ಅಜೇಯವಾಗಿ ಉಳಿದ ಲಂಕಾ

ಮೀರ್ಪುರ: ಆರಂಭಿಕ ಕುಸಿತದ ಹೊರತಾಗಿಯೂ ನಾಯಕ ಆ್ಯಂಜಲೊ ಮ್ಯಾಥ್ಯೂಸ್(ಅಜೇಯ 74) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲವು ದಾಖಲಿಸಿದೆ. ಗುರುವಾರ ಇಲ್ಲಿನ ಶೇರ್ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್ಗಳ ಅಂತರದಲ್ಲಿ ಬಾಂಗ್ಲಾದೇಶವನ್ನು ಮಣಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಬಾಂಗ್ಲಾದೇಶ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 204 ರನ್ ದಾಖಲಿಸಲಷ್ಟೇ ಶಕ್ತವಾಯಿತು. ಈಗಾಗಲೇ ಶ್ರೀಲಂಕಾ ತಂಡ ಫೈನಲ್ಗೆ ಪ್ರವೇಶ ಪಡೆದಿದ್ದು, ಬಾಂಗ್ಲಾದೇಶ ತಂಡ ಪಂದ್ಯಾವಳಿಯಿಂದ ಹೊರಗುಳಿದಿದೆ. ಹಾಗಾಗಿ ಈ ಪಂದ್ಯ ಔಪಚಾರಿಕ ಪಂದ್ಯವಾದರೂ, ಪಂದ್ಯಾವಳಿಯಲ್ಲಿ ಗೆಲವು ಕಾಣದೇ ಇರುವ ಬಾಂಗ್ಲಾದೇಶ, ಈ ಪಂದ್ಯದಲ್ಲಿ ಗೆದ್ದು ಮಾನ ಉಳಿಸಿಕೊಳ್ಳಲು ಚಿಂತನೆ ನಡೆಸಿತ್ತು. ಆದರೆ ಈ ಪಂದ್ಯದಲ್ಲೂ ಸೋಲನುಭವಿಸಿ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಇನ್ನು ಶ್ರೀಲಂಕಾ ಆಡಿರುವ ನಾಲ್ಕು ಪಂದ್ಯಗಳಲ್ಲೂ ಗೆಲವು ದಾಖಲಿಸಿ ಅಜೇಯವಾಗಿ ಫೈನಲ್ಗೆ ಪ್ರವೇಶಿಸಿದೆ. ಈ ಗೆಲವು ಲಂಕಾ ತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.
ಉತ್ತಮ ಆರಂಭ: ಶ್ರೀಲಂಕಾಕ್ಕೆ ಬೃಹತ್ ಗುರಿ ನೀಡುವ ಉದ್ದೇಶದೊಂದಿಗೆ ಬ್ಯಾಟಿಂಗ್ ಮಾಡಲಾರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಆರಂಭಿಕರಿಂದ ಉತ್ತಮ ಆರಂಭವನ್ನೇ ಪಡೆಯಿತು.
ಆರಂಭಿಕರಾಗಿ ಕಣಕ್ಕಿಳಿದ ಅನಾಮುಲ್ ಹಕ್(49 ರನ್, 86 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಶಮ್ಸೂರ್ ರೆಹಮಾನ್(39 ರನ್, 57 ಎಸೆತ, 6 ಬೌಂಡರಿ) ತಂಡಕ್ಕೆ 74 ರನ್ಗಳ ಆರಂಭ ನೀಡಿದರು. ಈ ಜತೆಯಾಟದ ನಂತರ ಬಾಂಗ್ಲಾ, ಲಂಕೆಗೆ ಸ್ಪರ್ಧಾತ್ಮಕ ಗುರಿ ನೀಡುವ ಸೂಚನೆ ನೀಡಿತು. ಆದರೆ ಆರಂಭಿಕ ಜೋಡಿ ಬೇರ್ಪಟ್ಟ ನಂತರ ದಿಢೀರ್ ಕುಸಿತ ಕಂಡ ಬಾಂಗ್ಲಾ, ಅಲ್ಪ ಮೊತ್ತಕ್ಕೆ ತನ್ನ ಇನಿಂಗ್ಸ್ ಅಂತ್ಯಗೊಳಿಸಿತು.
ಇನ್ನು ಶ್ರೀಲಂಕಾ ತಂಡದ ಸಂಘಟಿತ ಬೌಲಿಂಗ್ ದಾಳಿ ನಡೆಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ಆತಿಥೇಯರಿಗೆ ಕಡಿವಾಣ ಹಾಕಲು ಸಾಧ್ಯವಾಯಿತು. ಲಂಕಾ ಪರ ಸುರಾಂಗ ಲಕ್ಮಲ್, ತಿಸಾರ ಪೆರೇರಾ, ಆಶನ್ ಪ್ರಿಯಾಂಜನಾ ಹಾಗೂ ಅಜಂತಾ ಮೆಂಡಿಸ್ ತಲಾ ಎರಡು ವಿಕೆಟ್ ಪಡೆದರೆ, ಚತುರಾಂಗ ಡಿ ಸಿಲ್ವಾ ಒಂದು ವಿಕೆಟ್ ಪಡೆದರು.
