ಪ್ರಶಸ್ತಿ ಗೆದ್ದ ಹುಬ್ಬಳ್ಳಿ ಯಂಗ್ ಸ್ಟಾರ್
ಬೆಳಗಾವಿ: ಬೆಳಗಾವಿ ಜಿಲ್ಲಾ ಹಾಕಿ ಅಸೋಸಿಯೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಹುಬ್ಬಳ್ಳಿ ಯಂಗ್ ಸ್ಟಾರ್ ತಂಡ ಅಂತಿಮ ಪಂದ್ಯದಲ್ಲಿ ಗುಲ್ಬರ್ಗ ತಂಡವನ್ನು 4-1 ಗೋಲುಗಳಿಂದ ಪರಾಭವಗೊಳಿಸಿ ಲೋಕಮಾನ್ಯ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಅಂತಿಮ ಪಂದ್ಯ ಬಹುತೇಕ ಏಕಪಕ್ಷೀಯವಾಗಿತ್ತು. ಬಲಾಢ್ಯ ಹುಬ್ಬಳ್ಳಿ ಯಂಗ್ ಸ್ಟಾರ್ ತಂಡ ಆರಂಭದಿಂದ ಕೊನೆಯವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಲ್ಲದೇ ಅಂತಿಮವಾಗಿ 4-1 ಗೋಲುಗಳ ಅಂತರದ ಜಯ ದಾಖಿಲಿಸಿ ರು. 15 ಸಾವಿರ ಬಹುಮಾನವನ್ನು ಗೆದ್ದುಕೊಂಡಿತು. ರನ್ನರ್ ಅಫ್ ಆದ ಗುಲ್ಬರ್ಗ ತಂಡಕ್ಕೆ 10 ಸಾವಿರ ಬಹುಮಾನ ನೀಡಲಾಯಿತು.
ಹುಬ್ಬಳ್ಳಿಯ ಯಂಗ್ ಸ್ಟಾರ್ ತಂಡ ಮನು ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಲ್ಲದೇ ಸಾವಿರ ರುಪಾಯಿ ನಗದು ಬಹುಮಾನ ಗಳಿಸಿದರು. ಪಂದ್ಯಾವಳಿಯ ಅತ್ಯುತ್ತಮ ತಂಡ ಪ್ರಶಸ್ತಿ ಬೆಳಗಾವಿ ಜಿಲ್ಲಾ ಹಾಕಿ ಅಸೋಸಿಯೇಶನ್ ತಂಡಕ್ಕೆ ಲಭಿಸಿತು.
ಯಂಗ್ ಸ್ಟಾರ್ ತಂಡದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಮೊದಲಾರ್ಧದಲ್ಲಿ ಹುಬ್ಬಳ್ಳಿ ತಂಡದ ನವೀನ್ ಎಂ. (10ನೇ ನಿಮಿಷ), ವಿನಾಯಕ ಗಿಜವಾಡ 2 (15, 19 ನೇ ನಿಮಿಷ) ಗೋಲು ಬಾರಿಸಿದ್ದರೆ, ದ್ವಿತೀಯಾರ್ಧದಲ್ಲಿ ಸುನೀಲ 1 (24ನೇ ನಿಮಿಷ) ಮತ್ತೊಂದು ಗೋಲು ಹಾಕಿದರು. ಗುಲ್ಬರ್ಗಾ ತಂಡದ ಪರವಾಗಿ ಏಕೈಕ ಗೋಲನ್ನು ತಂಡದ ನಾಯಕ ನಾಗೇಂದ್ರ ದ್ವಿತೀಯಾರ್ಧದ 25 ನೇ ನಿಮಿಷದಲ್ಲಿ ಗಳಿಸಿದರು.
ಗುಲ್ಬರ್ಗ ತಂಡದ ಗೋಲ್‌ಕೀಪರ್ ಬಸವರಾಜ್ ಹಾಗೂ ಹುಬ್ಬಳ್ಳಿ ತಂಡದ ವಾಸುಗೆ ಉತ್ತಮ ಆಟಗಾರ ಪ್ರಶಸ್ತಿ ನೀಡಲಾಯಿತು.
ಬೆಳಗಾವಿಗೆ ಮೂರನೇ ಸ್ಥಾನ: ಬೆಳಗಾವಿ ಜಿಲ್ಲಾ ಹಾಕಿ ಅಸೋಸಿಯೇಶನ್ ತಂಡವು ಹುಬ್ಬಳ್ಳಿಯ ವಾಸು ಸ್ಫೋರ್ಟ್ಸ್ ಕ್ಲಬ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಮೂರನೇ ಸ್ಥಾನ ಗಳಿಸಿತಲ್ಲದೇ ರು. 7500 ಬಹುಮಾನವನ್ನು ತನ್ನದಾಗಿಸಿಕೊಂಡಿತು.
3, 4ನೇ ಸ್ಥಾನ ನಿರ್ಧರಿಸುವುದಕ್ಕಾಗಿ ಮಧ್ಯಾಹ್ನ ನಡೆದ ಪಂದ್ಯದಲ್ಲಿ ಬೆಳಗಾವಿ ತಂಡ ಹುಬ್ಬಳ್ಳಿ ವಾಸು ಸ್ಫೋರ್ಟ್ಸ್ ಕ್ಲಬ್ ತಂಡವನ್ನು ರೋಚಕವಾಗಿ 3-2 ಗೋಲುಗಳಿಂದ ಪರಾಭವಗೊಳಿಸಿತು.
ಬೆಳಗಾವಿ ತಂಡದ ಮುಜಮಿಲ್ 1(1 ನಿಮಿಷ), ತೌಶಿಫ್ ಗೋರಿಖಾನ್ 1(11 ನಿಮಿಷ), ಹೇಮಂತ 1(45 ನಿಮಿಷ) ಹಾಗೂ ಹುಬ್ಬಳ್ಳಿಯ ವಾಸು ತಂಡದ ರಾಕೇಶ 1(15 ನಿಮಿಷ), ಸಂತೋಶ ಎಂ 1(17 ನಿಮಿಷ)ದಲ್ಲಿ ಗೋಲು ಹಾಕಿದರು. ಬೆಳಗಾವಿ ತಂಡದ ಹಿದಾಯತ್ ಮತ್ತು ಹುಬ್ಬಳ್ಳಿಯ ವಾಸು ತಂಡ ರಾಕೇಶಗೆ ಉತ್ತಮ ಆಟಗಾರ ಪ್ರಶಸ್ತಿ ನೀಡಿದರು. ವಾಸು ಸ್ಫೋರ್ಟ್ಸ್ ಕ್ಲಬ್ ತಂಡಕ್ಕೆ ರು. 5 ಸಾವಿರದ ಬಹುಮಾನ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

