ಕ್ರೀಡೆ

ಭಾರತ ಹಾಕಿ ತಂಡದ ಕೋಚ್ ಟೆರ್ರಿ ವಾಲ್ಶ್ ರಾಜಿನಾಮೆ

ಭಾರತ ಹಾಕಿ ತಂಡದ ಕೋಚ್ ಟೆರ್ರಿ ವಾಲ್ಶ್ ರಾಜಿನಾಮೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಭಾರತ ಹಾಕಿ ತಂಡದ ಹಿರಿಯ ಕೋಚ್ ಟೆರ್ರಿ ವಾಲ್ಶ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ಇಂಚಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕೋಚ್ ಟೆರ್ರಿ ವಾಲ್ಶ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಭಾರತ ಹಾಕಿ ಸಂಸ್ಥೆಯ ಅಧ್ಯಕ್ಷ ನರೀಂದರ್ ಭಾತ್ರಾ ಅವರಿಗೆ ಇಂದು ಈ-ಮೇಲ್ ರವಾನಿಸಿರುವ ಟೆರ್ರಿವಾಲ್ಶ್ ಅವರು, ತಮ್ಮ ರಾಜಿನಾಮೆ ವಿಚಾರವನ್ನು ತಿಳಿಸಿದ್ದಾರೆ.

ಈ ಹಿಂದೆ ಕಳೆದ ಅಕ್ಟೋಬರ್ 19ರಂದು ಭಾರತ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಜೀ ಥಾಮ್ಸನ್ ಅವರಿಗೆ ಪತ್ರವೊಂದನ್ನು ಬರೆದಿದ್ದ ಟೆರ್ರಿವಾಲ್ಶ್ ಅವರು, ಆಡಳಿತ ಮಂಡಳಿಯಲ್ಲಿ ನಿರ್ಧಾರ ಕೈಗೊಳ್ಳವಾಗ ಭಾರತ ಕ್ರೀಡಾ ಪ್ರಾಧಿಕಾರದ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳುವುದು ನನಗೆ ಕಷ್ಟಕರವಾಗುತ್ತಿದೆ. ಇದೇ ಬೆಳವಣಿಗೆ ದೀರ್ಘಕಾಲದವೆರೆಗೆ ಮುಂದುವರೆದರೆ ಇದು ಭಾರತ ಹಾಕಿ ಮತ್ತು ತಂಡದ ಆಟಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನನ್ನ ವೃತ್ತಿ ಜೀವನದ ಒತ್ತಡಗಳು ನನ್ನ ವೈಯುಕ್ತಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಆಸ್ಟ್ರೇಲಿಯಾದಲ್ಲಿರುವ ನನ್ನ ಕುಟುಂಬ ವರ್ಗ ಇದರಿಂದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ವಾಲ್ಸ್ ಹೇಳಿಕೊಂಡಿದ್ದರು.

ಅಂದೇ ಅವರು ತಮ್ಮ ರಾಜಿನಾಮೆ ಕುರಿತು ಪರೋಕ್ಷ ಮುನ್ಸೂಚನೆ ನೀಡಿದ್ದು, ವೇತನ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಕ್ರೀಡಾ ಪ್ರಾಧಿಕಾರದೊಂದಿಗೆ ವಾಲ್ಶ್ ಅವರು ಪರೋಕ್ಷವಾಗಿ ಅಸಮಾಧಾನ ಹೊಂದಿದ್ದರು. ಇದೀಗ ಇಂದು ಅಧಿಕೃತವಾಗಿ ತಮ್ಮ ಕೋಚ್ ಸ್ಥಾನವನ್ನು ತೊರೆದಿದ್ದಾರೆ. ಇದೇ ನವೆಂಬರ್ 19ರಂದು ವಾಲ್ಶ್ ಅವರೊಂದಿಗೆ ಭಾರತ ಹಾಕಿ ಸಂಸ್ಥೆ ಮಾಡಿಕೊಂಡಿದ್ದ ಒಪ್ಪಂದ ಕೊನೆಯಾಗುವುದರಲ್ಲಿತ್ತು. ಆದರೆ ಅದಕ್ಕೂ ಮುಂಚಿತವಾಗಿಯೇ ವಾಲ್ಶ್ ಅವರು ತಮ್ಮ ಸ್ಥಾನ ತೊರೆದಿದ್ದಾರೆ.

ಇದೇ ಡಿಸೆಂಬರ್ 6-14ರವರೆಗೆ ಭುವನೇಶ್ವರಗದಲ್ಲಿ ಎಫ್‌ಐಹೆಚ್ ಚಾಂಪಿಯನ್ ಶಿಪ್ ಆರಂಭಗೊಳ್ಳಲ್ಲಿದ್ದು, ಈ ಹಂತದಲ್ಲಿ ಕೋಚ್ ರಾಜಿನಾಮೆ ನೀಡಿರುವುದು ಭಾರತ ಹಾಕಿ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ಎಫ್‌ಐಹೆಚ್ ಚಾಂಪಿಯನ್ ಶಿಪ್ ಪಂದ್ಯಾವಳಿ ಕಠಿಣವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.