ಕ್ರೀಡೆ

ಏಷ್ಯನ್ ಗೇಮ್ಸ್ ತರಬೇತಿಗೆ ಸುನೀಲ್ ಛೆಟ್ರಿ

Published On :

ನವದೆಹಲಿ: ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಸೇರಿದಂತೆ ಒಟ್ಟು ಐವರು ಆಟಗಾರರು ಮಾತ್ರ ಇಂಚಾನ್ ಏಷ್ಯನ್ ಗೇಮ್ಸ್‌ಗಾಗಿ ನಡೆಯಲಿರುವ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ತಂಡದಲ್ಲಿನ ಉಳಿದ ಆಟಗಾರರು 23 ವರ್ಷದೊಳಗಿನವರಾಗಿರುತ್ತಾರೆ.
ಏಷ್ಯನ್ ಗೇಮ್ಸ್ ಇಂಚಾನ್‌ನಲ್ಲಿ ಈ ಸಾಲಿನ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿದೆ. ಇದಕ್ಕಾಗಿ ಪೂರ್ವಭಾವಿ ತಯಾರಿ ನಡೆಸಲು ಆಯೋಜಿಸಲಾಗಿರುವ ತರಬೇತಿ ಶಿಬಿರಕ್ಕಾಗಿ, ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ವಿಮ್ ಕೊವರ್ಮನ್ಸ್ ಅವರು ಹಿರಿಯ ಆಟಗಾರರ ಪೈಕಿ ಸುನೀಲ್ ಛೆಟ್ರಿ ಹೊರತಾಗಿ ಫ್ರಾನ್ಸಿಸ್ ಫರ್ನಾಂಡೀಸ್, ರಾಬಿನ್ ಸಿಂಗ್, ಬಲ್ವಂತ್ ಸಿಂಗ್ ಮತ್ತು ವಿಕ್ಟೊರಿನೊ ಫರ್ನಾಂಡಿಸ್ ಅವರನ್ನಷ್ಟೇ ಆಯ್ಕೆ ಮಾಡಿದ್ದಾರೆ.
ಏಷ್ಯನ್ ಗೇಮ್ಸ್ ನಿಯಮದ ಪ್ರಕಾರ ಈ ಐವರು ಹಿರಿಯ ಆಟಗಾರರ ಪೈಕಿ ಮೂವರು ಮಾತ್ರ ಭಾರತ ತಂಡದಲ್ಲಿರಬೇಕಾಗುತ್ತದೆ. ಉಳಿದ ಆಟಗಾರರು 23 ವರ್ಷದೊಳಗಿನವರಾಗಿರಬೇಕಾಗುತ್ತದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ಎಐಎಫ್‌ಎಫ್ ಅಕಾಡೆಮಿಗಳ ತಾಂತ್ರಿಕ ನಿರ್ದೇಶಕರು, ತರಬೇತಿ ಶಿಕ್ಷಣದ ನಿರ್ದೇಶಕರೂ ಆಗಿರುವ ಸ್ಕಾಟ್ ಓಡೊನೆಲ್ ಅವರು ಏಷ್ಯನ್ ಗೇಮ್ಸ್ ವೇಳೆ ಕೊವರ್ಮನ್ಸ್ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.