ಕ್ರೀಡೆ

ಮ್ಯಾಥ್ಯೂಸ್ ಶತಕ ಮಂಕಾಗಿಸಿದ ಮಿಶ್ರಾ

ಮ್ಯಾಥ್ಯೂಸ್ ಶತಕ ಮಂಕಾಗಿಸಿದ ಮಿಶ್ರಾ
ಶ್ರೀಲಂಕಾ v/s ಭಾರತ
Published On :

ಕೊಲಂಬೊ: ಅತೀವ ಎಚ್ಚರಿಕೆಯಿಂದ ಸೊಗಸಾದ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಮುನ್ನಡೆ ತಂದುಕೊಡಲು ನಡೆಸಿದ ಲಂಕಾ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ (102: 167 ಎಸೆತ, 12 ಬೌಂಡರಿ) ಅವರ ಅಪೂರ್ವ ಶತಕವನ್ನು ಭಾರತದ ಸ್ಪಿನ್ ಬೌಲರ್ ಅಮಿತ್ ಮಿಶ್ರಾ ವಿಫಲಗೊಳಿಸಿದ್ದರಿಂದ ಆತಿಥೇಯ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಮೇಲುಗೈ ಸಾಧಿಸಿದೆ.

ಇಲ್ಲಿನ ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಂದು ಟೀಂ ಇಂಡಿಯಾ, ಆತಿಥೇಯರ ಮೊದಲ ಇನ್ನಿಂಗ್ಸ್ ಅನ್ನು 306 ರನ್ ಗಳಿಗೆ ಕೊನೆಗೊಳಿಸಿ 87 ರನ್ ಗಳ ಮಹತ್ವದ ಮುನ್ನಡೆ ಪಡೆದುಕೊಂಡಿತು. ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಅಮಿತ್ ಮಿಶ್ರಾ, ಶ್ರೀಲಂಕಾದ ಇನ್ನಿಂಗ್ಸ್ ಮುನ್ನಡೆಗೆ ಪ್ರಮುಖ ಅಡ್ಡಗಾಲಾದರು.

ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅದು ತ್ವರಿತಗತಿಯಲ್ಲಿ ಆರಂಭಿಕ ಕೆ.ಎಲ್. ರಾಹುಲ್ (2)ವಿಕೆಟ್ ಅನ್ನು ಕಳೆದುಕೊಂಡರೂ, ನಂತರ ಚೇತರಿಕೆಯ ಆಟದೊಂದಿಗೆ ದಿನದಾಟಕ್ಕೆ ವಿದಾಯ ಹೇಳಿತು. ದಮ್ಮಿಕಾ ಪ್ರಸಾದ್ ಗೆ ಬೌಲ್ಡ್ ಆಗಿ ರಾಹುಲ್ ನಿರ್ಗಮಿಸಿದ ಬಳಿಕ ಆರಂಭಿಕ ಮುರಳಿ ವಿಜಯ್ ಮತ್ತು ಅಜಿಂಕ್ಯ ರಹಾನೆ 2ನೇ ವಿಕೆಟ್‍ಗೆ ಮುರಿಯದ 67 ರನ್ ಪೇರಿಸಿದ್ದಲ್ಲದೆ, ಕ್ರಮವಾಗಿ 39 ಮತ್ತು 28 ರನ್ ಮಾಡಿ ಕ್ರೀಸ್‍ನಲ್ಲಿದ್ದರು. ಭಾರತ 157 ರನ್ ಮುನ್ನಡೆ ಸಾಧಿಸಿದೆ. ಈ ಮೈದಾನದಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿಯೂ ಹರಿಣಗಳ ವಿರುದ್ಧ ಸಿಂಹಳೀಯರು ಗೆಲುವಿನ ನಗೆಬೀರಿದ್ದರು.

ಈ ದಿಸೆಯಲ್ಲಿ ಭಾರತ ನಾಲ್ಕನೇ ದಿನದಂದು ಎಚ್ಚರಿಕೆಯಿಂದ ಆಡುವ ಅಗತ್ಯವಿದೆ. ಮೇಲಾಗಿ ಗಾಲೆ ಟೆಸ್ಟ್‍ನಲ್ಲಿ ಇಂಥದ್ದೇ ಹಿನ್ನಡೆ ಅನುಭವಿಸಿಯೂಅದನ್ನು ಮೆಟ್ಟಿನಿಂತ ಲಂಕಾಗೆ ಮತ್ತೆ ಅಂಥ ಅವಕಾಶ ಮಾಡಿಕೊಡದಂತೆ ಭಾರತ ಕಟ್ಟೆಚ್ಚರ ವಹಿಸಬೇಕಿದೆ.

