

ಗಾಲೆ: ಆರಂಭಿಕ ಶಿಖರ್ ಧವನ್ (134: 271 ಎಸೆತ, 13 ಬೌಂಡರಿ) ಹಾಗೂ ನಾಯಕ ವಿರಾಟ್ ಕೊಹ್ಲಿ (103: 191 ಎಸೆತ, 11 ಬೌಂಡರಿ)ಯ ಜಂಟಿ ಶತಕದ ಜತೆಗೆ ಭಾರತದ ಸ್ಪಿನ್ ದಾಳಿಯಿಂದ ಕಂಗಾಲಾಗಿರುವ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, ಲಂಕನ್ನರಿಗೆ ಭಾರೀ ಸವಾಲು ಎದುರಾಗಿದೆ.
ಇಲ್ಲಿನ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಂದೂ ಲಂಕನ್ನರನ್ನು ತೀವ್ರ ದುಗುಡಕ್ಕೆ ದೂಡಿದ ಭಾರತದ ಆಟಗಾರರು, ಐದು ದಿನಗಳ ಪಂದ್ಯವನ್ನು ಮೂರೇ ದಿನದಲ್ಲಿ ಕೈವಶಮಾಡಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಭಾರತ ವಿರುದ್ಧ 192 ರನ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದ ಶ್ರೀಲಂಕಾ, ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 5 ರನ್‍ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ತತ್ತರಿಸಿದೆ. ಆರಂಭಿಕರಾದ ದಿಮುತ್ ಕರುಣಾ-ರತ್ನೆ ಹಾಗೂ ಕೌಶಲ್ ಸಿಲ್ವಾರನ್ನು ಸ್ಪಿನ್ ದ್ವಯರಾದ ಆರ್. ಅಶ್ವಿನ್ ಮತ್ತು ಅಮಿತ್ ಮಿಶ್ರಾ ಶೂನ್ಯಕ್ಕೆ ಔಟ್ ಮಾಡುವುದರೊಂದಿಗೆ ಆತಿಥೇಯರ ಪಾಳೆಯದಲ್ಲಿ ನಡುಕ ಹುಟ್ಟಿಸಿದರು.
ಭಾರತವನ್ನು ಮತ್ತೆ ಬ್ಯಾಟಿಂಗ್‍ಗೆ ಇಳಿಸಲು ಲಂಕಾ ಇನ್ನೂ 187 ರನ್ ಗಳಿಸಬೇಕಿರುವ ಲಂಕಾ ತೀವ್ರ ಒತ್ತಡಕ್ಕೆ ಸಿಲುಕಿದೆ. ಸ್ಪಿನ್ ಸುಳಿಯಲ್ಲಿ ಲಂಕನ್ನರನ್ನು ಸುಲಭವಾಗಿ ಕೆಡವುವ ಲೆಕ್ಕಾಚಾರದಲ್ಲಿ ಕೊಹ್ಲಿ ಅನುಸರಿಸು-ತ್ತಿರುವ ತಂತ್ರಗಾರಿಕೆಯಿಂದ ಬಚಾವಾಗುವ ಬಗೆಗಾಗಿ ಲಂಕಾ ತಡಕಾಡುವಂತಾಗಿದೆ.
ಎರಡನೇ ದಿನದಾಟ ನಿಂತಾಗ ಧಮ್ಮಿಕಾ ಪ್ರಸಾದ್ (3) ಹಾಗೂ ವಿದಾಯದ ಸರಣಿಯನ್ನು ಆಡುತ್ತಿರುವ ಲಂಕಾದ ಹಿರಿಯ ಕ್ರಿಕೆಟಿಗ ಕುಮಾರ್ ಸಂಗಕ್ಕಾರ 1 ರನ್ ಮಾಡಿ ಕ್ರೀಸ್‍ನಲ್ಲಿದ್ದರು. ಲಂಕಾವನ್ನು ಸೋಲಿನ ದವಡೆಯಿಂದ ಪಾರುಮಾಡಲು ಈ ಈರ್ವರು ಆಟಗಾರರ ಜತೆಗೆ ಮಿಕ್ಕವರು ಎಷ್ಟರಮಟ್ಟಿಗೆ ಹೋರಾಟ ನಡೆಸಲಿದ್ದಾರೆ ಎಂಬುದಂತೂ ಸದ್ಯದ ಕೌತುಕವಾಗಿ ಮಾರ್ಪಟ್ಟಿದೆ.
