ಕ್ರೀಡೆ

ಬಾಸ್ಕೆಟ್‌ಬಾಲ್ ರಾಜ್ಯಕ್ಕೆ ಗೆಲವು

Published On :

ನವದೆಹಲಿ: ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಕರ್ನಾಟಕ ತಂಡದ ಆಟಗಾರರು 64ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ರಾಜಸ್ಥಾನದ ವಿರುದ್ಧ ಗೆಲವು ದಾಖಲಿಸಿದ್ದಾರೆ.      ಸೋಮವಾರ ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪುರುಷರ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು 90-77 (26-19, 19-10, 27-21, 18-27) ಅಂಕಗಳ ಅಂತರದಲ್ಲಿ ರಾಜಸ್ಥಾನ ವಿರುದ್ಧ ಜಯದ ನಗೆ ಬೀರಿದೆ.      ಕರ್ನಾಟಕ ತಂಡದ ಪರ ಧೀರಜ್ ಶೆಟ್ಟಿ 21, ಅರವಿಂದ್ 21, ರಾಜೇಶ್ 18, ಅಭಿಲಾಷ್ 8 ಅಂಕಗಳನ್ನು ಗಳಿಸಿ ತೆಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ರಾಜಸ್ಥಾನದ ವಿರುದ್ಧ ಪಾರ್ಥ ಸಾರಥಿ 16, ಕಮ್ರಾನ್ ಖಾನ್ 14, ಹರ್ಷವರ್ಧನ್ 14, ಜಯ್ನೇಶ್ ಪಟೇಲ್ 12 ಅಂಕ ದಾಖಲಿಸಿದರು.      ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡವು ಆಂಧ್ರ ಪ್ರದೇಶ ವಿರುದ್ಧ 84-72 (24-26, 16-9, 23-22, 21-15)ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಕರ್ನಾಟಕದ ಪರ ನಾನೇನಿತಾ 29, ಕೃತಿಕಾ ಲಕ್ಷ್ಮಣ್ 16, ರೋಶನಿ 11 ಅಂಕಗಳನ್ನು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.