ಕೊಹ್ಲಿಯನ್ನು ಫುಟ್ಬಾಲ್ ದಂತಕಥೆ ಮರಾಡೋನಾಗೆ ಹೋಲಿಸಿದ ಗಂಗೂಲಿ

ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಫುಟ್ಬಾಲ್ ದಂತಕಥೆ ಮರಾಡೋನಾಗೆ ಹೋಲಿಸಿದ್ದಾರೆ...
ಮರಾಡೋನಾ, ವಿರಾಟ್ ಕೊಹ್ಲಿ
ಮರಾಡೋನಾ, ವಿರಾಟ್ ಕೊಹ್ಲಿ
ಕೋಲ್ಕತಾ: ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಫುಟ್ಬಾಲ್ ದಂತಕಥೆ ಮರಾಡೋನಾಗೆ ಹೋಲಿಸಿದ್ದಾರೆ. 
ಅರ್ಜೆಂಟೀನಾದ ಮರಾಡೋನಾ ಫುಟ್ಬಾಲ್ ಮೈದಾನಕ್ಕೆ ಕಾಲಿಟ್ಟರೆ ತಮ್ಮನ್ನು ಆಟದಲ್ಲಿ ತೊಡಗಿಸಿಕೊಳ್ಳುವ ಪರಿ ಅದ್ಭುತ. ಮರಾಡೋನಾರಂತೆ ವಿರಾಟ್ ಕೊಹ್ಲಿ ಕೂಡ ಅಪರಿಮಿತ ಉತ್ಸಾಹದೊಂದಿಗೆ ಆಟವಾಡುತ್ತಾರೆ ಎಂದು ಸೌರವ್ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಕೊಹ್ಲಿಯನ್ನು ನಾನು ಮೈದಾನದಲ್ಲಿ ಅಥವಾ ಟಿವಿಯಲ್ಲಿ ನೋಡಿದಾಗಲೆಲ್ಲಾ ಅದೇನೋ ಒಂದು ರೀತಿಯ ವಿಶ್ವಾಸ ಮೂಡುತ್ತದೆ. ಆತನ ಬಾಡಿ ಲ್ಯಾಂಗ್ವೇಜ್ ನಿಜಕ್ಕೂ ಅದ್ಭುತ. ಮೈದಾನದ ಆಚೆಯೂ ಕೊಹ್ಲಿಯಲ್ಲಿ ಉತ್ಸಾಹ ತುಂಬಿರುತ್ತದೆ. ನಾನು ಕೊಹ್ಲಿಯ ಬಿಗ್ ಫ್ಯಾನ್" ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com