ಕೊಹ್ಲಿ-ಧವನ್ ದಾಖಲೆ ಜತೆಯಾಟ: ಇನ್ನು ಪಂದ್ಯದ ಮೊದಲ ದಿನದಂದು ಭಾರತ ಅನುಭವಿಸಿದ್ದ ಆರಂಭಿಕ ಆಘಾತವನ್ನು ಮೆಟ್ಟಿನಿಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಆರಂಭಿಕ ಶಿಖರ್ ಧವನ್ ಮತ್ತು ನಾಯಕ ವಿರಾಟ್ ಕೊಹ್ಲಿ, ಎರಡನೇ ದಿನವಾದ ಗುರುವಾರದಂದು ಸೂಕ್ಷ್ಮ ಜ್ಞತೆಯ ಬ್ಯಾಟಿಂಗ್- ನೊಂದಿಗೆ ದಾಖಲೆ ಜತೆಯಾಟ-ವಾಡಿತು. ಅವರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ವೃದ್ಧಿಮಾನ್ ಸಾಹ (60) ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ಭಾರತ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 117.4 ಓವರ್‍ಗಳಲ್ಲಿ 375 ರನ್‍ಗಳಿಗೆ ಆಲೌಟ್ ಆಯಿತು.
ಬುಧವಾರ ಕ್ರಮವಾಗಿ 53 ಮತ್ತು 45 ರನ್ ಮಾಡಿ ಔಟಾಗದೆ ಉಳಿದಿದ್ದ ಧವನ್ ಮತ್ತು ಕೊಹ್ಲಿಯನ್ನು ಆದಷ್ಟು ಬೇಗನೆ ವಿಲಿಯನ್‍ಗೆ ಕಳುಹಿಸಬೇಕೆಂಬ ಸಿಂಹಳೀಯರ ಹವಣಿಕೆ ಈಡೇರಲಿಲ್ಲ. ಬದಲಿಗೆ ಸ್ಥಿರ ಪ್ರದರ್ಶನದ ಗುರಿ ಹೊತ್ತಿದ್ದ ಈ ಜೋಡಿ ಲಂಕಾ ಬೌಲರ್‍ಗಳನ್ನು ಶಿಸ್ತು-ಬದ್ಧವಾಗಿ ನಿಭಾಯಿಸಿ ರನ್ ಕದಿಯುತ್ತಲೇ ಸಾಗಿತಲ್ಲದೆ, 3ನೇ ವಿಕೆಟ್‍ಗೆ 227 ರನ್ ಗಳ ಭವ್ಯ ಜತೆಯಾಟವಾಡಿ ಹೊಸ ದಾಖಲೆ ಬರೆಯಿತು.
ಏಕೆಂದರೆ ಲಂಕಾ ವಿರುದ್ಧ 1993ರಲ್ಲಿ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ಗಳಿಸಿದ್ದ 162 ರನ್ ಭಾರತೀಯ ಜೋಡಿಯ ಗರಿಷ್ಠ ಮೊತ್ತವೆನಿಸಿತ್ತು. ಒಂದೊಮ್ಮೆ ಶತಕದ ನಂತರ ಹೆಚ್ಚುಹೊತ್ತು ಕ್ರೀಸ್‍ನಲ್ಲಿ ನಿಲ್ಲದ ಕೊಹ್ಲಿ ,ಕೌಶಲ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಸಿಲುಕಿ ಹೊರನಡೆದರೆ ಬಳಿಕ ಬಂದ ಅಜಿಂಕ್ಯ ರಹಾನೆ (0) ಕೂಡ ಇದೇ ಕೌಶಲ್‍ಗೆ ಬಲಿಯಾದರು. ಆದರೆ ವಿಕೆಟ್‍ಕೀಪರ್ ವೃಧಿಮಾನ್ ಸಾಹ ಅವರನ್ನು ಕೂಡಿಕೊಂಡ ಧವನ್ 5ನೇ ವಿಕೆಟ್‍ಗೆ 37 ರನ್ ಜತೆಯಾಟವಾಡಿ ಬಳಿಕ ನುವಾನ್ ಪ್ರದೀಪ್‍ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು.
ಆನಂತರ ಭಾರತದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಸಾಹ ಅವರ ಅರ್ಧಶತಕ ಮಹತ್ವದ ಪಾತ್ರವಹಿಸಿತು. ಲಂಕಾ ಪರ ಆಫ್ ಸ್ಪಿನ್ನರ್ ತರಿಂದು ಕೌಶಲ್ ಕೆಳ ಕ್ರಮಾಂಕಿತ ಆಟಗಾರರನ್ನು ಸುಲಭವಾಗಿ ಬಲಿಪಡೆದರಲ್ಲದೆ, ಒಟ್ಟಾರೆ 134 ರನ್‍ಗಳಿಗೆ 5 ವಿಕೆಟ್ ಗಳಿಸಿದರು. ಇನ್ನುಳಿದಂತೆ ನುವಾನ್ ಪ್ರದೀಪ್ 98ಕ್ಕೆ 3, ಧಮ್ಮಿಕಾ ಪ್ರಸಾದ್ ಮತ್ತು ಆ್ಯಂಜೆಲೋ ಮಾ್ಯಥ್ಯೂಸ್ ತಲಾ ಒಂದೊಂದು ವಿಕೆಟ್ ಪಡೆದರು.
