ಸಾನಿಯಾ-ಸಾಕೇತ್ಗೆ ಚಿನ್ನ

ಇಂಚಾನ್: 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕದ ಬೇಟೆ ಯಶಸ್ವಿಯಾಗಿ ಮುಂದುವರಿದಿದ್ದು, ಸೋಮವಾರ ಹತ್ತನೇ ದಿನ ಟೆನಿಸ್ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಜಾ ಮತ್ತು ಸಾಕೇತ್ ಮೈನೇನಿ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಮಹತ್ಸಾಧನೆ ಮಾಡಿದ್ದಾರೆ.
ಇಂದು ನಡೆದ ಚಿನ್ನದ ಪದಕ್ಕಾಗಿನ ಬೇಟೆಯಲ್ಲಿ ಸಾನಿಯಾ ಮತ್ತು ಸಾಕೇತ್ 6-4, 6-3 ನೇರ ಸೆಟ್ಗಳಿಂದ ಟೈನೀಸ್ ತೈಪೇನ ಸೀನ್ ಪೆಂಗ್ ಮತ್ತು ಹಾವೋ ಚಿಂಗ್ ಜೋಡಿಯ ವಿರುದ್ಧ ಅದ್ಭುತ ಗೆಲವು ದಾಖಲಿಸಿದರು. ಆ ಮೂಲಕ ಭಾರತಕ್ಕೆ 6ನೇ ಚಿನ್ನದ ಪದಕ ಗೆದ್ದುಕೊಟ್ಟ ಸಾಧನೆ ಇವರದಾಯಿತು.
ಮುಖ್ಯವಾಗಿ ಸಾನಿಯಾ ತಮ್ಮ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಒಟ್ಟಾರೆ 9ನೇ ಪದಕ ಗೆದ್ದ ಸಾಧನೆ ಮಾಡಿದರು. ಇದೇ ಕೂಟದಲ್ಲಿ ಅವರು ಪ್ರಾರ್ಥನಾ ಜೊತೆಗೂಡಿ ಮಹಿಳೆಯರ ಡಬಲ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಎರಡನೇ ಶ್ರೇಯಾಂಕಿತ ಜೋಡಿಯಾದ ಸಾನಿಯಾ-ಸಾಕೇತ್ ಎರಡೂ ಸೆಟ್ಗಳಲ್ಲಿ ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸುವ ಮೂಲಕ ಸುಮಾರು ಒಂದೂವರೆ ಗಂಟೆ ಆಟದಲ್ಲಿ ಗೆಲುವಿನ ಕೇಕೆ ಹಾಕುವ ಮೂಲಕ ಚಿನ್ನದ ಪದಕದ ಮೇಲೆ ತಮ್ಮ ಮೊಹರು ಒತ್ತಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


