ಮೂರನೇ ಸುತ್ತಿಗೆ ಸೈನಾ

ವಿಶ್ವದ ನಂಬರ್ ಒನ್ ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ 5 ಲಕ್ಷ ಡಾಲರ್ ಬಹುಮಾನ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ವಿಶ್ವದ ನಂಬರ್ ಒನ್ ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ 5 ಲಕ್ಷ ಡಾಲರ್ ಬಹುಮಾನ ಮೊತ್ತದ ಮಲೇಷಿಯನ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್  ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಹೆಜ್ಜೆ ಹಾಕಿದ್ದಾರೆ. ಪುಟ್ರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳೆಯರ
ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್, 21-13, 21-9 ನೇರ ಗೇಮ್ ಗಳಿಂದ ಚೀನಾದ ಯಾವೋಕ್ಷುಯಿ ಅವರನ್ನು ಸೋಲಿಸಿದರು.
ಕಶ್ಯಪ್, ಪ್ರಣಯ್ ಗೆ ಸೋಲು: ಪುರುಷರ ವಿಭಾಗದಲ್ಲಿ ಪರುಪಳ್ಳಿ ಕಶ್ಯಪ್ ಹಾಗೂ ಎಚ್.ಎಸ್. ಪ್ರಣಯ್ ಅವರು ಎರಡನೇ ಸುತ್ತಿನಲ್ಲೇ ಸೋಲನುಭವಿಸಿ ಹೊರಬಿದ್ದಿದ್ದಾರೆ10-21, 6-21 ನೇರ ಗೇಮ್ ಗಳಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಚೆನ್ ಲಾಂಗ್ ಎದುರು ತಲೆಬಾಗಿಸಿದರು. ವಿಶ್ವದ 17ನೇ ಶ್ರೇಯಾಂಕಿತ ಆಟಗಾರ ಹಾಗೂ ಕಾಮನ್‍ವೆಲ್ತ್ ಗೇಮ್ಸ್  ಚಾಂಪಿಯನ್ ಕಶ್ಯಪ್, ಕೇವಲ 35 ನಿಮಿಷಗಳ ಆಟದಲ್ಲಿಯೇ ಚೆನ್ ಲಾಂಗ್ ಎದುರು ಸೋಲನುಭವಿಸಿದರು. ಮತ್ತೊಂದು ಪಂದ್ಯದಲ್ಲಿ ವಿಶ್ವದ 14ನೇ ಶ್ರೇಯಾಂಕಿತ ಎಚ್.ಎಸ್.ಪ್ರಣಯ್  ಐದು ಬಾರಿಯ ವಿಶ್ವ ಚಾಂಪಿಯನ್, ಚೀನಾದ  ಲಿನ್ ಡಾನ್ ವಿರುದ್ಧ ಕೇವಲ 52 ನಿಮಿಷಗಳ ಆಟದಲ್ಲಿ 15-21, 14-21ಗೇಮïಗಳಿಂದ ಸೋತರು.
ಮಹಿಳೆಯರ ಡಬಲ್ಸ್ ನ ಎರಡನೇ ಸುತ್ತಿನಲ್ಲಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಇಂಡೋನೇಷಿಯಾದ ನಿತ್ಯ ಕ್ರಿಶಿಂಡಾ
ಮಹೇಶ್ವರಿ ಮತ್ತು ಗ್ರೇಸಿಯಾ ಪೊಲಿಯಿ ವಿರುದ್ಧ 21-23, 21-8, 21-17 ಅಂಕಗಳಿಂದ ಸೋತಿತು. ಇನ್ನು ಭರವಸೆಯ ಆಟಗಾರ ಕೆ.ಶ್ರೀಕಾಂತ್ ಎರಡನೇ ಸುತ್ತಿನ ಪಂದ್ಯದಲ್ಲಿ ಚೀನಾದ ಥೈನ್ ಹೌವೈ 14-21, 18-21 ಗೇಮ್ ಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಭಾರತದ ಏಕೈಕ ಭರವಸೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com