ಶಿಖರ್ ಧವನ್ ಬಿ ನುವಾನ್ ಪ್ರದೀಪ್ 134
ವಿರಾಟ್ ಕೊಹ್ಲಿ ಎಲ್‍ಬಿ ಬಿ ಕೌಶಲ್ 103
ಅಜಿಂಕ್ಯ ರಹಾನೆ ಎಲ್‍ಬಿ ಕೌಶಲ್ 00
ವೃಧಿಮಾನ್ ಸಾಹ ಸಿ ಚಂಡಿಮಾಳ್ ಬಿ ಪ್ರದೀಪ್ 60
ಆರ್. ಅಶ್ವಿನ್ ಬಿ ನುವಾನ್ ಪ್ರದೀಪ್ 07
ಹರ್ಭಜನ್ ಸಿಂಗ್ ಬಿ ತರಿಂದು ಕೌಶಲ್ 14
ಅಮಿತ್ ಮಿಶ್ರಾ ಬಿ ತರಿಂದು ಕೌಶಲ್ 10
ಇಶಾಂತ್ ಶರ್ಮಾ ಅಜೇಯ 03
ವರುಣ್ ಏರಾನ್ ಸಿ ಮಾ್ಯಥ್ಯೂಸ್ ಬಿ ಕೌಶಲ್ 04
ಇತರೆ: (ಲೆಬೈ-10, ವೈಡ್-3, ನೋಬಾಲ್-11) 24
ವಿಕೆಟ್‍ಪತನ: 3-255 (ಕೊಹ್ಲಿ), 4-257 (ರಹಾನೆ), 5-294
(ಧವನ್), 6-302 (ಅಶ್ವಿನ್), 7-330 (ಹರ್ಭಜನ್), 8-344
(ಮಿಶ್ರಾ), 9-366 (ಸಾಹ), 10-375 (ಏರಾನ್).
ಬೌಲಿಂಗ್ ಧಮ್ಮಿಕಾ ಪ್ರಸಾದ್ 22-4-54-1
ನುವಾನ್ ಪ್ರದೀಪ್ 26-2-98-3
ಆ್ಯಂಜೆಲೋ ಮಾ್ಯಥ್ಯೂಸ್ 4-1-12-1
ತರಿಂದು ಕೌಶಲ್ 32.4-2-134-5
ರಂಗನಾ ಹೆರಾತ್ 33-4-67-0
ಭಾರತ ಮೊದಲ ಇನ್ನಿಂಗ್ಸ್
117.4 ಓವರ್‍ಗಳಲ್ಲಿ 375 (ಬುಧವಾರ 2 ವಿಕೆಟ್‍ಗೆ 128)
ಧಿಮುತ್ ಕರುಣಾರತ್ನೆ ಬಿ ಅಶ್ವಿನ್ 00
ಕೌಶಲ್ ಸಿಲ್ವಾ ಬಿ ಅಮಿತ್ ಮಿಶ್ರಾ 00
ಧಮ್ಮಿಕಾ ಪ್ರಸಾದ್ ಬ್ಯಾಟಿಂಗ್ 03
ಕುಮಾರ್ ಸಂಗಕ್ಕಾರ ಬ್ಯಾಟಿಂಗ್ 01
ಇತರೆ: (ನೋಬಾಲ್-1) 01
ವಿಕೆಟ್‍ಪತನ: 1-0 (ಕರುಣಾರತ್ನೆ), 2-1 (ಸಿಲ್ವಾ)
ಬೌಲಿಂಗ್ ಆರ್. ಅಶ್ವಿನ್ 2-2-0-1
ಅಮಿತ್ ಮಿಶ್ರಾ 1-0-1-1
ಹರ್ಭಜನ್ ಸಿಂಗ್ 1-0-4-0
ಗವಾಸ್ಕರ್, ದ್ರಾವಿಡ್ ದಾಖಲೆ ಸರಿಗಟ್ಟಿದ ಶಿಖರ್ ಧವನ್
ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ದಾಖಲಿಸುವುದರೊಂದಿಗೆ ಹೊಸ ಸಾಧನೆ ಮೆರೆದರು. ತವರಿನಾಚೆ ಒಂದರ ಹಿಂದೊಂದರಂತೆ ಶತಕ ದಾಖಲಿಸಿದ ಭಾರತದ ಮೂರನೇ ಬ್ಯಾಟ್ಸ್‍ಮನ್ ಎಂಬ ಕೀರ್ತಿಗೆ ಧವನ್ ಪಾತ್ರರಾದರು. ಆ ಮೂಲಕ ಇಂಥದ್ದೇ ಸಾಧನೆ ಮಾಡಿದ್ದ ಸುನೀಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಸಾಧನೆಯನ್ನು ಧವನ್ ಸರಿಗಟ್ಟಿದರು. ಕಳೆದ ಪಂದ್ಯದಲ್ಲಿ ಧವನ್ ಬಾಂಗ್ಲಾದೇಶ ವಿರುದ್ಧ 173 ರನ್ ಸಿಡಿಸಿದ್ದರು.