ಕ್ರೀಡೆ

ಕೋಟ್ಲಾದಲ್ಲಿ ವಿಂಡೀಸ್ ಪರದಾಟ

ಕೋಟ್ಲಾದಲ್ಲಿ ವಿಂಡೀಸ್ ಪರದಾಟ
Published On :

ಎರಡನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ 48 ರನ್ ಗೆಲುವು, ಸರಣಿ 1-1ರ ಸಮಬಲ
ನವದೆಹಲಿ:
ಮಂದಗತಿಯ ಪಿಚ್‌ನಲ್ಲಿ ಆರಂಭದಲ್ಲಿ ವಿರಾಟ್ ಕೊಹ್ಲಿ (62), ಸುರೇಶ್‌ರೈನಾ(62) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 51) ಜವಾಬ್ದಾರಿಯುತ ಬ್ಯಾಟಿಂಗ್ ನಂತರ ಸಂಘಟಿತ ಬೌಲಿಂಗ್ ನಡೆಸಿದ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
ಶನಿವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ 48 ರನ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿದ್ದು, 5 ಏಕದಿನ ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಂತರ ಟೀಂ ಇಂಡಿಯಾ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 263 ರನ್‌ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ 46.3 ಓವರ್‌ಗಳಲ್ಲಿ 215ರನ್‌ಗಳಿಗೆ ಆಲೌಟ್ ಆಯಿತು.
ರೈನಾ-ಕೊಹ್ಲಿ ಜತೆಯಾಟ: ಭಾರತದ ಅಗ್ರ, ಕ್ರಮಾಂಕರಾದ ಶಿಖರ್ ಧವನ್ (1) ಆರಂಭದಲ್ಲೇ ನಿರ್ಗಮಿಸಿದ್ದು ತಂಡಕ್ಕೆ ಪೆಟ್ಟು ನೀಡಿತು. ನಂತರ ಕೆಲ ಹೊತ್ತನಲ್ಲೇ ಅಜಿಂಕ್ಕ ರಹಾನೆ (12) ಹಾಗೂ ಅಂಬಟಿ ರಾಯುಡು (32)ಸಹ ವಿಕೆಟ್ ಒಪ್ಪಿಸಿದ್ದು, ತಂಡಕ್ಕೆ ಹಿನ್ನಡೆ ಉಂಟು ಮಾಡಿತು. ಹಾಗಾಗಿ ತಂಡ 74ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಟಕ್ಕೆ ಸಿಲುಕಿಸಿತು.
ನಂತರ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ರನ್‌ಗತಿಯನ್ನು ಹೆಚ್ಚಿಸಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 105 ರನ್‌ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿತು.
ವಿರಾಟ್ ಕೊಹ್ಲಿ 78 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 62 ರನ್ ದಾಖಲಿಸಿದರು. ಇನ್ನು ಸುರೇಶ್ ರೈನಾ 60 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 62 ರನ್ ಗಳಿಸಿದರು. ಇನ್ನಿಂಗ್ಸ್‌ನ ಅಂತ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 51 ರನ್ ದಾಖಲಿಸಿದರು. ಅಲ್ಲದೆ ತಂಡ 250ರ ಗಡಿ ದಾಟಲು ನೆರವಾದರು.
ಸೊರಗಿದ ಸ್ಮಿತ್ ಆಟ: ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭಿಕರಾದ ಡ್ವೈನ್‌ಸ್ಮಿತ್(97), ಡ್ವೈನ್ ಬ್ರಾವೊ (26) ಜೋಡಿ ಮೊದಲ ವಿಕೆಟ್‌ಗೆ 64 ರನ್‌ಗಳ ಜತೆಯಾಟ ನೀಡಿದರು. ಒಂದು ಹಂತದಲ್ಲಿ 170 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು ಸೋಲಿಗೆ ಕಾರಣವಾಯಿತು. ಭಾರತ ಪರ ಶಮಿ 36 ರನ್‌ಗಳಿಗೆ 4 ವಿಕೆಟ್ ಪಡೆದು, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

