ಯುಎಇ, ಬಾಂಗ್ಲಾ, ಭಾರತದಲ್ಲಿ ಐಪಿಎಲ್ 7ನೇ ಹಂಗಾಮ
-ಐಪಿಎಲ್ 7ನೇ ಆವೃತ್ತಿಏಪ್ರಿಲ್ 16ರಿಂದ ಜೂನ್ 1ರ ವರೆಗೆ
-ಏ. 16ರಿಂದ 30ರ ವರೆಗೆ ಯುಎಇನಲ್ಲಿ ನಡೆಸಲು ತೀರ್ಮಾನ
-ಮೇ 1ರಿಂದ 12ರ ವರೆಗೆ ಬಾಂಗ್ಲಾದೇಶ ಅಥವಾ ಭಾರತದಲ್ಲಿ
(ಗೃಹ ಸಚಿವಾಲಯ ಅನುಮತಿ ನೀಡಿದರೆ, ಚುನಾವಣೆ ಮತದಾನ ಮುಗಿದ ರಾಜ್ಯಗಳಲ್ಲಿ ನಡೆಸಲು ನಿರ್ಧಾರ. ಇಲ್ಲವಾದರೆ ಬಾಂಗ್ಲಾದೇಶದಲ್ಲಿ ಆಯೋಜನೆ)
- ಮೇ 13ರಿಂದ ಜೂನ್ 1ರ ವರೆಗೆ ಭಾರತದಲ್ಲಿ ನಡೆಸಲು ನಿರ್ಧಾರ
ನವದೆಹಲಿ: ಹಲವು ದಿನಗಳಿಂದ ಗೊಂದಲದ ಗೂಡಾಗಿದ್ದ ಐಪಿಎಲ್ ಪಂದ್ಯಾವಳಿ ಆಯೋಜನಾ ಸ್ಥಳ ಹಾಗೂ ದಿನಾಂಕಕ್ಕೆ ತೆರೆ ಬಿದ್ದಿದೆ. ಈ ಬಾರಿಯ ಐಪಿಎಲ್ ಆವೃತ್ತಿಯನ್ನು ಮೂರು ಹಂತಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಲೋಕಸಭೆ ಚುನಾವಣೆ ಕಾರಣ ಐಪಿಎಲ್ ಪಂದ್ಯಾವಳಿಗೆ ಕೇಂದ್ರ ಸರ್ಕಾರ ಭದ್ರತೆ ನೀಡಲು ನಿರಾಕರಿಸಿರುವ ಹಿನ್ನಲೆಯಲ್ಲಿ, ಬಿಸಿಸಿಐ 7ನೇ ಆವೃತ್ತಿಯನ್ನು ಮೂರು ದೇಶಗಳಲ್ಲಿ ನಡೆಸಲು ಮುಂದಾಗಿದೆ.
ಮೊದಲ ಹಂತ ಯುಎಇ(ಏ.16ರಿಂದ ಏ.30), ಎರಡನೇ ಹಂತವನ್ನು ಬಾಂಗ್ಲಾದೇಶದಲ್ಲಿ (ಮೇ 1ರಿಂದ ಮೇ 12) ಹಾಗೂ ಮೂರನೇ ಹಂತವನ್ನು ಭಾರತದಲ್ಲಿ(ಮೇ13 ರಿಂದ ಜೂ.1) ನಡೆಸಲು ನಿರ್ಧರಿಸಿದೆ.
ಆದರೆ ಮೇ 1ರಿಂದ 12ರವರೆಗೆ ಬಾಂಗ್ಲಾದೇಶದಲ್ಲಿ ನಿಗದಿ ಮಾಡಲಾಗಿರುವ ಹಂತ ಇನ್ನು ಅಂತಿಮವಾಗಿಲ್ಲ. ಒಂದು ವೇಳೆ ಮತದಾನ ಮುಗಿದ ರಾಜ್ಯಗಳಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ಅನುಮತಿ ಕೋರಿ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ. ಸರ್ಕಾರ ಅನುಮತಿ ನೀಡಿದರೆ, ಎರಡನೇ ಹಂತ ಭಾರತದಲ್ಲಿ ನಡೆಯಲಿದೆ. ಇಲ್ಲವಾದರೆ ಬಾಂಗ್ಲಾದೇಶದಲ್ಲಿ ನಡೆಸಲಾಗುತ್ತದೆ.
