ಕ್ರೀಡೆ

ಪೂರ್ಣಗೊಳ್ಳದ ಕ್ರೀಡಾಂಗಣ; ಫಿಫಾಗೆ ಚಿಂತೆ

Published On :

ಸಾವ್ ಪೊಲೊ: ಮುಂದಿನ ತಿಂಗಳು ಆರಂಭವಾಗಲಿರುವ ಫೀಫಾ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿರುವ ಕ್ರೀಡಾಂಗಣಗಳಿಗೆ ಅಂತಿಮ ಸುತ್ತಿನ ಪರಿಶೀಲನಾ ಭೇಟಿ ನಂತರ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಫಿಫಾ ಚಿಂತೆಗೊಳಗಾಗಿದೆ.
ಎರಡು ವಾರಗಳ ಕಾಲ ಪರಿಶೀಲನೆ ನಡೆಸಿದ ಫಿಫಾ ಪ್ರಧಾನ ಕಾರ್ಯದರ್ಶಿ ಜೆರೊಮ್ ವಾಲ್ಕೆ 12 ಕ್ರೀಡಾಂಗಣಗಳ ಪೈಕಿ, 3 ಕ್ರೀಡಾಂಗಣದ ಕಾಮಗಾರಿ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನಟಾಲಾ, ಪೊಲೊ ಅಲೆಗ್ರೆ ಹಾಗೂ ಸಾವ್ ಪೊಲೊದಲ್ಲಿರುವ ಕ್ರೀಡಾಂಗಣದ ಕಾಮಗಾರಿ ಮುಕ್ತಾಯಗೊಳಅಳದ ಹಿನ್ನೆಲೆಯಲ್ಲಿ ಆಯೋಜಕರಿಗೆ ಫಿಫಾ ಎಚ್ಚರಿಕೆ ರವಾನಿಸಿದೆ. ನಟಾಲಾ ಕ್ರೀಡಾಂಗಣ ಕಡಿಮೆ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. ಇನ್ನು ಪೊರ್ಟೊ ಅಲೆಗ್ರೆ ಕ್ರೀಡಾಂಗಣದಲ್ಲಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇನ್ನು ಜೂ.12ರಂದು ಬ್ರೆಜಿಲ್  ಹಾಗೂ ಕ್ರೊವೆಶಿಯಾ ನಡುವೆ ನಡೆಯಲಿರುವ ಸಾವ್ ಪೊಲೊದಲ್ಲಿರುವ ಕ್ರೀಡಾಂಗಣದ ಸಾಮರ್ಥ್ಯವನ್ನು ಪರೀಕ್ಷಿಸಲು ಫಿಫಾ ನಿರ್ಧರಿಸಿದೆ. ಇನ್ನು ಉಳಿದ 9 ನಗರಗಳ ಕ್ರೀಡಾಂಗಣಗಳ ಕಾಮಕಾರಿ ಬಹುತೇಕ ಪೂರ್ಣಗೊಂಡಿದ್ದು, ಇವುಗಳ ಬಗ್ಗೆ ವಾಲ್ಕೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಗುರುವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾಲ್ಕೆ ಈಗಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಯವನ್ನು ವ್ಯಯ ಮಾಡುವಂತಿಲ್ಲ. ಸ್ಥಳೀಯ ಆಯೋಜಕರು ನಿಗದಿತ ವೇಳೆಗೆ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ ಎಂದು ತಿಳಿಸಿದರು.
ಅಭ್ಯಾಸ ಪಂದ್ಯದಲ್ಲಿ ಟರ್ಕಿಗೆ ಜಯ: ವಿಶ್ವಕಪ್ ತಯಾರಿಗಾಗಿ ಗುರುವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಟರ್ಕಿ ತಂಡವು ಬ್ರೆಜಿಲ್ ಮೂಲದ ಹೊಂಡುರಸ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಮಣಿಸಿದೆ. ಮೆವ್‌ಲಟ್ ಎಡಿಂರ್ಕ್ ಪಂದ್ಯದ 70ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 83ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಎಡಿಂರ್ಕ್, ಚೆಂಡನ್ನು ಕ್ಯಾನರ್ ಎರ್ಕಿನ್ ಪಾಸ್ ಮಾಡಿದರು. ಆಗ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಎರ್ಕಿನ್ ಗೆಲವಿನ ಅಂತರವನ್ನು ಹೆಚ್ಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.