3ನೇ ಪಂದ್ಯ ಸ್ಥಳಾಂತರವಿಲ್ಲ
ಹುಡ್‌ಹುಡ್ ಚಂಡಮಾರುತ ನೆರೆಯ ರಾಜ್ಯ ಆಂಧ್ರ ಪ್ರದೇಶ ಹಾನಿ ಮಾಡುವ ಸಾಧ್ಯತೆಗಳು ಹೆಚ್ಚಾಗುತ್ತಿದೆಯಾದರೂ, ಈಗ 3ನೇ ಏಕದಿನ ಪಂದ್ಯವನ್ನು ಸ್ಥಳಾಂತರ ಮಾಡಲು ಯಾವುದೇ ಸಣ್ಣ ಅವಕಾಶವೂ ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
3ನೇ ಏಕದಿನ ಪಂದ್ಯ ಅಕ್ಟೋಬರ್ 14 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದ್ದು. ಈಗ ಪಂದ್ಯಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸಲು ಕಷ್ಟವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ.

ಸ್ಕೋರ್‌  ವಿವರ
ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 263
ಅಜಿಂಕ್ಯ ರಹಾನೆ ಸಿ ಡ್ವೇನ್‌ ಬ್ರಾವೊ ಬಿ ಡರೆನ್‌ ಸಮಿ  12
ಶಿಖರ್‌ ಧವನ್‌ ಬಿ ಜೆರೋಮ್‌ ಟೇಲರ್‌  01
ಅಂಬಟಿ ರಾಯುಡು ಸಿ ಸಮಿ ಬಿ ಸುಲೆಮಾನ್‌ ಬೆನ್‌  32
ವಿರಾಟ್‌ ಕೊಹ್ಲಿ ಸಿ ಸ್ಯಾಮುಯೆಲ್ಸ್‌ ಬಿ ರವಿ ರಾಂಪಾಲ್‌  62
ಸುರೇಶ್‌ ರೈನಾ ಸಿ ಪೊಲಾರ್ಡ್‌ ಬಿ ಜೆರೋಮ್‌ ಟೇಲರ್‌  62
ಮಹೇಂದ್ರ ಸಿಂಗ್‌ ದೋನಿ ಔಟಾಗದೆ  51
ರವೀಂದ್ರ ಜಡೇಜ ಬಿ ಜೆರೋಮ್‌ ಟೇಲರ್‌  06
ಭುವನೇಶ್ವರ್‌ ಕುಮಾರ್‌ ಸಿ ಪೊಲಾರ್ಡ್‌ ಬಿ ಡ್ವೇನ್‌ ಬ್ರಾವೊ  18
ಮೊಹಮ್ಮದ್‌ ಶಮಿ ಔಟಾಗದೆ  01

ಇತರೆ: (ಬೈ–4, ಲೆಗ್‌ಬೈ–1, ವೈಡ್‌–13)  18
ವಿಕೆಟ್‌ ಪತನ: 1–4 (ಧವನ್‌; 1.4), 2–50 (ರಹಾನೆ; 12.5), 3–74 (ರಾಯುಡು; 17.4), 4–179 (ರೈನಾ; 36.5), 5–196 (ಕೊಹ್ಲಿ; 40.4), 6–219 (ಜಡೇಜ; 45.1), 7–248 (ಭುವನೇಶ್ವರ್‌; 48.6)

ಬೌಲಿಂಗ್‌: ರವಿ ರಾಂಪಾಲ್‌ 8–0–47–1, ಜೆರೋಮ್‌ ಟೇಲರ್‌ 10–0–54–3, ಸುಲೆಮಾನ್‌ ಬೆನ್‌ 10–0–47–1, ಡ್ವೇನ್‌ ಬ್ರಾವೊ 8–0–51–1, ಡರೆನ್‌ ಸಮಿ 4–0–14–1, ಮರ್ಲಾನ್‌ ಸ್ಯಾಮುಯೆಲ್ಸ್‌ 5–1–21–0, ಆ್ಯಂಡ್ರೆ ರಸೆಲ್‌ 3–0–14–0, ಕೀರನ್‌ ಪೊಲಾರ್ಡ್‌ 2–0–10–0