ಅಲ್ಲದೆ ಚುನಾವಣೆ ಫಲಿತಾಂಶ ದಿನವಾದ ಮೇ.16ರಂದು ಯಾವುದೇ ಪಂದ್ಯವನ್ನು ನಿಗದಿಪಡಿಸಿಲ್ಲ. 2014ನೇ ಸಾಲಿನ ಐಪಿಎಲ್ ಆವೃತ್ತಿಯು ಏ.16ರಂದು ಆರಂಭವಾಗಲಿದ್ದು, ಜೂ.1ರಂದು ಮುಕ್ತಾಯವಾಗಲಿದೆ ಎಂದು ಪ್ರಕಟಿಸಲು ಹರ್ಷವಾಗುತ್ತಿದೆ. ಆದಷ್ಟು ಬೇಗ ಸಂಪೂರ್ಣ ವೇಳಾಪಟ್ಟಿಯ ದಿನಾಂಕ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರವಷ್ಟೇ ಕೇಂದ್ರ ಗೃಹ ಸಚಿವಾಲಯ ಚುನಾವಣೆ ನಂತರ ಐಪಿಎಲ್ ಪಂದ್ಯಗಳನ್ನು ಭಾರತದಲ್ಲಿ ನಡೆಸಲು ಅನುಮತಿ ನೀಡಿತ್ತು. ಅಲ್ಲದೆ ಪಂದ್ಯಗಳನ್ನು ನಡೆಸುವ ರಾಜ್ಯಗಳಲ್ಲಿನ ಸರ್ಕಾರದ ಜತೆ ಮಾತುಕತೆ ನಡೆಸುವಂತೆ ಸೂಚನೆ ನೀಡಿತ್ತು.
ಏ.16ರಿಂದ ಎ.30ರವರೆಗೆ ಐಪಿಎಲ್ನ ಮೊದಲ ಹಂತದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿದೆ.
ನಂತರ ಮೇ 1ರಿಂದ ಮೇ 12ರವರೆಗೆ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಗೊಂಡಿರುವ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.
ಒಂದುವೇಳೆ ಈ ಸಮಯದಲ್ಲಿ ಪಂದ್ಯಗಳನ್ನು ಭಾರತದಲ್ಲಿ ನಡೆಸಲು ಅವಕಾಶ ನೀಡದಿದ್ದರೆ, ಬಾಂಗ್ಲಾದೇಶದಲ್ಲಿ ಈ ಹಂತದ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ ಇದಕ್ಕೆ ಬೆಂಬಲ ನೀಡಿರುವ ಬಾಂಗ್ಲಾದೇಶ ಸರ್ಕಾರಕ್ಕೆ ಧನ್ಯವಾದಗಳು ಎಂದು ಬಿಸಿಸಿಐ ತಿಳಿಸಿದೆ. ಮೇ 13ರ ನಂತರ ಎಲ್ಲಾ ರಾಜ್ಯಗಳಲ್ಲೂ ಚುನಾವಣೆ ಸಂಪೂರ್ಣವಾಗಿ ಮುಕ್ತಾಯಗೊಂಳ್ಳಲಿರುವ ಹಿನ್ನಲೆಯಲ್ಲಿ ನಂತರದ ಲೀಗ್ ಹಂತದ ಪಂದ್ಯಗಳು ಹಾಗೂ ಪ್ಲೇ ಆಫ್ ಪಂದ್ಯಗಳನ್ನು ಭಾರತದಲ್ಲೇ ನಡೆಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

