ಕ್ರೀಡೆ

ಮೊದಲ ಪಂದ್ಯ ಮಹತ್ವದ್ದಾಗಿದೆ: ಡೀಗೊ ಲುಗಾನೊ

Published On :

ಮೊಂಟೆವಿಡಿಯೊ: ಮುಂಬರುವ ಪ್ರತಿಷ್ಠಿತ ಫೀಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಉರುಗ್ವೆ ತಂಡ ತನ್ನ ಮೊದಲ ಪಂದ್ಯದಲ್ಲಿ ಕೊಸ್ಟಾ ರಿಕಾ ವಿರುದ್ಧ ಆಡಲಿದ್ದು, ಈ ಪಂದ್ಯ ಹೆಚ್ಚು ಮಹತ್ವದ್ದಾಗಿದೆ ಎಂದು ಉರುಗ್ವೆ ತಂಡದ ನಾಯಕ ಡೀಗೊ ಲುಗಾನೊ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಅಭ್ಯಾಸ ನಡೆಸಿ ಮಾತನಾಡಿದ ಡೀಗೊ ಲುಗಾನೊ, ಉರುಗ್ವೆ ತಂಡ ಪಂದ್ಯಾವಳಿಯಲ್ಲಿ ಡಿ ಗುಂಪಿನಲ್ಲಿ ಭಾಗವಹಿಸುತ್ತಿದ್ದು, ಆರಂಭಿಕ ಪಂದ್ಯದ ಫಲಿತಾಂಶ ತಂಡ ಪಂದ್ಯಾವಳಿಯಲ್ಲಿ ತಂಡದ ಪ್ರದರ್ಶನದ ಮೇಲೆ ಪ್ರಭಾವ ಬೀರಲಿದೆ. ನಮಗೆ ಹಾಗೂ ಎದುರಾಳಿ ತಂಡಕ್ಕೆ ಮೊದಲ ಪಂದ್ಯ ಯಾವಾಗಲು ಕಠಿಣವಾಗಿರುತ್ತದೆ. ಹಾಗಾಗಿ ಈ ಪಂದ್ಯದ ಫಲಿತಾಂಶ ಪ್ರಮುಖವಾಗಲಿದೆ ಎಂದರು.
ಮೊದಲ ಪಂದ್ಯದಲ್ಲಿ ಉತ್ತಮ ಫಲಿತಾಂಶ ದೊರಕಿದರೆ, ಅದು ತಂಡದ ಆಟಗಾರರಲ್ಲಿ ಉತ್ತಮ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ಈ ಪಂದ್ಯದ ಬಗ್ಗೆ ನಾವು ಕಳೆದ ಕೆಲವು ತಿಂಗಳುಗಳಿಂದ ಚರ್ಚಿಸುತ್ತಿದ್ದೇವೆ ಎಂದು ಹೇಳಿದರು.
ಇನ್ನು ಡಿ ಗುಂಪಿನಲ್ಲಿ ಇಂಗ್ಲೆಂಡ್ ತಂಡ ಪ್ರಬಲ ಎದುರಾಳಿ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಲುಗಾನೊ ಆ ತಂಡವನ್ನು ಮಣಿಸುವುದು ಸವಾಲಿನ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.