ಸೆಮಿಫೈನಲ್‍ಗೆ ಸಾನಿಯಾ-ಹಿಂಗಿಸ್

ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿ ಸಿನ್ಸಿನಾಟಿ...
ಸಾನಿಯಾ ಮಿರ್ಜಾ - ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ - ಮಾರ್ಟಿನಾ ಹಿಂಗಿಸ್
Updated on

ಸಿನ್ಸಿನಾಟಿ: ಪ್ರಸಕ್ತ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೋಡಿ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯಕ್ಕೆ ಪ್ರವೇಶಿಸಿದೆ.

ಇನ್ನು ಹಿರಿಯ ಆಟಗಾರ ಲಿಯಾಂಡರ್ ಪೇಸ್ ಜೋಡಿ ಹಾಗೂ ಬೋಪಣ್ಣ ಜೋಡಿ ತಂತಮ್ಮ ಪಂದ್ಯಗಳಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದ್ದಾರೆ.

ಶನಿವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಅಮರಿಕದ ಕ್ರಿಸ್ಟೀನಾ ಮೆಕ್ ಹಾಲೆ ಮತ್ತು ಕೊಕೊ ವ್ಯಾಂಡೆವೆಘೆ ಜೋಡಿಯನ್ನು 6-4, 6-1 ಸೆಟ್‍ಗಳ ಅಂತರದಲ್ಲಿ ಮಣಿಸಿದ್ದಾರೆ.

ಈ ಮೂಲಕ ರು.17.88 ಕೋಟಿ ಬಹುಮಾನ ಮೊತ್ತದ ಡಬ್ಲ್ಯೂಟಿಎ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಇಂಡೋ-ಸ್ವಿಸ್ ಜೋಡಿ ತಮ್ಮ ಮುಂದಿನ ಪಂದ್ಯದಲ್ಲಿ ತೈಪೇ ಜೋಡಿ ಹಾವ್ ಚಿಂಗ್ ಚಾನ್ ಮತ್ತು ಯಂಗ್ ಜಾನ್ ಚನ್ ವಿರುದ್ಧ ಸೆಣಸಲಿದೆ.

ಪಂದ್ಯದ ಮೊದಲ ಸೆಟ್‍ನಲ್ಲಿ ಸಾನಿಯಾ ಜೋಡಿ ಪ್ರತಿಸ್ಪರ್ಧಿಗಳಿಂದ ಸ್ವಲ್ಪ ಪ್ರತಿರೋಧ ಎದುರಿಸಿತಾದರೂ, ಆನಂತರ ಅನಾಯಾಸವಾಗಿ ಪಂದ್ಯವನ್ನು ಬಾಚಿಕೊಂಡಿತು. ಮೊದಲ ಸೆಟ್ ನಲ್ಲಿ 6-4ರಿಂದ ಮುನ್ನಡೆ ಸಂಪಾದಿಸಿದ್ದ ಸಾನಿಯಾ ಜೋಡಿ, ಎರಡನೇ ಸೆಟ್‍ನಲ್ಲಿ 6-1ರ ಸುಲಭ ಮೇಲುಗೈ ಮೂಲಕ ಪಂದ್ಯಕ್ಕೆ ತೆರೆ ಎಳೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com