ಕ್ರೀಡೆ

ಕ್ವಾಲಿಫೈಯರ್ ಸನಿಹಕೆ ಪ್ರೀತಿಯ ಪಂಜಾಬ್

Published On :

ವನವದೆಹಲಿ: ಅಗ್ರ ಕ್ರಮಾಂಕದಲ್ಲಿ ನಮನ್ ವೋಹ್ರಾ ಮತ್ತು ಕೆಳ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್, ಸೋಮವಾರ ನಡೆದ 2ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ 4 ವಿಕೆಟ್ ಅಂತರದಿಂದ ಜಯ ಸಾಧಿಸಿತು.
ಇದರೊಂದಿಗೆ 18 ಅಂಕ ಗಳಿಸಿರುವ ಪಂಜಾಬ್ ಕ್ವಾಲಿಫೈಯರ್ ಹಂತಕ್ಕೆ ಬಹುತೇಕ ತನ್ನ ಸ್ಥಾನ ಖಚಿಪಡಿಸಿಕೊಂಡಿದ್ದರೆ, ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸತತ 7ನೇ ಪಂದ್ಯದಲ್ಲಿ ಸೋಲನುಭವಿಸಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಪಂಜಾಬ್ ತಂಡ ಡೇರ್‌ಡೇವಿಲ್ಸ್ ಅನ್ನು 164 ರನ್‌ಗಳಿಗೆ ನಿಯಂತ್ರಿಸಿತು.       ನಂತರ 165 ರನ್‌ಗಳ ಗುರಿ ಬೆನ್ನಟ್ಟುವ ಮೂಲಕ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ 165 ರನ್ ಕಲೆ ಹಾಕಿ ಜಯದ ಕೇಕೆ ಹಾಕಿತು. ನಮನ್ (42) ಮತ್ತು ಅಕ್ಷರ್ (ಅ. 42) ಪಂಜಾಬ್ ತಂಡದ ಜಯದ ರೂವಾರಿಗಳೆನಿಸಿದರು. ಕೇವಲ 19 ಎಸೆತಗಳನ್ನು ಎದುರಿಸಿದ ನಮನ್ ಮೊತ್ತದಲ್ಲಿ 3 ಸಿಕ್ಸರ್, 4 ಬೌಂಡರಿಗಳು ಸೇರಿದ್ದವು. ಇನ್ನು 35 ಎಸೆತಗಳನ್ನು ಎದುರಿಸಿದ ಅಕ್ಷರ್ ಮೊತ್ತದಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು. ಡೆಲ್ಲಿ ಪರ ಇಮ್ರಾನ್ ತಾಹೀರ್ 3 ವಿಕೆಟ್ ಪಡೆದರೆ, ಜೆ.ಪಿ ಡುಮಿನಿ 2 ಹಾಗೂ ಮೊಹ್ಮದ್ ಶಮಿ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಡೆಲ್ಲಿ, ದಿನೇಶ್ ಕಾರ್ತಿಕ್ (69) ಮತ್ತು ನಾಯಕ ಕೆವಿನ್ ಪೀಟರ್ಸನ್ (49) 2ನೇ ವಿಕೆಟ್‌ಗೆ 71 ರನ್‌ಗಳ ಜತೆಯಾಟ ನೀಡುವುದರೊಂದಿಗೆ 160 ರನ್‌ಗಳ ಗಡಿ ದಾಟಿತ್ತು.
ಪಂಜಾಬ್ ಪರ ಸಂದೀಪ್ ಶರ್ಮಾ ಮತ್ತು ಬಿ. ಹೆಂಡ್ರಿಕ್ಸ್ ತಲಾ 3 ವಿಕೆಟ್ ಪಡೆದರು.     ಪಂಜಾಬ್‌ನ  ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ
ಡೆಲ್ಲಿ ಡೇರ್‌ಡೆವಿಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 164
