೭ ಪ್ರಾದೇಶಿಕ ಭಾಷೆಗಳಲ್ಲಿ ಸಚಿನ್ ತೆಂಡುಲ್ಕರ್ ಆತ್ಮಕಥೆ ಪ್ರಕಟ

ಅತ್ಯಧಿಕ ಬೇಡಿಕೆಯಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದ ಆತ್ಮಕತೆ "ಪ್ಲೇಯಿಂಗ್ ಇಟ್ ಮೈ ವೆ" ...
ಸಚಿನ್ ತೆಂಡುಲ್ಕರ್ ಅವರ ಆತ್ಮಕತೆ - ಪ್ಲೇಯಿಂಗ್ ಇಟ್ ಮೈ ವೆ
ಸಚಿನ್ ತೆಂಡುಲ್ಕರ್ ಅವರ ಆತ್ಮಕತೆ - ಪ್ಲೇಯಿಂಗ್ ಇಟ್ ಮೈ ವೆ
Updated on

ಮುಂಬೈ: ಅತ್ಯಧಿಕ ಬೇಡಿಕೆಯಿರುವ ಸಚಿನ್ ತೆಂಡುಲ್ಕರ್ ಅವರ ದಾಖಲೆ ಮುರಿದ ಆತ್ಮಕತೆ "ಪ್ಲೇಯಿಂಗ್ ಇಟ್ ಮೈ ವೆ" ಇನ್ನೂ ಏಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗಲಿದೆ. ದೇಶದ ವಿವಿಧ ಪ್ರಕಾಶಕರು ಆಸಕ್ತಿ ತೋರಿರುವ ಹಿನ್ನಲೆಯಲ್ಲಿ ಈ ಇಂಗ್ಲಿಶ್ ಪುಸ್ತಕದ ಪ್ರಕಾಶನ ಸಂಸ್ಥೆ ಹ್ಯಾಶೆಟ್ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಜೊತೆಯಾಗಿ ಪ್ರಕಟಿಸಲಿದೆ.

"ಇಂಗ್ಲಿಶ್ ಪುಸ್ತಕದ ಬಿಡುಗಡೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಆದುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಈ ಪುಸ್ತಕವನ್ನು ಪ್ರಕಟಿಸಲು ವಿವಿಧ ಪ್ರಕಾಶಕರ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಮರಾಠಿ, ಹಿಂದಿ, ಗುಜರಾತಿ, ಮಲಯಾಳಂ, ಅಸ್ಸಾಮಿ, ತೆಲುಗು ಮತ್ತು ಬೆಂಗಾಳಿ ಪ್ರಕಾಶಕರ ಜೊತೆ ಪ್ರಕಟಿಸಲು ಮಾತುಕತೆ ನಡೆಸುತ್ತಿದ್ದೇವೆ. ಮುಂದಿನ ವರ್ಷದ ಒಳಗೆ ಈ ಮಾತುಕತೆಗಳು ಸಂಪೂರ್ಣಗೊಳ್ಳಲಿದ್ದು, ೨೦೧೫ ಬೇಸಿಗೆಯ ಒಳಗೆ ಪ್ರಾದೇಶಿಕ ಭಾಷೆಗಳಲ್ಲಿ ಪುಸ್ತಕ ಹೊರಬರಲಿದೆ" ಎಂದು ಹ್ಯಾಶೆಟ್ ಭಾರತದ ಪ್ರಕಾಶಕಿ ಪೌಲಮಿ ಚಟರ್ಜಿ ತಿಳಿಸಿದ್ದಾರೆ.

ನವೆಂಬರ್ ೬ ರಂದು ಬಿಡುಗಡೆಯಾದ ಈ ಪುಸ್ತಕ ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ಡ್ಯಾನ್ ಬ್ರೌನ್ ಅವರ ಇನ್ಫರ್ನೋ, ವಾಲ್ಟರ್ ಐಸಾಕ್ಸನ್ ಅವರ ಸ್ಟೀವ್ ಜಾಬ್ಸ್ ಮತ್ತು ಜೆ ಕೆ ರೌಲಿಂಗ್ಸ್ ಅವರ ಕ್ಯಾಶುಯಲ್ ವೇಕೆನ್ಸಿ ಪುಸ್ತಕಳಿಗೂ ಮುಂಚೂಣಿಯಲ್ಲಿ ಈ ಪುಸ್ತಕ ಮಾರಾಟವಾಗುತ್ತಿದ್ದು, ಇಲ್ಲಿಯವರೆಗೂ ೨ ಲಕ್ಷ ಪ್ರತಿಗಳು ಮಾರಾಟವಾಗಿವೆ" ಎಂದು ಹ್ಯಾಶೆಟ್ ಇಂಡಿಯಾ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com