ಕ್ರೀಡೆ

ಟೆನಿಸ್‌ಗೆ ಲೀನಾ ವಿದಾಯ

ಟೆನಿಸ್‌ಗೆ ಲೀನಾ ವಿದಾಯ
Published On :

ಬೀಜಿಂಗ್: ಚೀನಾದ ಮೊದಲ ಹಾಗೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಆ ದೇಶದ ಏಕೈಕ ಆಟಗಾರ್ತಿಯಾಗಿರುವ ಲೀ ನಾ ಅಂತಾರಾಷ್ಟ್ರೀಯ ಟೆನಿಸ್ ಬದುಕಿಗೆ ವಿದಾಯ ಹೇಳಿದ್ದಾರೆ.

32ರ ಶುಕ್ರವಾರ ಅಧಿಕೃತವಾಗಿ ತಮ್ಮ ಈ ನಿರ್ಧಾರನವನ್ನು ಪ್ರಕಟಿಸಿದ್ದಾರೆ. 2011ರಲ್ಲಿ ಫ್ರೆಂಚ್ ಓಪನ್ ಹಾಗೂ 2014ರಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು, ಚೀನಾ ಪರಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಏಕೈಕ ಹಾಗೂ ಏಷ್ಯದ್ ಮೊದಲ ಆಟಗಾರ್ತಿಯಾಗಿರುವುದು ವಿಶೇಷ.

ಎರಡು ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳು ಸೇರಿದಂತೆ ಒಟ್ಟಾರೆ 9 ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ಲೀನಾ ಗೆದ್ದುಕೊಂಡಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 2ನೇ ಶ್ರೇಯಾಂಕ ತಲುಪಿರುವುದು ಆಕೆಯ ಮತ್ತೊಂದು ಶ್ರೇಷ್ಠ ಸಾಧನೆಯಾಗಿದೆ.

2014ನೇ ಸಾಲು ನನ್ನ ಜೀವನದ ಮಹತ್ವದ ಗಳಿಗೆಗಳಲ್ಲಿ ಒಂದಾಗಿದೆ. ಅಲ್ಲದೆ, ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವುದು ಕಠಿಣವೂ ಆಗಿದೆ. ಎಂದು ಲೀನಾ ಪ್ರತಿಕ್ರಿಯಿಸಿದ್ದಾರೆ.

ವೃತ್ತಿಪರ ಆಟಗಾರ್ತಿಯಾಗಿರುವ ನಾನು ಟೆನಿಸ್ ಕೋರ್ಟ್‌ನಿಂದ ನಿವೃತ್ತಿಯಾಗುವುದು ಈಗ ಸೂಕ್ತ ಸಮಯವಾಗಿದೆ. ತಮ್ಮ ಟೆನಿಸ್ ವೃತ್ತಿ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

ಲೀ ನಿವೃತ್ತಿ ಅಚ್ಚರಿಯನ್ನೇ ತಂದಿದೆ. ಮಂಡಿ ನೋವಿನಿಂದ ಬಳಲುತ್ತಿದ್ದ ಕಾರಣ ಈ ಸಾಲಿನ ಯುಎಸ್‌ಓಪನ್‌ನಿಂದಲೂ ಅವರು ಹೊರಗುಳಿದಿದ್ದರು. ಲೀ ಪ್ರಸ್ತುತ ಜರ್ಮನಿಯಲ್ಲಿ ತಮ್ಮ ಎರಡೂ ಮಂಡಿಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕೆಯ ಪತಿ ಜಿಯಾಂಗ್ ಶಾನ್ ಹೇಳಿದ್ದಾರೆ.

ಲೀ ನಾರ ನಿವೃತ್ತಿಗೆ ಮಂಡಿ ನೋವು ಪ್ರಮುಖ ಕಾರಣ ಎಂದೇ ಹೇಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.