರಬ್ 32:22.42 ಸೆ.ಗಳೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇಂದೇ ನಡೆದ ಸ್ಪರ್ಧೆಗಳಲ್ಲಿ ಹರಿಯಾಣದ ಬಾಲಕಿ ಪಿಂಕಿ ಕುಮಾರಿ ಅವರು ಮಹಿಳೆಯರ 1,500 ಮೀ. ಓಟದಲ್ಲಿ 4:37.53 ಸೆಕೆಂಡುಗಳಲ್ಲಿ ತಲುಪಿ ಐದನೇ ಸ್ಥಾನಕ್ಕೆ ತೃಪ್ತಿ ಹೊಂದಿದರು. ಅವರು ತಮ್ಮ ಜೂನಿಯರ್ ರಾಷ್ಟ್ರೀಯ ದಾಖಲೆಗಿಂತಲೂ (4:27.26ಸೆ.) ಹಿಂದುಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