ಮುರಳಿ ವಿಜಯ್ ಸಿ ಹೆಂಡ್ರಿಕ್ಸ್ ಬಿ ಸಂದೀಪ್ 5 (8), ಕೆವಿನ್ ಪೀಟರ್ಸನ್ ಬಿ ಪಟೇಲ್ 49 (32), ದಿನೇಶ್ ಕಾರ್ತಿಕ್ ಸಿ ಧವನ್ ಬಿ ಹೆಂಡ್ರಿಕ್ಸ್ 39 (44), ಜೆಪಿ ಡುಮಿನಿ ಸಿ ಮ್ಯಾಕ್ಸ್‌ವೆಲ್ ಬಿ ಹೆಂಡ್ರಿಕ್ಸ್ 17 (21), ಕೆದಾರ್ ಜಾಧವ್ ಸಿ ಮ್ಯಾಕ್ಸ್‌ವೆಲ್ ಬಿ ಸಂದೀಪ್ 0 (1), ಮಾಯಾಂಕ್ ಅಗರ್ವಾಲ್ ಬಿ ಸಂದೀಪ್ 6 (2), ಮನೋಜ್ ತಿವಾರಿ ಅಜೇಯ 10 (8), ವೇಯ್ನ್ ಪಾರ್ನೆಲ್ ಸಿ ಮ್ಯಾಕ್ಸ್‌ವೆಲ್ ಬಿ ಹೆಂಡ್ರಿಕ್ಸ್ 2 (2),  ಮೊಹ್ಮದ್ ಶಮಿ ಅಜೇಯ 1, (2)ಇತರೆ (ಲೆಗ್‌ಬೈ-1, ವೈಡ್-4) ವಿಕೆಟ್ ಪತನ: 1-13, 2-84, 3-140, 4-144, 5-151, 6-155, 7-158
ಬೌಲಿಂಗ್ ವಿವರ: ಸಂದೀಪ್ ಶರ್ಮಾ 4-0-35-3, ಹೆಂಡ್ರಿಕ್ಸ್ 4-0-36-3, ಅಕ್ಷರ್ ಪಟೇಲ್ 4-1-18-1, ರಿಶಿ ಧವನ್ 4-0-42-0, ಶಿವಂ ಶರ್ಮಾ 4-0-32-0
ಕಿಂಗ್ಸ್ ಇಲೆವೆನ್ ಪಂಜಾಬ್ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 165
ವೀರೇಂದ್ರ ಸೆಹ್ವಾಗ್ ಸಿ ತಿವಾರಿ ಬಿ ಡುಮಿನಿ 23 (22), ಮನನ್ ವೋಹ್ರಾ ಸಿ ವಿಜಯ್ ಬಿ ಇಮ್ರಾನ್ ತಾಹೀರ್ 42 (19), ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಇಮ್ರಾನ್ ತಾಹೀರ್ 14 (11), ಡೇವಿಡ್ ಮಿಲ್ಲರ್ ಬಿ ಡುಮಿನಿ 2 (6), ವೃದ್ಧಿಮಾನ್ ಸಾಹಾ ಸಿ ಪಾರ್ನೆಲ್ ಬಿ ಶಮಿ 13 (13), ಅಕ್ಷರ್ ಪಟೇಲ್ ಅಜೇಯ 42 (35), ಜಾರ್ಜ್ ಬೇಯ್ಲಿ ಸಿ ಜಾಧವ್ ಬಿ ಇಮ್ರಾನ್ 6 (7), ರಿಶಿ ಧವನ್ ಅಜೇಯ 8 (5), ಇತರೆ: (ಲೆಗ್‌ಬೈ-4, ವೈಡ್-11)
ವಿಕೆಟ್ ಪತನ: 1-67, 2-84, 3-92, 4-94, 5-127, 6-155.
ಬೌಲಿಂಗ್ ವಿವರ: ವೇಯ್ನ್ ಪಾರ್ನೆಲ್ 3.4-0-42-0, ಮೊಹ್ಮದ್ ಶಮಿ 4-0-39-1, ಜಯದೇವ್ ಉನಾದ್ಕತ್ 4-0-31-0, ಇಮ್ರಾನ್ ತಾಹೀರ್ 4-0-22-3, ಜೆಪಿ ಡುಮಿನಿ 4-0-27-2

ಇಂದಿನ ಪಂದ್ಯಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು-ಸನ್‌ರೈಸರ್ಸ್ ಹೈದರಾಬಾದ್
(ಸ್ಥಳ-ಹೈದರಾಬಾದ್, ಸಮಯ-ಸಂಜೆ 4 ಗಂಟೆ)
ಕೋಲ್ಕತಾ ನೈಟ್ ರೈಡರ್ಸ್-ಚೆನ್ನೈ ಸೂಪರ್ ಕಿಂಗ್ಸ್
(ಸ್ಥಳ-ಕೋಲ್ಕತಾ, ಸಮಯ-ರಾತ್ರಿ 8 ಗಂಟೆ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.