

ಲಂಡನ್: ತಮ್ಮ ತರಲೆ ಅವತಾರಗಳಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಅವಕೃಪೆಗೆ ಒಳಗಾಗಿರುವ ಇಂಗ್ಲೆಂಡ್ ತಂಡದ ಆಟಗಾರ ಕೆವಿನ್ ಪೀಟರ್ಸನ್ ಮುಂದಿನ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ.
ಅವರಿಗೆ ಇಂಥದ್ದೊಂದು ಅವಕಾಶ ಕೊಟ್ಟಿರುವುದು ಬಿಟಿ ಎಂಬ ಮಾಧ್ಯಮ ಸಂಸ್ಥೆ. ಅಸಲಿಗೆ 2017-18ರ ಆ್ಯಶಸ್ ಸರಣಿಯು ಕಾಂಗರೂ ನೆಲದಲ್ಲೇ ನಡೆಯಲಿದ್ದು, ಇಡೀ ಟೂರ್ನಿಯ ಪ್ರಸಾರದ ಕ್ಕುಗಳನ್ನು ಈ ಸಂಸ್ಥೆಯೇ ಪಡೆದಿದೆ.