ಐಪಿಟಿಎಲ್ ಆರಂಭಿಕ ಹಂತ ಮನಿಲಾಗೆ
ಮನಿಲಾ: ಭಾರತದ ಹಿರಿಯ ಟೆನಿಸ್ ತಾರೆ ಮಹೇಶ್ ಭೂಪತಿ ಅವರ ಕನಸಿನ ಕೂಸು ಅಂತಾರಾಷ್ಟ್ರೀಯ ಪ್ರಿಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಆರಂಭಿಕ ಹಂತ ಬ್ಯಾಂಕಾಕ್ನಿಂದ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾಗೆ ಸ್ಥಳಾಂತರವಾಗಿದೆ. ವಿಶ್ವ ದರ್ಜೆಯ ಟೆನಿಸ್ ಪಂದ್ಯವನ್ನು ಹೊಸ ವಿಕ್ಷಕರಿಗೆ ತಲುಪಿಸುವುದು ಐಪಿಟಿಎಲ್ನ ಪ್ರಮುಖ ಉದ್ದೇಶವಾಗಿದೆ. ಹಾಗಾಗಿ ಐಪಿಟಿಎಲ್ನ ಏಷ್ಯಾದ ಮೊದಲ ಹಂತದ ಪಂದ್ಯಾವಳಿಯನ್ನು ಮನಿಲಾದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ ಎಂದು ಮಹೇಶ್ ಭೂಪತಿ ತಿಳಿಸಿದ್ದಾರೆ.
ಬ್ಯಾಂಕಾಕ್ನಲ್ಲಿ ರಾಜಕೀಯ ಗೊಂದಲಗಳ ಕಾರಣದಿಂದ ಅಲ್ಲಿನ ಫ್ರಾಂಚೈಸಿ ಹೊರತಾಗಿ, ಮತ್ತೊಂದು ನಗರದಲ್ಲಿ ಈ ಹಂತದ ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆವು. ಹಾಗಾಗಿ ಮನಿಲಾ ಈ ಹಂತವನ್ನು ಆಯೋಜಿಸಲು ಉತ್ತಮ ವೇದಿಕೆಯಾಗಿದೆ. ಇಲ್ಲಿನ ವ್ಯವಸ್ಥಿತ ಒಳಾಂಗಣ ಕ್ರೀಡಾಂಗಣವಿದ್ದು, ಸುಮಾರು 20ಸಾವಿರ ಪ್ರೇಕ್ಷಕರು ಆಗಮಿಸುವ ಅವಕಾಶವಿದೆ. ಈ ನಗರದಲ್ಲಿ ಕಳೆದ 20 ವರ್ಷಗಳಿಂದ ವೃತ್ತಿಪರ ಟೆನಿಸ್ ಕಂಡಿಲ್ಲ. ಹಾಗಾಗಿ ಪಂದ್ಯಾವಳಿಯನ್ನು ನಡೆಸಲು ಉತ್ತಮ ವೇದಿಕೆಯಾಗಿದೆ ಎಂದು ಭೂಪತಿ ತಿಳಿಸಿದರು.
ಈ ಪಂದ್ಯಾವಳಿಯ ಮೂಲಕ ವಿಶ್ವದರ್ಜೆಯ ಟೆನಿಸ್ ಪಂದ್ಯಾವಳಿಯನ್ನು ಹಾಗೂ ಎನ್ಬಿಎ ಮಾದರಿಯ ಮನರಂಜನೆಯನ್ನು ಸೇರಿಸಿ ಅಭಿಮಾನಿಗಳಿಗೆ ನೀಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

