ಕ್ರೀಡೆ

ಮಿಂಚಿದ ಮಿಥಾಲಿ: ಗೆದ್ದ ವನಿತೆಯರು

Published On :

ಲಂಡನ್: ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಅರ್ಧಶತಕ ದಾಖಲಿಸಿದ ಭಾರತ ತಂಡದ ನಾಯಕಿ ಮಿಥಾಲಿ ರಾಜ್ (67) ಶೇಷ ವಿಶ್ವ ಇಲೆವೆನ್ ತಂಡ ಮ್ಯಾರಿಲೆಬೊರ್ನ್ ಮಹಿಳಾ ಕ್ರಿಕೆಟ್ ಕ್ಲಬ್ ವಿರುದ್ಧ ಗೆಲವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಲಾರ್ಡ್ಸ್‌ನ ದ್ವಿಶತಮಾನೋತ್ಸವದ ಅಂಗವಾಗಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ವಿಶ್ವ ಇಲೆವೆನ್ ತಂಡ ಮಿಥಾಲಿ ರಾಜ್ ಹಾಗೂ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ (59) ಅವರ ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 283 ರನ್ ದಾಖಲಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಎಮ್‌ಸಿಸಿ ತಂಡ 49.4 ಓವರ್‌ಗಳಲ್ಲಿ 242 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲನುಭವಿಸಿತು.
ಇವರ ಜತೆಗೆ ಉತ್ತಮ ಬ್ಯಾಟಿಂಗ್ ಮಾಡಿದ ಆಸೀಸ್‌ನ ಎಲ್ಲಿಸ್ ಪೆರ್ರಿ (49) ಹಾಗೂ ಅಂತಿಮ ಕ್ಷಣದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಜುಲನ್ ಗೋಸ್ವಾಮಿ (27) ತಂಡ ಉತ್ತಮ ಮೊತ್ತ ಪೇರಿಸಲು ನೆರವಾದರು.
ಎಮ್‌ಸಿಸಿ ತಂಡದ ಆರಂಭಿಕರಾದ ಚಾರ್ಲೊಟ್ ಎಡ್ವರ್ಡ್ಸ್ (70) ಹಾಗೂ ಹೀಟರ್ ನೈಟ್ (51) 20 ಓವರ್‌ಗಳಲ್ಲಿ ಆರಂಭಿಕ ವಿಕೆಟ್‌ಗೆ 90 ರನ್‌ಗಳ ಭದ್ರ ಅಡಿಪಾಯ ಹಾಕಿ ಕೊಡುವಲ್ಲಿ ಯಶಸ್ವಿಯಾದರು. ನಂತರ ಮಧ್ಯಮ ಕ್ರಮಾಂಕದಲ್ಲಿ ನಟಾಲಿ ಸಿವರ್ (45) ಹಾಗೂ ಡೇನಿಯಲ್ ಹ್ಯಾಜೆಲ್ (22) ಸ್ವಲ್ಪ ಪ್ರತಿರೋಧ ನೀಡಿದರಾದರೂ ಯಶಸ್ವಿಯಾಗಲಿಲ್ಲ.
ಇನ್ನು ಶೇಷ ವಿಶ್ವ ಇಲೆವೆನ್ ತಂಡದ ಪರ ಮಾರಕ ಬೌಲಿಂಗ್ ಮಾಡಿದ ಸನಾ ಮಿರ್ 9.4 ಓವರ್ ಮಾಡಿ 36 ರನ್ ಗಳಿಗೆ 4 ವಿಕೆಟ್ ಕಬಳಿಸಿ ಮಿಂಚಿದರು.

ಸ್ಕೋರ್ ವಿವರ
ಶೇಷ ವಿಶ್ವ ಇಲೆವೆನ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 283
ಮಿಥಾಲಿ ರಾಜ್ 67, ಮೆಗ್ ಲ್ಯಾನಿಂಗ್ 59, ಎಲ್ಲಿಸ್ ಪೆರ್ರಿ 49, ಜುಲನ್ ಗೋಸ್ವಾಮಿ 27, ಕೇಟ್ ಕ್ರಾಸ್ 48ಕ್ಕೆ4, ಡೇನಿಯಲ್ ಹ್ಯಾಜೆಲ್ 52ಕ್ಕೆ2
ಮ್ಯಾರಿಲೆಬೊರ್ನ್ ಕ್ಲಬ್ 49.4 ಓವರ್‌ಗಳಲ್ಲಿ 242
ಚಾರ್ಲೊಟ್ ಎಡ್ವರ್ಡ್ಸ್ 70, ಹೀಟರ್ ನೈಟ್ 51, ಲಟಾಲಿ ಸಿವರ್ 45, ಸಾನಾ ಮಿರ್ 36ಕ್ಕೆ4, ಟೇಲರ್ 31ಕ್ಕೆ2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.