ಕ್ರೀಡೆ

ಎಫ್1 ದಂತಕತೆ ಸರ್ ಜಾಕ್ ಬ್ರಭಮ್ ನಿಧನ

ಎಫ್1 ದಂತಕತೆ ಸರ್ ಜಾಕ್ ಬ್ರಭಮ್ ನಿಧನ
Published On :

ಸಿಡ್ನಿ: ಫಾರ್ಮುಲಾ ಒನ್ ರೇಸ್‌ನ ಮಾಜಿ ವಿಶ್ವ ಚಾಂಪಿಯನ್ ಮತ್ತು ಶ್ರೇಷ್ಠ ಚಾಲಕ ಹಾಗೂ ತಂಡದ ಮಾಲೀಕರಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಸರ್ ಜಾಕ್ ಬ್ರಭಮ್ ಸೋಮವಾರ ವಿಧಿವಶರಾಗಿದ್ದಾರೆ.
ಸುದೀರ್ಘ ಕಾಲ ಅನಾರೋಗ್ಯದಿಂದ ಬಳಲುತಿದ್ದ ಬ್ರಭಮ್, ತಮ್ಮ 88ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.
ಬ್ರಭಮ್ ಮೂರು ಬಾರಿ ವರ್ಲ್ಡ್ ಡ್ರೈವರ್ ಚಾಂಪಿಯನ್‌ಶಿಪ್‌ನಲ್ಲಿ ಗೆಲವು ದಾಖಲಿಸಿದ್ದರು. ಅಲ್ಲದೆ ತಾವೇ ತಯಾರಿಸಿದ ಕಾರಿನಲ್ಲಿ ಪ್ರಶಸ್ತಿ ಗೆದ್ದ ಏಕೈಕ ವ್ಯಕ್ತಿ ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.
ಜಾಕ್, ವರ್ಲ್ಡ್ ಡ್ರೈವರ್ ಚಾಂಪಿಯನ್‌ಶಿಪ್ ಅನ್ನು 1959 ಮತ್ತು 1960ರಲ್ಲಿ ಕೂಪರ್ ರೇಸಿಂಗ್ ಟೀಮ್‌ನಲ್ಲಿ ಗೆಲವು ಸಾಧಿಸಿದರೆ, ನಂತರ 1966ರಲ್ಲಿ ತಾವೇ ತಯಾರಿಸಿದ ಕಾರಿನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರು.
ಕಾರ್ ರೇಸಿಂಗ್‌ನಲ್ಲಿ ಭಾಗವಹಿಸುವ ಯಾವುದೇ ಯುವ ಚಾಲಕನಿಗೂ ಜಾಕ್, ಸ್ಫೂರ್ತಿದಾಯಕವಾಗಿದ್ದಾರೆ. ಪ್ರತಿಯೊಬ್ಬರು ಇವರನ್ನು ನೋಡಿ ಅವರನ್ನು ಅನುಕರಿಸಬೇಕು ಎಂದು 1980ರ ಚಾಂಪಿಯನ್ ಆ್ಯಲನ್ ಜೋನ್ಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.