ದಾಖಲೆಯ 264 ರನ್‌ ಸಿಡಿಸಿದ ರೋಹಿತ್ ಶರ್ಮಾ

ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಬಾರಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ
Updated on: 

ಕೊಲ್ಕತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಬಾರಿಸಿದ್ದಾರೆ.

ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ವೈಯಕ್ತಿಕ 264 ರನ್‌ಗಳನ್ನು ಸಿಡಿಸುವ ಮೂಲಕ ಏಕದಿನ ರನ್ ಗಳಿಕೆಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅಂಜಿಕ್ಯ ರಹಾನೆಯೊಂದಿಗೆ ಕಣಕ್ಕೀಳಿದ ರೋಹಿತ್ ಶರ್ಮಾ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. ಶರ್ಮಾ ವೈಯಕ್ತಿಕವಾಗಿ 264 ರನ್ ಗಳಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಏಕದಿನ ಪಂದ್ಯದಲ್ಲಿ ವೈಯಕ್ತಿಕವಾಗಿ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಭರ್ಜರಿ 9 ಸಿಕ್ಸರ್ ಹಾಗೂ 33 ಬೌಂಡರಿಗಳ ನೇರವಿನೊಂದಿಗೆ ಶರ್ಮಾ 173 ಎಸೆತಗಳಲ್ಲಿ 264 ರನ್ ಪೇರಿಸಿದರು.

ರೋಹಿತ್ ಶರ್ಮಾ ಎರಡನೇ ಬಾರಿಗೆ ದ್ವಿಶತಕ ಬಾರಿಸಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯದಲ್ಲಿ 209 ರನ್ ಗಳಿಸಿ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದ್ವಿಶತಕ ದಾಖಲಿಸಿರುವವ ಪಟ್ಟಿಯಲ್ಲಿ ಭಾರತದ ಆಟಗಾರರೆ ಹೆಸರು ಮಾಡಿದ್ದಾರೆ. ಸಚಿನ್ ಅಜೇಯ 200 ರನ್ ಗಳಿಸಿ ಮೊದಲ ದ್ವಿಶಕತ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಅಬ್ಬರ ಬ್ಯಾಟ್ಸ್‌ಮಾನ್ ವಿರೇಂದ್ರ ಸೆಹ್ವಾಗ್ ಸಚಿನ್ ದಾಖಲೆಯನ್ನು ಸರಿಗಟ್ಟಿ 219 ರನ್ ಗಳಿಸುವ ಮೂಲಕ ನಂಬರ್‌ವನ್ ಪಟ್ಟಕ್ಕೇರಿದ್ದರು.

ಈ ಹಿಂದೆಯೇ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದ ರೋಹಿತ್ ಶರ್ಮಾ ಇದೀಗ 264 ರನ್ ಸಿಡಿಸುವ ಮೂಲಕ ವಿರೇಂದ್ರ ಸೆಹ್ವಾಗ್‌ರ 219 ರನ್‌ಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com