ಮ್ಯಾಕ್ಸ್ವೆಲ್ ಸ್ಫೋಟಕ ಬ್ಯಾಟ್ಸ್ಮನ್: ವೀರೂ
ಕಟಕ್: ಭಾರತದ ಸ್ಫೋಟಕ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್, ಕಿಂಗ್ಸ್ ಇಲೆವೆನ್ ತಂಡದ ಸಹ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಶೈಲಿಯನ್ನು ಹೊಗಳಿದ್ದಾರೆ. ಮ್ಯಾಕ್ಸ್ವೆಲ್ ಅವರು ನನಗಿಂತ ಹಾಗೂ ವಿಂಡೀಸ್ನ ಕ್ರಿಸ್ ಗೇಯ್ಲ್ಗಿಂತ ಸ್ಫೋಟಕ ಬ್ಯಾಟ್ಸ್ಮನ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಆವೃತ್ತಿಯಲ್ಲಿ ಮ್ಯಾಕ್ಸ್ವೆಲ್ ಮೂರು ಬಾರಿ 90ಕ್ಕೂ ಹೆಚ್ಚಿನ ರನ್ ದಾಖಲಿಸಿದ್ದು, ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಎಂದು ಸಾಬೀತುಪಡಿಸಿದ್ದಾರೆ. ಇನ್ನು ಮ್ಯಾಕ್ಸ್ವೆಲ್ ಬ್ಯಾಟಿಂಗ್ ನೋಡಿದರೆ ತಮ್ಮ ಹಳೆಯ ದಿನಗಳು ನೆನಪಿಗೆ ಬರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, ಇಲ್ಲ ನಾನು ಈ ಮಟ್ಟದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಸ್ವಲ್ಪ ಪ್ರಮಾಣದಲ್ಲಿನಾನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದೆ ಅಷ್ಟೇ ಎಂದು ತಿಳಿಸಿದರು. ಮ್ಯಾಕ್ಸ್ವೆಲ್ ತನ್ನ ಆಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಗಾಲ್ಫ್ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಕ್ರಿಕೆಟ್ಗಿಂತ ಹೆಚ್ಚಾಗಿ ಗಾಲ್ಫ್ ಅಭ್ಯಾಸ ನಡೆಸುತ್ತಾರೆ. ಕಣಕ್ಕೆ ಆಗಮಿಸಿದ ನಂತರ ಮ್ಯಾಕ್ಸ್ವೆಲ್, ನೂರರಷ್ಟು ಪರಿಶ್ರಮ ಹಾಕುತ್ತಾರೆ. ನಂತರ ತಾವು ಗಳಿಸಿದ ರನ್ಗೆ ತೃಪ್ತಿ ಹೊಂದಿ ಪೆವಿಲಿಯನ್ನತ್ತ ಸಂತಸದಿಂದ ಹೆಜ್ಜೆ ಹಾಕುತ್ತಾರೆ ಎಂದು ಸೆಹ್ವಾಗ್ ವಿವರಿಸಿದರು.
ಮ್ಯಾಕ್ಸ್ವೆಲ್, ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಯ್ಲ್ ಅವರಿಗಿಂತಲೂ ಸ್ಫೋಟಕ ಬ್ಯಾಟ್ಸ್ಮನ್ ಎಂದು ತಿಳಿಸಿದ್ದಾರೆ. ಮ್ಯಾಕ್ಸ್ವೆಲ್ ಹಾಗೂ ಡೇವಿಡ್ ಮಿಲ್ಲರ್ ಒಟ್ಟಾಗಿ ನಿಂತರೆ, ಬೌಲಿಂಗ್ ಮಾಡುವುದು ಕಷ್ಟ. ಏಕೆಂದರೆ ಒರ್ವ ಚೆಂಡನ್ನು ಹೊಡೆಯಲು ವಿಫಲವಾದರೆ ಮತ್ತೋರ್ವ ಚೆಂಡನ್ನು ಮೈದಾನದ ಆಚೆಗೆ ಹೊಡೆಯುತ್ತಾರೆ ಎಂದು ಐಪಿಎಲ್ ವೆಬ್ಸೈಟ್ನಲ್ಲಿ ತಿಳಿಸಿದ್ದಾರೆ. ಇನ್ನು ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಸೆಹ್ವಾಗ್, ನನ್ನಿಂದ ಇನ್ನು ಅತ್ಯುತ್ತಮ ಇನಿಂಗ್ಸ್ ಬಂದಿಲ್ಲ. ನಾನು ಚೆಂಡನ್ನು ಉತ್ತಮ ರೀತಿಯಲ್ಲಿ ಹೊಡೆಯುತ್ತಿದ್ದೇನೆ. ಅಲ್ಲದೆ ತಂಡಕ್ಕೆ ಉತ್ತಮ ರೀತಿಯಲ್ಲಿ ಕಾಣಿಕೆ ನೀಡಲು ಇಚ್ಛಿಸುತ್ತೇನೆ. ಮುಂಬರುವ ಪಂದ್ಯಗಳಲ್ಲಿ ನಾನು ಮತ್ತಷ್ಟು ಎಚ್ಚರಿಕೆಯ ಆಟ ಪ್ರದರ್ಶಿಸುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

