

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ಶಾಲಾ ಫುಟ್ಬಾಲ್ ಟೂರ್ನಿಯಲ್ಲಿ ಓಜೋನ್ ಫುಟ್ಬಾಲ್ ಅಕಾಡೆಮಿ ಸೆಮಿಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಓಜೋನ್ ಫುಟ್ಬಾಲ್ ಅಕಾಡೆಮಿಯು 2-0 ಗೋಲುಗಳ ಅಂತರದಲ್ಲಿ ರೂಟ್ಸ್ ಅಕಾಡೆಮಿ ವಿರುದ್ಧ ಜಯಿಸಿದೆ. ಓಜೋನ್ ತಂಡದ ಪರ ಉಮಾಶಂಕರ್ 15ನೇ ಹಾಗೂ ಇಮಾ್ರನ್ ಖಾನ್ 35ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಟೇಡಿಯಂ ಸಾಕರ್ ಅಕಾಡೆಮಿಯು ಸಿಂಧಿ ಎಚ್. ಎಸ್. ಕುಮಾರಕೃಪ ವಿರುದ್ಧ 4-0 ಗೋಲುಗಳಿಂದ ಗೆಲುವು ದಾಖಲಿಸಿತು.
ಸ್ಟೇಡಿಯಂ ಸಾಕರ್ ಅಕಾಡೋಮಿ ತಂಡದ ಪರ ಯಂಶ್ 6ನೇ, ಅದ್ವೈತ 36ನೇ, ನಿಖಿಲ್ 33 ಮತ್ತು 36ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಮಂಡ್ಯದ ಸೆಂಟ್ ಜಾನ್
ಶಾಲಾ ತಂಡವು 2-0 ಗೋಲುಗಳಿಂದ ಗ್ಲೋಬಲ್ ಶಾಲೆಯನ್ನು ಮಣಿಸಿತು. ಸೇಂಟ್ ಜಾನ್ ತಂಡದ ಪರ ಸಂತೋಷ್ ತಮಾಟ 20ನೇ ಮತ್ತು ಚಂದನ್ ಕುಮಾರ್ 32ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.