ವೆಸ್ಟ್‌ ಇಂಡೀಸ್‌: 46.3 ಓವರ್‌ಗಳಲ್ಲಿ 215
ಡ್ವೇನ್‌ ಸ್ಮಿತ್‌ ಬಿ ಮೊಹಮ್ಮದ್ ಶಮಿ  97
ಡರೆನ್‌ ಬ್ರಾವೊ ಬಿ ಮೊಹಮ್ಮದ್‌ ಶಮಿ  26
ಕೀರನ್‌ ಪೊಲಾರ್ಡ್‌ ಬಿ ಅಮಿತ್‌ ಮಿಶ್ರಾ  40
ಮರ್ಲಾನ್‌ ಸ್ಯಾಮುಯೆಲ್ಸ್‌ ಸಿ ಕೊಹ್ಲಿ ಬಿ ಯಾದವ್‌  16
ದಿನೇಶ್‌ ರಾಮ್ದಿನ್‌ ಸಿ ರೈನಾ ಬಿ ಅಮಿತ್‌ ಮಿಶ್ರಾ  03
ಡ್ವೇನ್ ಬ್ರಾವೊ ಸಿ ಧವನ್‌ ಬಿ ಮೊಹಮ್ಮದ್‌ ಶಮಿ  10
ಆ್ಯಂಡ್ರೆ ರಸೆಲ್‌ ಸ್ಟಂಪ್‌ ದೋನಿ ಬಿ ರವೀಂದ್ರ ಜಡೇಜ  04
ಡರೆನ್‌ ಸಮಿ ಬಿ ರವೀಂದ್ರ ಜಡೇಜ  01
ರವಿ ರಾಂಪಾಲ್‌ ಸಿ ಮತ್ತು ಬಿ ಮೊಹಮ್ಮದ್‌ ಶಮಿ  16
ಜೆರೋಮ್‌ ಟೇಲರ್‌ ಸಿ ಭುವನೇಶ್ವರ್‌ ಬಿ ರವೀಂದ್ರ ಜಡೇಜ  00
ಸುಲೆಮಾನ್‌ ಬೆನ್‌ ಔಟಾಗದೆ  00

ಇತರೆ: (ಲೆಗ್‌ಬೈ–1, ವೈಡ್‌–1)  02
ವಿಕೆಟ್‌ ಪತನ: 1–64 (ಡರೆನ್‌ ಬ್ರಾವೊ; 13.1), 2–136 (ಪೊಲಾರ್ಡ್‌; 28.5), 3–170 (ಸ್ಮಿತ್‌; 35.4), 4–183 (ಸ್ಯಾಮುಯೆಲ್ಸ್‌; 29.1), 5–189 (ರಾಮ್ದಿನ್‌; 40.2), 6–195 (ರಸೆಲ್‌; 42.1), 7–199 (ಸಮಿ; 42.6), 8–199 (ಡ್ವೇನ್‌ ಬ್ರಾವೊ; 43.2), 9–201 (ಟೇಲರ್‌; 44.2), 10–215 (ರಾಂಪಾಲ್‌; 46.3)

ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 7–0–32–0, ಉಮೇಶ್‌ ಯಾದವ್‌ 9–0–42–1, ಮೊಹಮ್ಮದ್‌ ಶಮಿ 9.3–0–36–4, ರವೀಂದ್ರ ಜಡೇಜ 9–0–44–3, ಅಮಿತ್‌ ಮಿಶ್ರಾ 10–2–40–2, ವಿರಾಟ್‌ ಕೊಹ್ಲಿ 2–0–20–0
ಪಂದ್ಯಶ್ರೇಷ್ಠ: ಶಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.