ಕ್ರೀಡೆ

ಏ.20 ರಿಂದ ಕೊಡವ ಕೌಟುಂಬಿಕ ಹಾಕಿ ಪಂದ್ಯ

Published On :

ಮಡಿಕೇರಿ: ಕೊಡವ ಕೌಟುಂಬಿಕ 17ನೇ ವರ್ಷದ ಹಾಕಿ ಉತ್ಸವ ಏಪ್ರಿಲ್ 20ರಿಂದ 1 ತಿಂಗಳ ಕಾಲ ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಲಿದೆ. ಈ ಬಾರಿಯ ಪ್ರಾಯೋಜಕತ್ವವನ್ನು ತಾತಂಡ ಕುಟುಂಬ  ವಹಿಸಿಕೊಂಡಿದೆ.
ತಾತಂಡ ಕುಟುಂಬಸ್ಥರ ಪರವಾಗಿ ವಿರಾಜಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಕಿ ನಮ್ಮೆಯ ನಿರ್ದೇಶಕ ತಾತಂಡ ಪ್ರತಾಪ್ ಬೆಳ್ಳಿಯಪ್ಪ, 'ಏ.20ರಂದು ಪ್ರಾರಂಭವಾಗಲಿರುವ ಹಾಕಿ ಉತ್ಸವಕ್ಕೆ ಎಲ್ಲ  ಪೂರ್ವ ಸಿದ್ಧತೆ ಭರದಿಂದ ಸಾಗುತ್ತಿದೆ. ಉತ್ಸವದ ಅಂಗವಾಗಿ ಶನಿವಾರ ಸಂಜೆ ಬೆಂಗಳೂರಿನ ಶಾಂತಿನಗರದ ಅಕ್ಕಿತಿಮ್ಮನ ಹಳ್ಳಿಯಲ್ಲಿರುವ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಲಿದೆ. ಇದರ ಅಂಗವಾಗಿ ಪ್ರದರ್ಶನ ಹಾಕಿ ಪಂದ್ಯ ಏರ್ಪಡಿಸಲಾಗಿದೆ' ಎಂದು ಹೇಳಿದರು. ಪ್ರಮುಖರಾದ ಚೆಪ್ಪುಡಿರ ತಿಲಕ್ ಸುಬ್ಬಯ್ಯ, ಕೊಡವ ಹಾಕಿ ಉತ್ಸವದ ಜನಕ ಪಾಂಡಂಡ ಎಂ. ಕುಟ್ಟಪ್ಪ, ಅಂತಾರಾಷ್ಟ್ರೀಯ ಹಾಕಿಪಟು, ಪ್ರಸ್ತುತ ಹಾಕಿ ಇಂಡಿಯಾ ಅಧ್ಯಕ್ಷ ಅಂಜಪರಂಡ ಬಿ. ಸುಬ್ಬಯ್ಯ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದು ತಾತಂಡ ಪ್ರತಾಪ್ ತಿಳಿಸಿದರು. ದಿನ ನಿತ್ಯದ ಪಂದ್ಯಾವಳಿಗಳನ್ನು ನಿಯಂತ್ರಿಸಲು ಜಿಲ್ಲಾ ಹಾಕಿ ತೀರ್ಪುಗಾರರ ಸಹಕಾರ ಈಗಾಗಲೇ ಕೋರಲಾಗಿದೆ ಹಾಗೂ ಬಲಿಷ್ಠವಾದ ತಾಂತ್ರಿಕ ಸಮಿತಿಯೊಂದು ಪಂದ್ಯಕ್ಕಾಗಿ ನಿಯಂತ್ರಿಸಲಾಗುತ್ತದೆ. ಈ ವರ್ಷದ ಹಾಕಿ ಉತ್ಸವಕ್ಕೆ ಸುಮಾರು ರು. 65 ಲಕ್ಷ ಖರ್ಚಾಗಲಿದ್ದು, ಸರ್ಕಾರದಿಂದ ಈಗಾಗಲೇ ರು. 30 ಲಕ್ಷ ಮಂಜೂರಾಗಿದೆ. ಉಳಿದ ಹಣ ಪ್ರಾಯೋಜಕರಿಂದ ಹಾಗೂ ದಾನಿಗಳಿಂದ ಸಂಗ್ರಹಿಸಲಾಗುವುದು ಎಂದು ತಾತಂಡ ಪ್ರತಾಪ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.