ಥಾಮಸ್ ಕಪ್ನಿಂದ ಭಾರತ ಔಟ್
ನವದೆಹಲಿ: ಥಾಮಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ಹೊರಬಿದ್ದಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೋಲನುಭವಿಸಿದ್ದ ಭಾರತ ಪುರುಷರ ತಂಡ, ಸೋಮವಾರ ನಡೆದ ಎರಡನೇ ಪಂದ್ಯದಲ್ಲೂ ಕೊರಿಯಾ ವಿರುದ್ಧ 2-3 ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ 'ಸಿ' ಗುಂಪಿನಲ್ಲಿ ಸತತ ಎರಡು ಸೋಲುಗಳಿಂದಾಗಿ ಭಾರತ ಪ್ರಶಸ್ತಿ ಪೈಪೋಟಿಯಿಂದ ಬೇಗನೆ ನಿರ್ಗಮಿಸಿತು.
ಕೊರಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ನಾಯಕ ಪರುಪಳ್ಳಿ ಕಶ್ಯಪ್ ಮತ್ತು ಆರ್ಎಂವಿ ಗುರುಸಾಯ್ದತ್ ಜಯ ಕಂಡುಕೊಂಡರು. ಆದರೆ, ಯುವ ಆಟಗಾರ ಕಿಡಂಬಿ ಶ್ರೀಕಾಂತ್ ಸೋಲನುಭವಿಸಿದ್ದು ಪಂದ್ಯ ಕೈಚೆಲ್ಲಲು ಕಾರಣವಾಯಿತು.ಈಗ ಭಾರತ ಬುಧವಾರ ನಡೆಯಲಿರುವ ತನ್ನ ಮೂರನೇ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೆಣಸಲಿದೆ.
ವಿಶ್ವದ ನಂಬರ್ 18ನೇ ಆಟಗಾರ ಶ್ರೀಕಾಂತ್ ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೆ, ವಿಶ್ವದ ನಂಬರ್ 9ನೇ ಆಟಗಾರ ವಾನ್ಹೂ ಸನ್ ವಿರುದ್ಧ 21-17, 12-21, 18-21 ಮೂರು ಗೇಮ್ಗಳಿಗೆ ಜಾರಿದ ಪಂದ್ಯದಲ್ಲಿ ಕೈಚೆಲ್ಲಿದರು.
ಪುರುಷರ ಡಬಲ್ಸ್ ಪಂದ್ಯದಲ್ಲಿ ಬಿ ಸುಮೀತ್ ರೆಡ್ಡಿ ಮತ್ತು ಮನು ಅತ್ರಿ ತಕ್ಕ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಯೆಯಾನ್ ಸೆಯಾಂಗ್ ಯೂ ಮತ್ತು ಯಂಗ್ ಡೀ ಲೀ ವಿರುದ್ಧ 18-21, 17-21 ಗೇಮ್ಗಳ ಅಂತರದಿಂದ ಸೋತರು.
ನಂತರ ನಡೆದ ಸಿಂಗಲ್ಸ್ನಲ್ಲಿ ನಾಯಕ ಕಶ್ಯಪ್ ಅವರು ಲೀ ಡಾಂಗ್ ಕೆವುನ್ ಅವರನ್ನು 21-17, 21-14 ಗೇಮ್ಗಳಿಂದ ಸೋಲಿಸುವ ಮೂಲಕ ಗೆಲ್ಲುವ ಭರವಸೆಯನ್ನು ಜೀವಂತವಾಗಿರಿಸಿದ್ದರು. ಆದರೆ, ಇನ್ನೊಂದು ಡಬಲ್ಸ್ ಜೋಡಿಯಾದ ಅಕ್ಷಯ್ ದೇವಾಲ್ಕರ್ ಮತ್ತು ಪ್ರಣವ್ ಜೆರ್ರಿ ಚೋಪ್ರಾ, ವಿಶ್ವದ ನಂಬರ್ 4ನೇ ಜೋಡಿಯಾದ ಕಿಮ್ ಸಾ ರಾಂಗ್ ಮತ್ತು ಕಿಮ್ ಕಿ ಜಂಗ್ ವಿರುದ್ಧ 16-21, 16-21 ಗೇಮ್ಗಳಿಂದ ಸೋಲನುಭವಿಸಿದರು.
ಮೊದಲ ದಿನ ಮಲೇಷ್ಯಾ ವಿರುದ್ಧ ಗೆದ್ದು ಭಾರತದ ಮಾನ ಕಾಪಾಡಿದ್ದ ಗುರುಸಾಯ್ ದತ್, ಸೋಮವಾರವೂ ವಾಂಗ್ ಜಾಂಗ್ ಸೂ ವಿರುದ್ಧ 24-22, 21-13 ಗೇಮ್ಗಳಿಂದ ಜಯಿಸಿದರು. ಆದರೆ, ಭಾರತಕ್ಕೆ ಸೋಲು ಮಾತ್ರ ತಪ್ಪಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

