2015ರಲ್ಲೂ ಭಾರತದಲ್ಲಿ ಎಫ್1 ಇಲ್ಲ
ನವದೆಹಲಿ: ಹಲವು ಕಾರಣಗಳನ್ನು ನೀಡಿ 2014ರಲ್ಲಿ ಭಾರತದ ಎಫ್1 ರೇಸ್ ಆದ ಇಂಡಿಯನ್ ಗ್ರ್ಯಾನ್ ಪ್ರಿ ಅನ್ನು ಕೈಬಿಟ್ಟಿದ್ದು, ಮುಂದಿನ ವರ್ಷವೂ ಸಹ ಭಾರತದಲ್ಲಿ ಎಫ್1 ನಡೆಯುವುದಿಲ್ಲ ಎಂದು ಎಫ್1 ಮುಖ್ಯಸ್ಥ ಬರ್ನಿ ಎಕ್ಲೆಸ್ಟೋನ್ ತಿಳಿಸಿದ್ದಾರೆ.
ಮುಂದಿನ ವರ್ಷವೂ ಎಫ್1 ರೇಸ್ ಖಂಡಿತವಾಗಿಯೂ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಬರ್ನಿ, ಭಾರತೀಯ ಎಫ್1 ರೇಸ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಆದರೆ ಇಂಡಿಯನ್ ಗ್ರ್ಯಾನ್ ಪ್ರಿ ಆಯೋಜಕರಾದ ಜೆಪಿಎಐ ಮಾತ್ರ, ಮುಂದಿನ ವರ್ಷ ಎಫ್1 ರೇಸ್ ಅನ್ನು ಭಾರತಕ್ಕೆ ತರುವ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಬರ್ನಿ, ಪ್ರಸ್ತುತ ಸಮಯದ ಪ್ರಕಾರ ಮುಂದಿನ ವರ್ಷ ಭಾರತದಲ್ಲಿ ಎಫ್1 ರೇಸ್ ಖಂಡಿತವಾಗಿಯೂ ನಡೆಯುವುದಿಲ್ಲ ಎಂದು ತಿಳಿಸಿದ್ದರು.
2016ರ ವೇಳೆಗೆ ಇಂಡಿಯನ್ ಗ್ರ್ಯಾನ್ ಪ್ರಿ ಆಯೋಜಕರು ಅಲ್ಲಿನ ರಾಜತಾಂತ್ರಿಕರೊಂದಿಗೆ ಚರ್ಚೆ ನಡೆಸಿ ತೆರಿಗೆ ಹಾಗೂ ಆರ್ಥಿಕ ವಿಷಯಗಳಲ್ಲಿ ಮೂಡಿರುವ ಗೊಂದಲಗಳನ್ನು ಬಗೆಹರಿಸುವ ಸಾಧ್ಯತೆಗಳಿವೆ. ಆನಂತರ ಭಾರತದಲ್ಲಿ ಮತ್ತೆ ರೇಸ್ ನಡೆಸಲು ಸಾಧ್ಯವಾಗಬಹುದು.
2014ರಲ್ಲಿ ರೇಸ್ ಅನ್ನು ಕೈಬಿಟ್ಟ ನಂತರ. ಅಕ್ಟೋಬರ್ ಬದಲಿಗೆ 2015ರ ಮಾರ್ಚ್ನಲ್ಲಿ ಇಂಡಿಯನ್ ಗ್ರ್ಯಾನ್ ಪ್ರೀ ನಡೆಯಲಿದೆ ಎಂಬ ವದಂತಿಗಳು ಹಬ್ಬಿದ್ದವು.
ಕಳೆದ ವರ್ಷ ನಡೆದ ಇಂಡಿಯನ್ ಗ್ರ್ಯಾನ್ ಪ್ರೀ ವೇಳೆ ಜೇಪೀ ಸ್ಪೋರ್ಟ್ಸ್ ಇಂಟರ್ನ್ಯಾಷನಲ್ ಲಿ. ಸಿಇಒ ಎಮ್.ಡಿ ಸಮೀರ್, 2015ರಲ್ಲಿ ಭಾರತಕ್ಕೆ ಎಫ್1 ರೇಸ್ ಅನ್ನು ಮರಳಿ ತರಲು ನನ್ನಿಂದಾದ ಎಲ್ಲಾ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದ್ದರು. 2015ರಲ್ಲಿ ಇಂಡಿಯನ್ ಗ್ರ್ಯಾನ್ ಪ್ರೀ ನಡೆಯುವುದಿಲ್ಲ ಎಂಬ ಮಾಧ್ಯಮಗಳ ವರದಿಗೆ ಜೆಪಿಎಸ್ಐ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಫಾರ್ಮುಲಾ ಒನ್ ಮ್ಯಾನೇಜರ್ ಜತೆಗೆ ಪರಿಸ್ಥಿತಿಯ ಕುರಿತು ಕೂಲಂಕುಶವಾಗಿ ಚರ್ಚೆ ಮಾಡುತ್ತೇವೆ. ಈಗ ಉದ್ಭವಿಸಿರುವ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಜೆಪಿಎಸ್ಐ ಭಾರತದಲ್ಲಿ ಎಫ್1 ರೇಸ್ ನಡೆಸಲು ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಇದುವರೆಗೂ 2011ರಿಂದ 2013ರವರೆಗೆ ಭಾರತದಲ್ಲಿ 3 ಬಾರಿ ರೇಸ್ ನಡೆದಿದೆ. ಆದರೆ ತೆರಿಗೆ ಹಾಗೂ ಆರ್ಥಿಕ ವಿಚಾರದಲ್ಲಿ ಸರ್ಕಾರದ ನೀತಿಗಳಿಂದಾಗಿ ಎಫ್1 ಭಾರತದಿಂದ ದೂರ ಉಳಿಯುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

