ಕ್ರೀಡೆ

ಏಷ್ಯನ್ ಕ್ರೀಡೋತ್ಸವಕ್ಕೆ ವೈಭವದ ಮೆರುಗು

ಏಷ್ಯನ್ ಕ್ರೀಡೋತ್ಸವಕ್ಕೆ ವೈಭವದ ಮೆರುಗು
Published On :

ಇಂಚಾನ್: ದಕ್ಷಿಣ ಕೊರಿಯಾದ ರಾಜಧಾನಿ ಇಂಚಾನ್‌ನಲ್ಲಿ ಶುಕ್ರವಾರ ಸೂರ್ಯಾಸ್ಪದ ನಂತರ ವಿಭಿನ್ನ ವರ್ಣಮಯ ಲೋಕವೊಂದು ಧರೆಗಿಳಿದಂತಾಗಿತ್ತು. 17ನೇ ಏಷ್ಯನ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಮೂಲಕ ನಡೆದ ಉದ್ಘಾಟನಾ ಸಮಾರಂಭದಲ್ಲಿ ಏಷ್ಯಾದ ವಿವಿಧ ಕಲೆ, ಸಂಸ್ಕೃತಿಯನ್ನು ವಿಶ್ವಕ್ಕೆ ಅನಾವರಣ ಮಾಡಿದ್ದು, ಕಲಾ ರಸಿಕರ ಮನಸೂರೆಗೊಳ್ಳುವಂತೆ ಮಾಡಿತು.

ಏಷ್ಯಾ ಲಾಂಗ್ ಟೈಮ್ ಎಗೊ, ಏಷ್ಯಾ ಮೀಟಿಂಗ್ ತ್ರೂ ದ ಸೀ, ಏಷ್ಯಾ ಆ್ಯಸ್ ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಹಾಗೂ ಏಷ್ಯಾ ಆ್ಯಸ್ ಒನ್ ಅಂಡ್ ಫ್ಯೂಚರ್ ಗೊಯಿಂಗ್ ವಿತ್ ಟುಡೇ ಎಂಬ ನಾಲ್ಕು ವಿಭಿನ್ನ ಪರಿಕಲ್ಪನೆಯ ಮೂಲಕ ಏಷ್ಯಾದ ಇತಿಹಾಸವನ್ನು ಕಲಾವಿದರ ಮೂಲಕ ಕೆಲವೇ ನಿಮಿಷಗಳಲ್ಲಿ ವರ್ಣರಂಜಿತ ಚಿತ್ರಣ ನೀಡಿದ ಬಗೆಯಂತೂ ಅತ್ಯದ್ಬುತವಾಗಿತ್ತು ಎಂದರೆ ತಪ್ಪಿಲ್ಲ.

ಎರಡು ವಾರಗಳ ಕಾಲ ನಡೆಯಲಿರುವ ಏಷ್ಯಾ ಖಂಡದ ಕ್ರೀಡಾ ಕಾಳಗಕ್ಕೆ ಅದ್ಧೂರಿ ಆರಂಭ ದೊರೆಯಿತು. ದಕ್ಷಿಣ ಕೊರಿಯಾದ ಸಂಗೀತಗಾರರಾದ ಓಕ್ ಜೂ ಹುನ್ ಮತ್ತು ಚುಂಗ್ ಸುಂಗ್ ಹೌ ಅವರು ನೀಡಿದ ಗರ್ಲ್ ಆನ್ ಎ ಶಿಪ್ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ದಕ್ಷಿಣ ಕೊರಿಯಾದ ಇತಿಹಾಸ ನಾಯಕರಾದ ಪ್ರಿನ್ಸ್ ಬಿರುಯ್ ಹಾಗೂ ಸಿಮ್ ಚಿಯೊಂಗ್ ಅವರ ಕತೆಯನ್ನು ಚಿತ್ರಿಸಿತು.

1899 ನೃತ್ಯಗಾರರು ಹಾಗೂ ಇತರೆ ಕಲಾವಿದರ ಜತೆಗೆ ಗಂಗ್ನಮ್ ಖ್ಯಾತಿಯ ಸೈ ನೆರೆದಿದ್ದ, ಕ್ರೀಡಾಪಟುಗಳು ಹಾಗೂ ಕ್ರೀಡಾ ರಸಿಕರನ್ನು ತಮ್ಮ ನೃತ್ಯ ಮಾಡುವಂತೆ ಪ್ರೇರೇಪಿಸುವ ಮೂಲಕ ಸಮಾರಂಭಕ್ಕೆ ವಿಭಿನ್ನ ಸ್ಫೂರ್ತಿ ನೀಡಿದರು.

ಗಂಗ್ನಮ್ ನಂತರ ಪಿಯಾನೊ, ಡ್ರಮ್ಸ್ ಹಾಗೂ ಆರ್ಕ್ರೇಸ್ಟ್ರಾ ಕಲಾವಿದರು ಅಭಿಮಾನಿಗಳನ್ನು ರಂಜಿಸಿದರು. ನಂತರ ಬಾನಂಗಳದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿದ ಪಟಾಕಿಗಳು ಕಪ್ಪನೆ ಮೋಡದಲ್ಲಿ ಹೊಸ ಕಲರವವನ್ನು ಮೂಡಿಸಿತು. ನಂತರ ರಿಪಬ್ಲಿಕ್ ಆಫ್ ಕೊರಿಯಾದ ಅಧ್ಯಕ್ಷ ಪರ್ಕ್‌ಗ್ಯುನ್ ಹೇ ಅವರು ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.

ಶಾಂತಿ ಹಾಗೂ ಸೌಹಾರ್ದತೆಯ ಪ್ರತೀಕವಾಗಿರುವ ಕ್ರೀಡಾಕೂಟದ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಸುಮಾರು 60 ಸಾವಿರಕ್ಕೂ ಹೆಚ್ಚಿನ ಜನರು ಕ್ರೀಡಾಂಗಣದಲ್ಲಿ ಸಾಕ್ಷಿಯಾದರೆ, ವಿಶ್ವದಾದ್ಯಂತ ಕೋಟ್ಯಾಂತರ ಕ್ರೀಡಾ ರಸಿಕರು ಟಿವಿ ಮೂಲಕ ವರ್ಣಮಯ ಚಿತ್ತಾರವನ್ನು ಕಣ್ತುಂಬಿಕೊಂಡರು.

ಮನ ಸೆಳೆದ ಪಥಸಂಚಲನ: ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕ ನಂತರ ಏಷ್ಯಾದ 45 ರಾಷ್ಟ್ರಗಳು ತಮ್ಮ ತಂಡದೊಂದಿಗೆ ಕ್ರೀಡಾಂಗಣದಲ್ಲಿ ಪಥ ಸಂಚಲನ ನಡೆಸಿದ್ದು, ಸಮಾರಂಭದ ಪ್ರಮುಖ ಅಂಶವಾಗಿತ್ತು. ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಭಾರತದ ಪಡೆಯನ್ನು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದ್ದು ಭಾರತ ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿತು. ಅಲ್ಲದೆ ಪ್ರತಿರಾಷ್ಟ್ರ ಪಥಸಂಚಲನ ಮಾಡುವಾಗ ಆಯಾ ರಾಷ್ಟ್ರಗಳ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟುವಂತಿತ್ತು. ಅತಿಥೇಯ ದಕ್ಷಿಣ ಕೊರಿಯಾ ಕಡೇಯದಾಗಿ ಪಥ ಸಂಚಲನ ಮಾಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.