ಲಂಕಾ ಏಷ್ಯಾ ಕಪ್ ಸಾಮ್ರಾಟ

ಮೀರ್ಪುರ: ಎಡಗೈ ಬ್ಯಾಟ್ಸ್ಮನ್ ಫವಾದ್ ಆಲಂ(ಅಜೇಯ 114) ಶತಕದ ಹೊರತಾಗಿಯೂ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದು, ಪ್ರಶಸ್ತಿಯನ್ನು ಕೈ ಚೆಲ್ಲಿದೆ. ಲಂಕಾ ಪರ ಲಹಿರು ತಿರಿಮಾನೆ(101) ಶತಕ ದಾಖಲಿಸಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶನಿವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪಾಕಿಸ್ತಾನ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 260 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ 46.2 ಓವರ್ಗಳಲ್ಲಿ 5 ವಿಕೆಟ್ಗೆ 261 ಮೊತ್ತ ದಾಖಲಿಸಿ ಗೆಲವು ಸಾಧಿಸಿತು.
ಆರಂಭಿಕ ಕುಸಿತ: ಬೃಹತ್ ಮೊತ್ತವನ್ನು ಕಲೆ ಹಾಕುವ ನಿಟ್ಟಿನಲ್ಲಿ ಟಾಸ್ ಗೆದ್ದ ತಕ್ಷಣ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಪಾಕಿಸ್ತಾನಕ್ಕೆ ಆರಂಭ ಉತ್ತಮವಾಗಿರಲಿಲ್ಲ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶರ್ಜೀಲ್ ಖಾನ್(8), ಅಹ್ಮದ್ ಶೆಹಜಾದ್(5) ಹಾಗೂ ಮೂರನೇ ಕ್ರಮಾಂಕದಲ್ಲಿ ಬಂದ ಮೊಹಮದ್ ಹಫೀಜ್(3) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಪರಿಣಾಮ ಪಾಕಿಸ್ತಾನ ಕೇವಲ 18 ರನ್ ದಾಖಲಿಸುವಷ್ಟರಲ್ಲಿ ಅಗ್ರ ಮೂವರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ನಾಯಕ ಮಿಸ್ಬಾ ಉಲ್ ಹಕ್(65ರನ್, 98ಎಸೆತ, 3ಬೌಂಡರಿ, 2ಸಿಕ್ಸರ್) ಹಾಗೂ ಫವಾದ್ ಆಲಂ(ಅಜೇಯ 114ರನ್, 134 ಎಸೆತ, 8 ಬೌಂಡರಿ, 3 ಸಿಕ್ಸರ್) ತಂಡಕ್ಕೆ 122 ರನ್ಗಳ ಶತಕದ ಜತೆಯಾಟ ನೀಡಿ ಚೇತರಿಕೆ ನೀಡಿತು.
ಮಿಸ್ಬಾ ಔಟಾದ ನಂತರ ಆಲಂ ಜತೆಗೂಡಿದ ಉಮರ್ ಅಕ್ಮಲ್(59ರನ್, 42ಎಸೆತ, 7ಬೌಂಡರಿ) ಸ್ಫೋಟಕ ಬ್ಯಾಟಿಂಗ್ಗೆ ಮುಂದಾದರು. ಈ ಇಬ್ಬರು 5ನೇ ವಿಕೆಟ್ಗೆ 115 ರನ್ಗಳ ಶತಕದ ಜತೆಯಾಟ ನೀಡಿದರು. ಲಂಕಾ ಪರ ಮಾಲಿಂಗ 5 ವಿಕೆಟ್ ಪಡೆದು ಮಿಂಚಿದರು.
ಯಶಸ್ವಿಗೆ ಬೇಟೆ: ಪಾಕ್ ನೀಡಿದ ಗುರಿಯನ್ನು ಬೆನ್ನಟ್ಟಿದ ಸಿಂಹಳಿಯರು ಯಶಸ್ವಿಯಾಗಿ ಗೆಲವಿನ ದಡ ಸೇರಿದರು. ಲಂಕಾ ತಂಡದ ಪರ ತಿರಿಮಾನೆ (101ರನ್, 108ಎಸೆತ, 13ಬೌಂಡರಿ) ಶತಕ ದಾಖಲಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಇವರಿಗೆ ಸಾಥ್ ನೀಡಿದ ಜಯವರ್ದನೆ (75ರನ್, 93ಎಸೆತ, 9ಬೌಂಡರಿ, 1 ಸಿಕ್ಸರ್) ಅರ್ಧಶತಕ ದಾಖಲಿಸಿದರು.
