ರಿಯೋ ಸೈಲಿಂಗ್ ಸ್ಥಳ ಸುರಕ್ಷಿತ
ರಿಯೋ ಡಿ ಜನೈರೋ: ಸೈಲಿಂಗ್ ಸ್ಪರ್ಧೆ ನಡೆಯುವ ಸ್ಥಳ ಅಥ್ಲೀಟ್ಗಳಿಗೆ ಸುರಕ್ಷಿತವಾಗಿದೆ ಎಂದು ರಿಯೋ ಡಿ ಜನೈರೋದಲ್ಲಿ 2016ರ ಒಲಿಂಪಿಕ್ಸ್ ಕ್ರೀಡಾಕೂಟದ ಸಂಘಟನಾ ಸಮಿತಿ ಭಾನುವಾರ ತಿಳಿಸಿದೆ. ಈ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಎಸೆಯಲಾಗುತ್ತಿದ್ದು, ತೀವ್ರ ಕೊಳಚೆಯಿಂದ ಕೂಡಿದೆ ಎಂದು ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಇಂಗ್ಲೆಂಡ್ನ ಗುವಾನಾಬಾರಾ ಬೇ ಅವರು ಸೈಲಿಂಗ್ ಸ್ಥಳದ ಬಗ್ಗೆ ಜರಿದಿದ್ದರಂತೆ. ಆದರೆ, ಈ ಸ್ಥಳ ಅಥ್ಲೀಟ್ಗಳಿಗೆ ಎಲ್ಲ ರೀತಿಯಿಂದ ಸುರಕ್ಷಿತವಾಗಿದೆ ಎಂದು ಒಲಿಂಪಿಕ್ಸ್ ಕ್ರೀಡಾಕೂಟದ ಆಯೋಜಕರು, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಗೆ ವರದಿ ಸಲ್ಲಿಸಿದ್ದಾರೆ. 'ಸ್ಪರ್ಧೆ ನಡೆಯುವ ಮತ್ತು ಕೊಳಚೆಯಿಂದ ತುಂಬಿರುವ ಪ್ರದೇಶದ ನಡುವೆ ತುಂಬಾ ಅಂತರವಿದೆ' ಎಂದು ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾದ ಕಾರ್ಲೋಸ್ ನುಜ್ಮಾನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