ಆಸರೆಯಾದ ಆ್ಯಂಜಲೊ: ಅಲ್ಪ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಹಾದಿ ಸುಲಭವಾಗಿರಲಿಲ್ಲ. ತಂಡ 8 ರನ್ ಗಳಿಸುವಷ್ಟರಲ್ಲೇ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಮ್ಯಾಥ್ಯೂಸ್(ಅಜೇಯ 74 ರನ್, 103 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಚತುರಾಂಗ ಡಿ ಸಿಲ್ವಾ(44) ತಂಡಕ್ಕೆ ಅತ್ಯಮೂಲ್ಯ 82 ರನ್ ಜತೆಯಾಟ ನೀಡುವ ಮೂಲಕ ತಂಡವನ್ನು ಗೆಲವಿನತ್ತ ಕೊಂಡೊಯ್ದರು.
ಸ್ಕೋರ್ ವಿವರ
ಬಾಂಗ್ಲಾದೇಶ 50 ಓವರ್ಗಳಲ್ಲಿ 9 ವಿಕೆಟ್ಗೆ 204
ಅನಾಮುಲ್ ಹಕ್ ಸಿ ತಿರಿಮಾನೆ ಬಿ ಪ್ರಿಯಂಜನಾ 49, ಶಮ್ಸೂರ್ ರೆಹಮಾನ್ ಎಲ್ಬಿ ಮೆಂಡಿಸ್ 39, ಮೊಮಿನುಲ್ ಹಕ್ ಬಿ ಮೆಂಡಿಸ್ 1,
ಮುಶ್ಫಿಕರ್ ರಹೀಮ್ ಎಲ್ಬಿ ಡಿಸಿಲ್ವಾ 4, ಶಕಿಬ್ ಅಲ್ ಹಸನ್ ಸಿ ಮ್ಯಾಥ್ಯೂಸ್ ಬಿ ಪ್ರಿಯಂಜನಾ 20, ನಾಸಿರ್ ಹೊಸೈನ್ ಸಿ ಜಯವರ್ದನೆ ಬಿ ಲಕ್ಮಲ್ 30, ಮಹಮದ್ದುಲ್ಲಾ ಬಿ ಲಕ್ಮಲ್ 30, ಜಿಯುರ್ ರೆಹಮಾನ್ ಬಿ ಪೆರೇರಾ 12, ಅರಾಫತ್ ಸನ್ನಿ ಅಜೇಯ 2, ರುಬೆಲ್ ಹುಸೈನ್ ಬಿ ಪೆರೇರಾ 0, ಅಮೀನ್ ಹೊಸೈನ್ ಅಜೇಯ 0, ಇತರೆ 15
ವಿಕೆಟ್ ಪತನ: 1-74, 2-76, 3-87, 4-106, 5-119, 6-174, 7-183, 8-203, 9-203
ಬೌಲಿಂಗ್ ವಿವರ: ಸುರಾಂಗ ಲಕ್ಮಲ್ 10-0-32-2, ತಿಸಾರ ಪೆರೇರಾ 8-0-29-2, ಸೇನನಾಯಕೆ 10-1-37-0, ಡಿ ಸಿಲ್ವಾ 10-0-33-1, ಮೆಂಡಿಸ್ 9-0-55-2, ಪ್ರಿಯಂಜನಾ 3-0-11-2
ಶ್ರೀಲಂಕಾ 49 ಓವರ್ಗಳಲ್ಲಿ 7 ವಿಕೆಟ್ಗೆ 208
ಕುಸಾಲ್ ಪೆರೇರಾ ಸಿ ಅನುಮುಲ್ ಹಕ್ ಬಿ ಅಲ್ ಅಮಿನ್ 0, ಲಹೀರು ತಿರುಮನೆ ಸಿ ರುಬೆಲ್ ಹುಸೇನ್ ಬಿ ಅರಾಫತ್ 33, ಸಂಗಕ್ಕಾರ ಸಿ ನಾಸಿರ್ ಹುಸೇನ್ ಬಿ ಅಲ್ ಅಮಿನ್ 2, ಜಯವರ್ದನೆ ರನೌಟ್ (ಮಹ್ಮದುಲ್ಲಾ/ರುಬೆಲ್ ಹುಸೇನ್) 0, ಪ್ರಿಯಾಂಜನ್ ಸಿ ಅನುಮುಲ್ ಹಕ್ ಬಿ ಜಿಯಾವುರ್ ರಹಮಾನ್ 24, ಆ್ಯಂಜಲ್ ಮ್ಯಾಥ್ಯೂಸ್ ಅಜೇಯ 74, ಡಿ ಸಿಲ್ವಾ ಸಿ ಅನುಮುಲ್ ಹಕ್ ಬಿ ಮಹ್ಮದುಲ್ಲಾ 44, ಪೆರೇರಾ ರನೌಟ್ (ರುಬೆಲ್ ಹುಸೇನ್) 15, ಸೇನಾನಾಯಕೆ ಅಜೇಯ 7, ಇತರೆ 9.
ವಿಕೆಟ್ ಪತನ: 1-0, 2-6, 3-8, 4-47, 5-75, 6-157, 7-193.
ಬೌಲಿಂಗ್ ವಿವರ: ಅಲ್ ಅಮಿನ್ ಹುಸೇನ್ 10-2-42-2, ರುಬೆಲ್ ಹುಸೇನ್ 6-0-25-0, ಶಕಿಬ್ ಅಲ್ ಹಸನ್ 10-0-27-0, ಜಿಯಾವುರ್ ರಹಮಾನ್ 10-0-34-1, ಅರಾಫತ್ ಸನ್ನಿ 7-0-46-1, ಮಹ್ಮದುಲ್ಲಾ 6-1-30-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


