ಅಗ್ರಸ್ಥಾನಕ್ಕೆ ಮರಳಿದ ಕೊಹ್ಲಿ

ದುಬೈ: ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಭಾರತ ತಂಡದ ಯುವ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು, ಏಕದಿನ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಮರಳಿ ಪಡೆದಿದ್ದಾರೆ. ಏಷ್ಯಾ ಕಪ್ ಮುಕ್ತಾಯವಾದ ಹಿನ್ನೆಲೆಯಲ್ಲಿ ಐಸಿಸಿ ಭಾನುವಾರ ಏಕದಿನ ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಏಷ್ಯಾ ಕಪ್ನಲ್ಲಿ ಶತಕ ಸಿಡಿಸಿದ ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ಎರಡು ಅಂಕಗಳಿಂದ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಏಷ್ಯಾ ಕಪ್ನಲ್ಲಿ ಒಟ್ಟು 189 ಅಂಕ ಗಳಿಸಿದ್ದ ಕೊಹ್ಲಿ ಅವರು, 12 ರೇಟಿಂಗ್ ಪಾಯಿಂಟ್ಗಳನ್ನು ಗಳಿಸಿಕೊಂಡಿದ್ದರು. ಬಾಂಗ್ಲಾದೇಶದ ವಿರುದ್ಧ 136 ರನ್ ಗಳಿಸಿದ್ದ ಕೊಹ್ಲಿ ಅವರು, ಏಕದಿನ ಕ್ರಿಕೆಟ್ನಲ್ಲಿ 886 ರೇಟಿಂಗ್ ಅಂಕ ಗಳಿಸುವ ಮೂಲಕ ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದರು. ಆದರೆ, ಶ್ರೀಲಂಕಾ ವಿರುದ್ಧ 48 ರನ್, ಪಾಕಿಸ್ತಾನದ ವಿರುದ್ಧ 5 ರನ್ ಗಳಿಸುವ ಮೂಲಕ 881 ರೇಟಿಂಗ್ ಪಾಯಿಂಟ್ಗಳೊಂದಿಗೆ ಪಂದ್ಯಾವಳಿಯನ್ನು ಮುಕ್ತಾಯಗೊಳಿಸಿದ್ದರು. ಕೊಹ್ಲಿ ಅವರು ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಗೂ ಮುನ್ನ ಅಗ್ರಸ್ಥಾನ ಕಳೆದುಕೊಂಡಿದ್ದರು.ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಮೂರು ಸ್ಥಾನ ಮೇಲಕ್ಕೇರುವ ಮೂಲಕ 8ನೇ ಸ್ಥಾನದಲ್ಲಿದ್ದಾರೆ. 1 ಸ್ಥಾನ ಬಡ್ತಿ ಪಡೆದಿರುವ ರೋಹಿತ್ ಶರ್ಮಾ 22ನೇ ಸ್ಥಾನದಲ್ಲಿ ಹಾಗೂ 12 ಸ್ಥಾನ ಬಡ್ತಿ ಪಡೆದಿರುವ ರವಿಂದ್ರ ಜಡೇಜಾ ಅವರು 50ನೇ ಸ್ಥಾನದಲ್ಲಿದ್ದಾರೆ. ಏಷ್ಯಾ ಕಪ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದವರು ಏಕದಿನ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಶ್ರೀಲಂಕಾದ ಲಹೀರು ತಿರಿಮನೆ 29 ಸ್ಥಾನ ಮೇಲಕ್ಕೇರಿದ್ದು 39ನೇ ಸ್ಥಾನದಲ್ಲಿದ್ದಾರೆ. ಅವರು ವೃತ್ತಿಜೀವನದ ಶ್ರೇಷ್ಠ ರ್ಯಾಂಕಿಂಗ್ ಆಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರವಿಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಆಟಗಾರರಾಗಿದ್ದಾರೆ. ಏಷ್ಯಾ ಕಪ್ನ ನಾಲ್ಕು ಪಂದ್ಯಗಳಲ್ಲಿ 7 ವಿಕೆಟ್ ಪಡೆದ ಜಡೇಜಾ 4 ಸ್ಥಾನ ಬಡ್ತಿ ಪಡೆದಿದ್ದು 5ನೇ ಸ್ಥಾನದಲ್ಲಿದ್ದಾರೆ. ಇನ್ನು 9 ವಿಕೆಟ್ ಪಡೆದ ಅಶ್ವಿನ್ ಅವರು 7 ಸ್ಥಾನ ಮೇಲಕ್ಕೇರಿದ್ದು 14ನೇ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಸಹ 5 ಸ್ಥಾನ ಬಡ್ತಿ ಪಡೆದಿದ್ದು 36ನೇ ಸ್ಥಾನದಲ್ಲಿದ್ದಾರೆ.ಏತನ್ಮಧ್ಯೆ, ಇನ್ನು ತಂಡ ವಿಭಾಗದ ರ್ಯಾಂಕಿಂಗ್ನಲ್ಲಿ ಭಾರತ ಏಪ್ರಿಲ್ 1ರೊಳಗೆ ತನ್ನ 2ನೇ ಸ್ಥಾನವನ್ನು ಮರಳಿ ಪಡೆಯುವ ಭರವಸೆ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


