ಕ್ರೀಡೆ

ಆಂಗ್ಲರ ಗೆಲುವಿನ 'ರೂಟ್'

ಆಂಗ್ಲರ ಗೆಲುವಿನ 'ರೂಟ್'
Published On :

ಲೀಡ್ಸ್: ಮಾನ ಉಳಿಸಿಕೊಳ್ಳಲು ಇದ್ದ ಕೊನೆಯ ಅವಕಾಶವನ್ನು ಬಳಸಿಕೊಂಡ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ಶುಕ್ರವಾರ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 41ರನ್‌ಗಳ ಗೆಲುವು ದಾಖಲಿಸಿ, ಕ್ಲೀನ್ ಸ್ವೀಪ್ ಸೋಲಿನಿಂದ ಪಾರಾಯಿತು.

ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ, ಆಂಗ್ಲರಿಗೆ ಮೊದ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು. ನಂತರ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 294ರನ್ ದಾಖಲಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತ 48.4 ಓವರ್‌ಗಳಲ್ಲಿ 253ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ರೂಟ್ ಶತಕ: ಪಂದ್ಯದ ಆರಂಭದಲ್ಲಿ ಇಂಗ್ಲೆಂಡ್ ವೈಫಲ್ಯ ಅನುಭವಿಸಿತಾದರು ನಂತರ ಜೋ ರೂಟ್ ಶತಕದ ನೆರವಿನಿಂದ ಚೇತರಿಸಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಹಾಲ್ಸ್ (4) ಆರಂಭದಲ್ಲೇ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮೊಯಿಸ್ ಅಲಿ(9) ಸಹ ಬೇಗನೆ ನಿಗರ್ಮಿಸಿದರು. ಆದರೆ ಉತ್ತಮ ಆರಂಭ ಪಡೆದಿದ್ದ ಅಲಸ್ಟೆರಕ್ ಕುಕ್ 46ರನ್ ಗಳಿಸಿ ರೈನಾಗೆ ವಿಕೆಟ್ ಒಪ್ಪಿಸುವ ಮೂಲಕ ತಂಡಕ್ಕೆ ಹಿನ್ನಡೆಯುಂಟುಮಾಡಿದರು. ಈ ಮೂಲಕ ಇಂಗ್ಲಿಂಡ್ 117 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಜೋ ರೂಟ್ (113 ರನ್, 108 ಎಸೆತ, 10 ಬೌಡಂರಿ, 3 ಸಿಕ್ಸರ್) ಹಾಗೂ ಜೋಸ್ ಬಟ್ಲರ್ (49) ತಂಡಕ್ಕೆ ನೆರವಾದರು.

ಇನ್ನು ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸುರೇಶ್ ರೈನಾ ಸರಣಿ ಶ್ರೇಷ್ಠ ಗೌರವ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.