ಸ್ಕೋರ್ ವಿವರ
ಪಾಕಿಸ್ತಾನ 50 ಓವರ್ಗಳಲ್ಲಿ 5 ವಿಕೆಟ್ಗೆ 260
ಶರ್ಜೀಲ್ಸಿ ಪೆರೇರಾ ಬಿ ಮಾಲಿಂಗಾ 8(6)
ಶೆಹಜಾದ್ ಸಿ ಸಂಗಕ್ಕಾರ ಬಿ ಮಾಲಿಂಗಾ 5(7)
ಹಫೀಜ್ ಸಿ ಸಂಗಕ್ಕಾರ ಬಿ ಮಾಲಿಂಗಾ 3(13)
ಮಿಸ್ಬಾ ಉಲ್ ಹಕ್ ಸಿ ಕುಶಾಲ ಬಿ
ಮಾಲಿಂಗಾ 65(98)
ಫವಾದ್ ಆಲಂ ಅಜೇಯ
114(134) ಉಮರ್ ಅಕ್ಮಲ್ ಸಿ
ಪ್ರಿಯಂಜನ್ ಬಿ ಮಾಲಿಂಗಾ 59(42)
ಶಾಹಿದ್ ಅಫ್ರಿದಿ ಅಜೇಯ 0(0)
ಇತರೆ: (ಎಲ್ಬಿ 1, ವೈಡ್ 5) ಒಟ್ಟು 6
ವಿಕೆಟ್ ಪತನ: 1-8, 2-17, 3-18, 4-140, 5-255
ಬೌಲಿಂಗ್ ವಿವರ: ಲಸಿತ್ ಮಾಲಿಂಗ 10-0-56-5 ಸುರಾಂಗಾ ಲಕ್ಮಲ್ 10-2-41-0, ಸಚಿತ್ರ ಸೇನಾನಾಯಕೆ 9-0-54-0 ತಿಸಾರ ಪೆರೇರಾ 10-1-66-0, ಆ್ಯಂಜಲೊ ಮ್ಯಾಥ್ಯೂಸ್ 7-1-23-0 ಚತುರಾಂಗ ಡಿ ಸಿಲ್ವಾ 4-0-19-0
ಶ್ರೀಲಂಕಾ 46.2 ಓವರ್ಗಳಲ್ಲಿ 5 ವಿಕೆಟ್ಗೆ 261
ಕುಶಾಲ ಪೆರೇರಾ ಸಿ ಉಮರ್ ಅಕ್ಮಲ್ ಬಿ ಸಯೀದ್ ಅಜ್ಮಲ್ 42(37)
ಲಹಿರು ತಿರಿಮಾನೆ ಬಿ ಸಯೀದ್ ಅಜ್ಮಲ್ 101(108)
ಸಂಗಕ್ಕಾರ ಎಲ್ಬಿ ಸಯೀದ್ ಅಜ್ಮಲ್ 0(1)
ಜಯವರ್ದನೆ ಸಿ ಶರ್ಜೀಲ್ ಬಿ ತಲ್ಹಾ 75(93)
ಪ್ರಿಯಂಜನ ಅಜೇಯ 16(13)
ಆ್ಯಂಜಲೊ ಮ್ಯಾಥ್ಯೂಸ್ ಅಜೇಯ 6(9)
ಇತರೆ (ಬೈ1, ಎಲ್ಬಿ 1, ವೈಡ್ 5, ನೊಬಾಲ್1) ಒಟ್ಟು 8
ವಿಕೆಟ್ ಪತನ: 1-56, 2-56, 3-212, 4-233, 5-247
ಬೌಲಿಂಗ್ ವಿವರ:
ಮಹಮದ್ ಹಫೀಜ್ 9-0-42-0
ಉಮರ್ ಗುಲ್ 6-0-44-0
ಜುನೈದ್ ಖಾನ್ 9-0-56-1
ಸಯೀದ್ ಅಜ್ಮಲ್ 10-2-26-3
ಮಹಮದ್ ತಲ್ಹಾ 6.2-0-56-1
ಶಾಹಿದ್ ಅಫ್ರಿದಿ 6-0-35-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


