ಕ್ರೀಡೆ

ಸ್ಕ್ವಾಷ್: ಎಂಟರಘಟ್ಟಕ್ಕೆ ಸೌರವ್ ಘೋಸಾಲ್

Published On :

ಚಿಕಾಗೊ: ಭಾರತದ ಅಗ್ರಮಾನ್ಯ ಸ್ಕ್ವಾಶ್ ಆಟಗಾರ ಸೌರವ್ ಘೋಸಾಲ್ ಚಿಕಾಗೊದಲ್ಲಿ ನಡೆಯುತ್ತಿರುವ ಪಿಎಸ್‌ಎ ವಿಂಡಿ ಸಿಟಿ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ವಿಶ್ವದ 17ನೇ ಶ್ರೇಯಾಂಕಿತ ಸೌರವ್ ಘೋಸಾಲ್ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮಗಿಂತಲೂ ಉನ್ನತ ಕ್ರಮಾಂಕದ ಆಟಗಾರ ಈಜಿಪ್ತ್‌ನ ಟಾರೆಕ್ ಮೊಮೆನ್ ಅವರನ್ನು 11-9, 3-11, 11-4, 11-7 ಅಂಕಗಳ ಅಂತರದಲ್ಲಿ ಮಣಿಸಿದರು.
  ವಿಶ್ವದ 12ನೇ ಶ್ರೇಯಾಂಕಿತ ಟಾರೆಕ್ ಮೊಮೆನ್ ಎರಡನೇ ಗೇಮ್ ಗೆದ್ದು ಭಾರತೀಯ ಆಟಗಾರನಿಗೆ ತಿರುಗೇಟು ನೀಡುವ ಸೂಚನೆ ನೀಡಿದ್ದರು. ಆದರೆ, ಘೋಸಾಲ್ ಉತ್ತಮ ಆಟವಾಡಿ ಅಂತಿಮ ಗೆಲವು ದಕ್ಕಿಸಿಕೊಂಡರು. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತೀಯ ಆಟಗಾರ, ಈಜಿಪ್ತ್‌ನ ಮತ್ತೊಬ್ಬ ಆಟಗಾರ 4ನೇ ಶ್ರೇಯಾಂಕಿತ ಮೊಹಮದ್ ಎಲ್ಶೋರ್‌ಬ್ಯಾಗಿ ವಿರುದ್ಧ ಸೆಣಸಲಿದ್ದಾರೆ.      ಈ ಮಧ್ಯೆ ಮಹಿಳೆಯರ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿ ವಿಶ್ವದ 10ನೇ ಶ್ರೇಯಾಂಕಿತೆ ದೀಪಿಕಾ ಪಳ್ಳಿಕಲ್ ಮೊದಲ ಸುತ್ತಿನಲ್ಲಿಯೇ ಐದನೇ ಶ್ರೇಯಾಂಕಿತೆ ಲೋ ವೀ ವೆರ್ನ್ ಅವರ ಎದುರು 5-11, 11-8, 7-11, 14-12, 6-11 ಅಂಕಗಳಿಂದ ಸೋಲನುಭವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.