ಕ್ರೀಡೆ

ಸಂದೀಪ್‌ಗೆ ಕಂಚು

ಸಂದೀಪ್‌ಗೆ ಕಂಚು
Published On :

ಇಂಚಾನ್: ಭರವಸೆಯ ಈಜುಪಟು ಸಂದೀಪ್ ಸೆಜ್ವಲ್ ಭಾರತಕ್ಕೆ ಏಷ್ಯನ್ ಗೇಮ್ಸ್‌ನ ಈಜುಕೊಳದಲ್ಲಿ ಪದಕವೊಂದನ್ನು ಸಂಪಾದಿಸಿಕೊಟ್ಟಿದ್ದಾರೆ. ಶುಕ್ರವಾರ ನಡೆದ ಪುರುಷರ 50 ಮೀಟರ್ ಬ್ರೆಸ್ಟ್  ಸ್ಟ್ರೋಕ್ ಸ್ಪರ್ಧೆಯಲ್ಲಿ ಕಂಚಿನ ಪದಕ್ಕೆ ಭಾಜನರಾಗಿದ್ದಾರೆ.

ಸೆಜ್ವಾಲ್ ಒಟ್ಟುದೂರವನ್ನು 28.26 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಮೂರನೇ ಸ್ಥಾನದ ಗೌರವ ಪಡೆದು ಈ ಸಾಧನೆ ಮಾಡಿದರು. ಇದರೊಂದಿಗೆ ಇಂಚಾನ್ ಏಷ್ಯನ್ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಭಾರತ ಚೊಚ್ಚಲ ಪದಕ ಸಂಪಾದಿಸಿದಂತಾಗಿದೆ. ಕಜಕಿಸ್ತಾನದ ಈಜುಗಾರ ಡಿಮಿಟ್ರಿ ಬಲಾಂಡಿಯನ್ 27.28ಸೆ.ಗಳ ಸಾಧನೆಯೊಂಗಿದೆ ಚಿನ್ನದ ಪದಕ ಗೆದ್ದುಕೊಂಡರೆ, ಜಪಾನಿನ ಯಾಸುಹಿರೊ ಕೊಸೇಕಿ 27.79ಸೆ.ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ತೃಪ್ತಿ ಹೊಂದಿದರು.

ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ 24ರ ವೀರಧವಳ್ ಖಾಡೆ 50 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲೇ ಪದಕ ಗೆದ್ದುಕೊಳ್ಳುವ ಮೂಲಕ 24 ವರ್ಷಗಳ ಪದಕದ ಬರವನ್ನು ನೀಗಿಸಿದ್ದರು.
ಅದಕ್ಕೂ ಮುನ್ನ ಖಾಜನ್ ಸಿಂಗ್ 1986ರ ಕ್ರೀಡಾಕೂಟದ 200ಮಿ. ಬಟರ್ ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈಗ 25ರ ಸಂದೀಪ್ ಸೆಜ್ವಲ್ ಭಾರತಕ್ಕೆ ಏಷ್ಯನ್ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಮತ್ತೊಂದು ಪದಕದ ಗೌರವ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.