ಸ್ಕೋರ್ ವಿವರ
ಶ್ರೀಲಂಕಾ ಮೊದಲ ಇನ್ನಿಂಗ್ಸ್ 108 ಓವರ್‍ಗಳಲ್ಲಿ 306 (ಶುಕ್ರವಾರ 3 ವಿಕೆಟ್‍ಗೆ 140) ಲಹಿರು ತಿರಿಮಾನೆ ಸಿ ಸಾಹ ಬಿ ಇಶಾಂತ್ 62 ಆ್ಯಂಜೆಲೊ ಮ್ಯಾಥ್ಯೂಸ್ ಸಿ ವಿಜಯ್ ಬಿ ಬಿನ್ನಿ 102 ದಿನೇಶ್ ಚಂಡಿಮಾಲ್ ಸಿ ರಾಹುಲ್ ಬಿ ಇಶಾಂತ್ 11 ಜೀಸನ್ ಮುಬಾರಕ್ ಬಿ ಅಮಿತ್ ಮಿಶ್ರಾ 22 ದಮ್ಮಿಕಾ ಪ್ರಸಾದ್ ಸಿ ರಹಾನೆ ಬಿ ಮಿಶ್ರಾ 05 ರಂಗನಾ ಹೆರಾತ್ ಎಲ್‍ಬಿ ಬಿ ಅಶ್ವಿನ್ 01 ತರಿಂದು ಕೌಶಲ್ ಸ್ಟಂಪೌಟ್ ಸಾಹ ಬಿ ಮಿಶ್ರಾ 06 ದುಷ್ಮಂತಾ ಚಮೀರಾ ಅಜೇಯ 00
ಇತರೆ: (ಬೈ-2, ಲೆಬೈ-6, ನೊಬಾಲ್-5) 13 ವಿಕೆಟ್ ಪತನ: 4-241(ತಿರಿಮಾನೆ), 5-259 (ಚಂಡಿಮಾಲ್), 6-284 (ಮ್ಯಾಥ್ಯೂಸ್), 7-289 ಪ್ರಸಾದ್), 8-300 (ಮುಬಾರಕ್), 9-306 (ಹೆರಾತ್), 10-306 (ಕೌಶಲ್) ಬೌಲಿಂಗ್ ವಿವ-ರ: ಇಶಾಂತ್ ಶರ್ಮಾ 21-3-68-2, ಉಮೇಶ್ ಯಾದವ್ 19-5-67-1, ಸ್ಟುವರ್ಟ್ ಬಿನ್ನಿ 18-4-44-1, ಆರ್. ಅಶ್ವಿನ್ 29-3-76-2, ಅಮಿತ್ ಮಿಶ್ರಾ 21-3-43-4
ಭಾರತ ದ್ವಿತೀಯ ಇನ್ನಿಂಗ್ಸ್ 29.2
ಓವರ್‍ಗಳಲ್ಲಿ 1 ವಿಕೆಟ್‍ಗೆ 70 ಮುರಳಿ ವಿಜಯ್ ಬ್ಯಾಟಿಂಗ್ 39 ಕೆ.ಎಲ್. ರಾಹುಲ್ ಬಿ ದಮ್ಮಿಕಾ ಪ್ರಸಾದ್ 02 ಅಜಿಂಕ್ಯ ರಹಾನೆ ಬ್ಯಾಟಿಂಗ್ 28 ಇತ-ರೆ: (ವೈಡ್-1) 01 ವಿಕೆಟ್ ಪತ-ನ: 1-3 (ರಾಹುಲ್) ಬೌಲಿಂಗ್ ವಿವ-ರ: ದಮ್ಮಿಕಾ ಪ್ರಸಾದ್ 4-0-12-1, ರಂಗನಾ ಹೆರಾತ್ 11.2-3-23-0, ದುಷ್ಮಂತಾ ಚಮೀರಾ 4-0-14-0, ಆ್ಯಂಜೆಲೊ ಮ್ಯಾಥ್ಯೂಸ್ 2-1-1-0, ತರಿಂದು ಕೌಶಲ್ 8-0-20-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.