ಕ್ರೀಡೆ

ಶಟ್ಲರ್‌ಗಳಿಂದ ಹೊಸ ಇತಿಹಾಸ?

ಶಟ್ಲರ್‌ಗಳಿಂದ ಹೊಸ ಇತಿಹಾಸ?
Published On :

ಹೈದರಾಬಾದ್: ಮಹತ್ವದ ಏಷ್ಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ 28 ವರ್ಷಗಳ ನಂತರ ಪದಕ ಗೆಲ್ಲುವ ಅವಕಾಶ ಒದಗಿ ಬಂದಿದೆ. 1966ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಪರಿಚಯಿಸಿದಾಗಿನಿಂದ ಭಾರತ ಈ ವಿಭಾಗದಲ್ಲಿ ಕೇವಲ 7 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. 1982ರಲ್ಲಿ ಸೈಯಿದ್ ಮೋದಿ ಗೆದ್ದುಕೊಂಡ ಪದಕವೇ ಸಿಂಗಲ್ಸ್‌ನಲ್ಲಿ ಕೊನೆಯ ಪದಕ.

ಪ್ರಕಾಶ್ ಪಡುಕೋಣೆಯಾಗಲಿ, ಗೋಪಿಚಂದ್ ಅಥವಾ ಸೈನಾ ನೆಹ್ವಾಲ್ ಆಗಲಿ ಇದುವರೆಗೂ ಸೈಯಿದ್ ಮೋದಿ ಕಂಚಿನ ಪದಕ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ಭಾರತದ ಪ್ರತಿಭೆಗಳನ್ನು ನೋಡಿದರೆ, 28 ವರ್ಷಗಳ ಪದಕ ಗೆಲ್ಲುವ ಕನಸು ನನಸಾಗುವ ಸಾಧ್ಯತೆಗಳಿವೆ. ಸಿಂಗಲ್ಸ್ ವಿಭಾಗದಲ್ಲಿ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಹಾಗೂ ಪುರುಪಲ್ಲಿ ಕಶ್ಯಪ್ ಅವರು ಭಾರತಕ್ಕೆ ಪದಕ ಗೆದ್ದು ತರಬಲ್ಲ ತಾರೆಗಳು ಎನಿಸಿದ್ದಾರೆ.

ಆದರೆ, ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳು ಕೆಲ ಬದಲಾವಣೆಗಳನ್ನು ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಭಾರತ ಬ್ಯಾಡ್ಮಿಂಟನ್‌ನ ಚಿನ್ನದ ಹುಡುಗಿ ಸೈನಾ ನೆಹ್ವಾಲ್ ತಮ್ಮ ತರಬೇತಿ ಸ್ಥಳವನ್ನು ಹೈದರಾಬಾದ್‌ನ ಗೋಪಿಚಂದ್‌ನ ಅಕಾಡೆಮಿಯಿಂದ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಗೆ ವರ್ಗಾಯಿಸಿದ್ದಾರೆ. ಅಲ್ಲಿ ಮಾಜಿ ರಾಷ್ಟ್ರೀಯ ಕೋಚ್ ವಿಮಲ್ ಕುಮಾರ್ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲವಾದದ್ದು, ಸೈನಾ ಗೋಪಿಚಂದ್ ಅಕಾಡೆಮಿ ತೊರೆಯಲು ಕಾರಣವಾಗಿರಬಹುದು. ಆದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು ಈಗಲೂ ಗೋಪಿಚಂದ್ ಅಕಾಡೆಮಿಯಲ್ಲೇ ತರಬೇತಿ ಪಡೆಯುತ್ತಿದ್ದಾರೆ.

2011ರಲ್ಲಿ ಸೈನಾ ಗೋಪಿಚಂದ್ ತೊರೆದಿದ್ದರು. ಆಗ ಸುದ್ದಿ ಇಷ್ಟೊಂದು ಮಹತ್ವ ಪಡೆದುಕೊಂಡಿರಲಿಲ್ಲ. ಆದರೆ ಈ ಬಗ್ಗೆ ಗೋಪಿಚಂದ್ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಅಲ್ಲದೆ, ವಿಮಲ್ ಕುಮಾರ್ ಸಹ ಸೈನಾ ನೆಹ್ವಾಲ್ ಅವರಿಗೆ ತರಬೇತಿ ನೀಡುವಲ್ಲಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.