ಬೆಳ್ಳಿ ಗೆದ್ದ ವಿಕಾಸ್ ಗೌಡ
ನವದೆಹಲಿ: ಖ್ಯಾತ ಡಿಸ್ಕಸ್ ಎಸೆತಗಾರ ಕರ್ನಾಟಕದ ವಿಕಾಸ್ ಗೌಡ ಅವರು ಶುಕ್ರವಾರ ದೋಹಾದಲ್ಲಿ ನಡೆದ ಐಎಎಎಫ್ ಡೈಮಂಡ್ ಲೀಗ್ ಸರಣಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
63.23 ಮೀಟರ್ ದೂರ ಡಿಸ್ಕಸ್ ಎಸೆದ ವಿಕಾಸ್ ಗೌಡ ಅವರು ದ್ವಿತೀಯ ಸ್ಥಾನ ಪಡೆದರೆ, 66.72 ಮೀಟರ್ ದೂರ ಎಸೆದ ಪೊಲೆಂಡ್ನ ಪಿಯೋಟ್ರ ಮಲಾಚೌಸ್ಕಿ ಅವರು ಮೊದಲ ಸ್ಥಾನ ಪಡೆದುಕೊಂಡರು ಎಂದು ದೆಹಲಿಗೆ ಬಂದ ಮಾತಿಯಿಂದ ತಿಳಿದು ಬಂದಿದೆ.
ಇನ್ನು 62.90 ಮೀಟರ್ ದೂರ ಎಸೆದ ಎಸ್ಟೋನಿಯಾದ ಗೆರ್ಡ್ ಕಂಟರ್ ಅವರು ಕಂಚಿನ ಪದಕ ಗೆದ್ದುಕೊಂಡರು. ಮೈಸೂರು ಮೂಲದ ವಿಕಾಸ್ ಅವರು 2010ರ ದೆಹಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ವಿಕಾಸ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 66.90 ಮೀಟರ್ ಆಗಿದೆ. ಅಲ್ಲದೆ, 2013ರಲ್ಲಿ ದಾಖಲಾದ ರಾಷ್ಟ್ರೀಯ ದಾಖಲೆಯೂ ಇದಾಗಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತದ ಯುವ ಓಟಗಾರ್ತಿ ಟಿಂಟು ಲೂಕಾ ಅವರು 800 ಮೀಟರ್ ವಿಭಾಗದಲ್ಲಿ 2:00:56 ಅವಧಿಯಲ್ಲಿ ಗುರಿ ಸೇರುವ ಮೂಲಕ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ 1:59:33 ಅವಧಿಯಲ್ಲಿ ಗುರಿ ಸೇರಿದ ಕೀನ್ಯಾದ ಎನಿಸ್ ಜೆಪ್ಕೋಚ್ ಸಮ್ ಅವರು ಚಿನ್ನದ ಪದಕ ಗೆದ್ದುಕೊಂಡರು.
1:59:75 ಅವಧಿಯಲ್ಲಿ ಗುರಿ ಸೇರಿದ ಅಮೆರಿಕದ ಚಾನೆಲ್ಲೆ ಪ್ರೈಸ್ ಅವರು ಈ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರೆ, 2:00:20 ಅವಧಿಯಲ್ಲಿ ಗುರಿ ಸೇರಿದ ಜೆಕೋಸ್ಲೋವಾಕಿಯಾದ ಲೆಂಕಾ ಮಸ್ನಾ ಅವರು ಕಂಚಿನ ಪದಕ ಗೆದ್ದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

