ಉದ್ಯಾನನಗರಿಯಲ್ಲಿ ಶುರುವಾದ ಕಬಡ್ಡಿ ಹಬ್ಬಕ್ಕೆ ತಾರಾ ಮೆರುಗಿನ ಸ್ಪರ್ಶವಾಯಿತು. ಸಿನಿ ಹಾಗೂ ಕ್ರೀಡಾ ತಾರೆಯರು ಆಗಮಿಸಿ, ದೇಸೀ ಕ್ರೀಡೆಗೆ ಕಳೆತಂದರು. ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದರು. ನಟಿ ಹರ್ಷಿಕಾ ಪೂಣಚ್ಚ ಸಹ ಆಗಮಿಸಿದ್ದರು. ಬೆಂಗಳೂರು ಎಫ್ ಸಿ ತಂಡದ ಕೋಚ್ ಆ್ಯಶ್ಲೆ ವೆಸ್ಟ್ ವುಡ್ ಕುಟುಂಬ ಸಮೇತರಾಗಿ ಪಂದ್ಯವನ್ನು ವೀಕ್ಷಿಸಿದರು. ರಾಬಿನ್ ಸಿಂಗ್, ಎನ್.ಎಸ್ ಮಂಜು ಸೇರಿದಂತೆ ಇತರೆ ಆಟಗಾರರು ಸಾಥ್ ನೀಡಿದರು.