ಸೂಪರ್ ಸಾನಿಯಾ

ನ್ಯೂಯಾರ್ಕ್: ವರ್ಷದ ಕಡೇಯ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿ ಯುಎಸ್ ಓಪನ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿಲು ವಿಫಲರಾದರೂ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಪಡೆಯುವಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಯುಎಸ್ ಓಪನ್ನಲ್ಲಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಶುಕ್ರವಾರ ನಡೆದ ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಬ್ರೂನೊ ಸೊರೆಸ್ ಜೋಡಿ, ತಮ್ಮ ಎದುರಾಳಿ ಅಮೆರಿಕಾದ ಅಬಿಗೈಲ್ ಸ್ಟಿಯರ್ಸ್ ಮತ್ತು ಮಕ್ಸಿಕೊದ ಸ್ಯಾಂಟಿಯಾಗೋ ಗೊಂಜಾಲೊ ಜೋಡಿ ವಿರುದ್ಧ ಗೆಲುವು ದಾಖಲಿಸಿ ಪ್ರಶಸ್ತಿ ಬಾಚಿಕೊಂಡಿದೆ.
1 ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಸಾನಿಯಾ ಜೋಡಿಯು 6-1, 2-6, 11-9 ನೇರ ಸೆಟ್ಗಳ ಅಂತರದಲ್ಲಿ ಮಣಿಸಿತು. ಎದುರಾಳಿ ವಿರುದ್ಧ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ ನಂತರ ಪ್ರಬಲ ಪೈಪೋಟಿ ಎದುರಿಸಬೇಕಾಯಿತು. ಆದರೆ, ತಮ್ಮ ನಿಯಂತ್ರಣ ಕಳೆದುಕೊಳ್ಳದ ಸಾನಿಯಾ ಹಾಗೂ ಸೊರೆಸ್ ಪಂದ್ಯವನ್ನು ಗೆದ್ದುಕೊಂಡರು.
ಆರಂಭದಲ್ಲೇ ತಮ್ಮ ಆಕ್ರಮಣಕಾರಿ ಆಟ ಪ್ರರ್ಶಿಸಿದ ಮಿರ್ಜಾ ಜೋಡಿ, 6-1 ಅಂತರದ ಸುಲಭ ಮುನ್ನಡೆ ಪಡೆದುಕೊಂಡಿತು. ಎರಡನೇ ಸೆಟ್ನಲ್ಲಿ ಹೋರಾಟ ನಡೆಸಿದ ಅಮೆರಿಕ ಹಾಗೂ ಮೆಕ್ಸಿಕೊ ಜೋಡಿ, 6-2 ಅಂತರದ ಮುನ್ನಡೆ ಸಾಧಿಸಿ ಪಂದ್ಯದಲ್ಲಿ ಸಮಬಲ ಪಡೆಯಿತು. ಇನ್ನು ತೀವ್ರ ಹಣಾಹಣಿಯಿಂದ ಕೂಡಿದ್ದ ಮೂರನೇ ಸೆಟ್ನಲ್ಲಿ ಉಭಯ ಜೋಡಿಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾದವು. ಮಿರ್ಜಾ ಜೋಡಿ ನಂತರದ ಪಂದ್ಯದಲ್ಲಿ ಹಿಡಿತ ಸಾಧಿಸಿ 11-9 ಅಂತರ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು.
ಸಾನಿಯಾ ಮಿರ್ಜಾ ಪ್ರಸಕ್ತ ಯುಎಸ್ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಗಾರ್ತಿ ಕಾರಾ ಬ್ಲ್ಯಾಕ್ ಜತೆಗೆ ಸೆಮಿಫೈನಲ್ನಲ್ಲಿ ಮುಗ್ಗರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


