ಮಹಿಳಾ ಬಾಕ್ಸಿಂಗ್ ಸರಿತಾ ದೇವಿ ವಿರುದ್ಧ ಶಿಸ್ತು ಕ್ರಮ: ಎಐಬಿಎ

ಇಂಚಾನ್: ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್(60 ಕೆ.ಜಿ ಮಿಡಿಲ್ ವೆಯಿಟ್) ವಿಭಾಗದಲ್ಲಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿದ ಭಾರತದ ಬಾಕ್ಸಿಂಗ್ ಕ್ರೀಡಾಪಟು ಲೈಶ್‌ರಾಂ ಸರಿತಾ ದೇವಿ ಎಐಬಿಎ ತನಿಖೆ ಎದುರಿಸಲಿದ್ದಾರೆ.
ಏಷ್ಯನ್ ಕ್ರೀಡಾಕೂಟಕ್ಕೆ ತೆರೆ ಬೀಳುತ್ತಿದ್ದಂತೆ ಪದಕವನ್ನು ಹಿಂತಿರುಗಿಸಿರುವ ಸರಿತಾ ದೇವಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (
ಮಂಗಳವಾರ ನಡೆದ ಸೆಮಿಫೈನಲ್ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಜಿನಾ ಪಾರ್ಕ್ ವಿರುದ್ಧ ಪರಾಭವಗೊಂಡಿದ್ದರು. ಜಿನಾ ಪಾರ್ಕ್‌ಗೆ ತಾನೇ ಹೆಚ್ಚು ಪಂಚ್ ಕೊಟ್ಟಿದ್ದರೂ, ಪಂದ್ಯದಲ್ಲಿ ಜಿನಾ ಪಾರ್ಕ್‌ಗೆ ಗೆಲುವು ಘೋಷಿಸಲಾಗಿತ್ತು. ಇದು ತೀರ್ಪುಗಾರರು ಮಾಡಿದ ಅನ್ಯಾಯ ಎಂದು ಸರಿತಾ ಆರೋಪಿಸಿದ್ದರು.
ಬುಧವಾರ ಪದಕ ಪ್ರಧಾನ ಸಮಾರಂಭದಲ್ಲಿ ಪೋಡಿಯಂ ಮೇಲೇರಿ ಸರಿತಾ ಕಣ್ಣೀರಿಡುತ್ತಾ ನಿಂತಿದ್ದರು. ಕಂಚಿನ ಪದಕವನ್ನು ಅವರ ಕೊರಳಿಗೆ ಹಾಕಲು ಬಂದಾಗ ಅದನ್ನು ಕೈಯಲ್ಲಿ ಸ್ವೀಕರಿಸಿದ ಸರಿತಾ, ನಂತರ ಪೋಡಿಯಂನಿಂದ ಇಳಿದು ಬೆಳ್ಳಿ ಪದಕ ಗಳಿಸಿದ ದಕ್ಷಿಣ ಕೊರಿಯಾದ ಜಿನಾ ಪಾರ್ಕ್‌ನ ಕೊರಳಿಗೆ ಹಾಕಿ ತಮ್ಮ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದರು.
ತಪ್ಪು ಫಲಿತಾಂಶ ನೀಡುವ ಮೂಲಕ ತೀರ್ಪುಗಾರರು ನನ್ನನ್ನು ಪರಾಭವಗೊಳಿಸಿದ್ದಾರೆ ಎಂದು ಸರಿತಾ ಆರೋಪಿಸಿದ್ದು, ಈ ಬಗ್ಗೆ ಭಾರತ ನೀಡಿದ ದೂರನ್ನು ಅಧಿಕೃತರು ತಳ್ಳಿ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸರಿತಾ ಅವರ ಪತಿ ತೊಯ್ಬಾ ಸಿಂಗ್, ಪ್ರಸ್ತುತ ಪಂದ್ಯ ಫಿಕ್ಸ್ ಆಗಿತ್ತು, ತೀರ್ಪುಗಾರರ ನಿರ್ಧಾರ ಸರಿಯಿರಲಿಲ್ಲ ಎಂದು ಹೇಳಿದ್ದಾರೆ.
ಭಾರತಕ್ಕಾಗಿ ಪದಕಗಳನ್ನು ಗೆಲ್ಲುವಲ್ಲಿ ನಾವೇ ಮುಂದಿದ್ದೀವೆ. ಹೀಗಿರುವಾಗ ನಾವು ಪ್ರತಿಭಟಿಸುವುದಲ್ಲಿ ತಪ್ಪೇನಿದೆ? ನಾವು ಈಶಾನ್ಯ ಭಾರತದವರು ಎಂದು ನಮ್ಮನ್ನು ಕಡೆಗಣಿಸಲಾಗುತ್ತಿದೆ. ಹಾಗಾದರೆ ನಾವು ಭಾರತೀಯರಲ್ವಾ? ಎಂದು ಸರಿತಾ ಪ್ರಶ್ನಿಸಿದ್ದಾರೆ. ನಾವು ಕ್ರೀಡಾಪಟುಗಳು ಈ ಹಂತಕ್ಕೆ ತಲುಪಲು ತುಂಬಾನೇ ತ್ಯಾಗ ಮಾಡಿದ್ದೀವಿ. ನಮ್ಮ ಮಗುವಿಗಾಗಿ ನಾವು ಸಮಯವನ್ನು ಕೊಟ್ಟಿಲ್ಲ ಎಂದು ಗದ್ಗದಿತರಾಗಿದ್ದಾರೆ.
ಸರಿತಾ ದೇವಿ ಅವರಿಗೆ ನೀಡಿದ ತೀರ್ಪಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಮೇರಿಕೋಮ್, ಸರಿತಾ ಅವರ ಎದುರಾಳಿ ಕೊರಿಯನ್ ಆಗಿರುವುದರಿಂದ ಸರಿತಾ ಸೋಲುವಂತಾಯಿತು. ಇದು ಖೇದಕರ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


