ಚೈನ್ ಸಿಂಗ್ಗೆ ಕಂಚು

ಏಷ್ಯನ್ ಕ್ರೀಡಾಕೂಟದ ಶೂಟಿಂಗ್ ಸ್ಪರ್ಧೆಯಲ್ಲೇ ಭಾರತಕ್ಕೆ 9ನೇ ಪದಕ ಲಭಿಸಿದೆ. ಭರವಸೆಯ ಗುರಿಕಾರ ಚೈನ್ ಸಿಂಗ್ 50 ಮೀಟರ್ ರೈಫಲ್ 3-ಪೋಸಿಷನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಫೇನಲ್ನಲ್ಲಿ ಅವರು ಒಟ್ಟು 441
.7 ಅಂಕಗಳ ಸಂಪಾದನೆಯೊಂದಿಗೆ ಈ ಸಾಧನೆ ಮಾಡಿದರು. ಚೀನಾದ ಗುರಿಕಾರರಾದ ಕಾವೊ ಯೀಫಿ ಮತ್ತು ಝೂ ಕಿನನ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದರು.
ಅರ್ಹತಾ ಹಂತದಲ್ಲಿ ಏಳನೇ ಸ್ಥಾನ ಪಡೆಯುವ ಮೂಲಕ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಭಾರತದ ಏಕೈಕ ಸ್ಪರ್ಧಿ ಎನಿಸಿದ್ದ 25ರ ಜೈನ್ ಸಿಂಗ್, ಫೈನಲ್ನಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿದರಾದರೂ, ಅಗ್ರ ಎರಡೂ ಸ್ಥಾನ ಪಡೆಯುವಲ್ಲಿ ಮಾತ್ರ ನಿರಾಸೆ ಅನುಭವಿಸಿದರು.
ಉತ್ತಮ ಗುರಿ ನೆಟ್ಟ ಕಾವೊ 455.5 ಮತ್ತು ಕಿನನ್ 455.2 ಅಂಕಗಳಿಸಿ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದುಕೊಂಡರು. ಇತರೆ ಸ್ಪರ್ಧಿಗಳಾದ ಸಂಜೀವ್ ರಜಪೂತ್ ಮತ್ತು ಗಗನ್ ನಾರಂಗ್ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 12ನೇ ಮತ್ತು 14ನೇ ಸ್ಥಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


