ಕ್ರೀಡೆ

ಪಳಂಗಂಡ, ಅಪ್ಪಚೀರ ಮುನ್ನಡೆ

Published On :

ವಿರಾಜಪೇಟೆ: ಮಳೆಯಿಂದಾಗಿ ಕಳೆದೆರಡು ದಿನಗಳಿಂದ ರದ್ದುಗೊಂಡಿದ್ದ ತಾತಂಡ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಅಪ್ಪಚೀರ, ಪಳಂಗಂಡ ಮತ್ತು ಅಂಜಪರವಂಡ ತಂಡಗಳ ಸಹಿತ 12 ತಂಡಗಳು ಮುನ್ನಡೆ ಸಾಧಿಸಿದವು.
ಮೈದಾನ 1ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸೆಣೆಸಾಡಿದ ಮುಕ್ಕಾಟೀರ ಮತ್ತು ಅಪ್ಪಚೀರ ತಂಡಗಳು ಸತತ 2 ದಿನಗಳಿಂದ ಮಳೆಯಿಂದಾಗಿ ಬೇಸತ್ತಿದ್ದ ಪ್ರೇಕ್ಷಕರಿಗೆ ರಸದೌತಣ ನೀಡಿದವು. ಏಕೈಕ ಗೋಲಿನಿಂದ ಅಪ್ಪಚೀರ ತಂಡವು 1-0 ಗೋಲಿನಿಂದ ಮುಕ್ಕಾಟೀರ ತಂಡವನ್ನು ಸೋಲಿಸಿತು.   2ನೇ ಪಂದ್ಯದಲ್ಲಿ ಕಂಬಿರಂಡ ತಂಡವು ಚೆರಿಯಂಡ ತಂಡವನ್ನು ಭರ್ಜರಿ 4-0 ಗೋಲುಗಳಿಂದ ಮಣಿಸಿತು. ಕಂಬಿರಂಡ ತಂಡ ಪರವಾಗಿ ನಂಜಪ್ಪ, ಮಿಥನ್ ತಲಾ 1 ಗೋಲು ದಾಖಲಿಸಿದರೆ, ಯೋಗೇಶ್ 2 ಗೋಲು ದಾಖಲಿಸಿದರು.
ಮೂರನೇ ಪಂದ್ಯದಲ್ಲಿ ಪೂತಂಡ ತಂಡವು ಬಲಿಷ್ಠ ಮುರುವಂಡ ತಂಡವನ್ನು 6-1 ಗೋಲುಗಳಿಂದ ಮಣಿಸಿತು. ಪೂತಂಡ ಪರವಾಗಿ ಬೋಪಣ್ಣ, ಪೂಣಚ್ಚ, ಸ್ವರೂಪ್ ಹಾಗೂ ಸಂತೋಷ್ ತಲಾ 1 ಗೋಲು ದಾಖಲಿಸಿದರೆ, ಸೋಮಣ್ಣ 2 ಗೋಲು ದಾಖಲಿಸಿದರು. ಮುರುವಂಡ ಪರ ಅಪ್ಪಣ್ಣ ಏಕೈಕ ಗೋಲು ಹೊಡೆದರು.
4ನೇ ಪಂದ್ಯದಲ್ಲಿ ತುಂಬುಕುಚ್ಚೀರ ತಂಡವು ಮೂಕಳೇರ ತಂಡವನ್ನು 1-0 ಗೋಲುಗಳಿಂದ ನಿರಾಯಾಸವಾಗಿ ಸೋಲಿಸಿತು. ತುಂಬುಕುಚ್ಚೀರ ಪರ ಪ್ರಕಾಶ್ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು.
5ನೇ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ಕಾಯಪಂಡ ತಂಡವನ್ನು ಭರ್ಜರಿ 3- 0 ಗೋಲುಗಳಿಂದ ಮಣಿಸಿತು. ಕೋಡಿಮಣಿಯಂಡ ಪರವಾಗಿ ಶರಣ್ 1, ಮಾಚಯ್ಯ 2 ಗೋಲು ದಾಖಲಿಸಿದರು.
6ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಮಂಡೇಟೀರ ಮತ್ತು ಸೋಮೆಯಂಡ ತಂಡಗಳು ಪರಸ್ಪರ ತೀವ್ರ ಪೈಪೋಟಿ ನೀಡಿದವು. ಅಂತಿಮವಾಗಿ ಮಂಡೇಟಿರ ತಂಡದ ನೇಹಲ್ 1 ಗೋಲು ಬಾರಿಸುವ ಮೂಲಕ ಸೋಮೆಯಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು.
2ನೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಬಾಲೆಕಂಡ ತಂಡವನ್ನು ಅಂಜಪರವಂಡ ತಂಡವು 5-0 ಗೋಲುಗಳಿಂದ ಮಣಿಸಿತು. ಅಂಜಪರವಂಡ ಪರ ದೀಪಕ್, ಕಾರ್ಯಪ್ಪ, ರಂಜನ್, ತಿಪ್ಪಿಯಪ್ಪ ಹಾಗೂ ತಿಮ್ಮಯ್ಯ ತಲಾ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
2ನೇ ಪಂದ್ಯದಲ್ಲಿ ಅರೆಯಡ ತಂಡವು ಬಾರಿಯಂಡ ತಂಡವನ್ನು 4-1 ಗೋಲುಗಳಿಂದ ಮಣಿಸಿತು. ಅರೆಯಡ ಪರವಾಗಿ ಬೋಪಯ್ಯ ಮತ್ತು ಪೆಮ್ಮಯ್ಯ ತಲಾ 1 ಗೋಲು ದಾಖಲಿಸಿದರೆ, ಚಿನ್ನಪ್ಪ 2 ಗೋಲು ದಾಖಲಿಸಿದರು. ಬಾರಿಯಂಡ ಪರ ಪೂಣಚ್ಚ 1 ಗೋಲು ದಾಖಲಿಸಿದರು.  3ನೇ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಅಮ್ಮಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಕುಲ್ಲೇಟಿರ ಪರವಾಗಿ ನಂದನ್ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು.  4ನೇ ಪಂದ್ಯದಲ್ಲಿ ಕಲಿಯಂಡ ತಂಡವು ಪೊನ್ನೋಲತಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಲಿಯಂಡ ಪರ ಕಿರಣ್ 2 ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಮೂರು ಬಾರಿ ಕೊಡವ ಹಾಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಬಲಿಷ್ಠ ಪಳಂಗಂಡ ತಂಡವು ತೀತಿಮಾಡ ತಂಡವನ್ನು 2-0 ಗೋಲುಗಳಿಂದ ಮಣಿಸಿ ಮುಂದಿನ ಸುತ್ತಿಗೆ ಮುನ್ನಡೆ ಪಡೆಯಿತು. ಪಳಂಗಂಡ ಪರವಾಗಿ ಉತ್ತಮ ಆಟಗಾರರಾದ ಮುತ್ತಣ್ಣ ಮತ್ತು ಚಂಗಪ್ಪ ತಲಾ 1 ಗೋಲು ದಾಖಲಿಸಿದರು.
6ನೇ ಪಂದ್ಯದಲ್ಲಿ ಇತ್ತೀರ ಮತ್ತು ಅಳೆಮಾಡ ತಂಡ ತೀವ್ರ ಪೈಪೋಟಿ ನೀಡಿದವು. ಅಂತಿಮವಾಗಿ ಅಳೆಮಾಡ ತಂಡ ಒಂದೇ ಒಂದು ಗೋಲು ದಾಖಲಿಸದೆ ಇತ್ತೀರ ತಂಡಕ್ಕೆ 5-0 ಗೋಲುಗಳಿಗೆ ಶರಣಾಯಿತು. ಇತ್ತೀರ ತಂಡದ ಪರವಾಗಿ ರಕ್ಷಿತ್ 2 ಗೋಲು, ಅಚ್ಚಪ್ಪ, ಕುಟ್ಟಪ್ಪ ಹಾಗೂ ಟಿಚ್ಚಿಯಪ್ಪ ತಲಾ 1 ಗೋಲು ಬಾರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.