ಕ್ವಾರ್ಟರ್‍ಗೆ ಶಿವ, ದೇವೇಂದ್ರೂ

ಹಾಲಿ ಚಾಂಪಿಯನ್ ಶಿವಥಾಪ ಹಾಗೂ ಎಲ್ ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬ್ಯಾಂಕಾಕ್: ಹಾಲಿ ಚಾಂಪಿಯನ್ ಶಿವಥಾಪ ಹಾಗೂ ಎಲ್ ದೇವೇಂದ್ರೂ ಸಿಂಗ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಕ್ವಾರ್ಟರ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಭಾನುವಾರ ನಡೆದ 56 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಶಿವಥಾಪ ತಮ್ಮ ಪ್ರತಿಸ್ಪರ್ಧಿ ಜೋರ್ಡಾನ್‍ನ ಮೊಹಮದ್ ಅಲ್ವಾಡಿ ಅವರನ್ನು 3-0 ಅಂಕಗಳ ಅಂತರದಲ್ಲಿ ಮಣಿಸಿದರು. 49 ಕೆ.ಜಿ ವಿಭಾಗದಲ್ಲಿ ಎಲ್ ದೇವೆಂದ್ರೂ ತಮ್ಮ ಪ್ರತಿಸ್ಪರ್ಧಿ ಚೀನಾದ ಹೆ ಜುಂಜುನ್ ಅವರನ್ನು 3-0 ಅಂಕಗಳ ಅಂತರದಲ್ಲಿ ಮಣಿಸಿದರು. ಇನ್ನು ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದ ಮಂದೀಪ್ ಸಿಂಗ್ ಜಾಂಗ್ರಾ 69 ಕೆ.ಜಿ ವಿಭಾಗದಲ್ಲಿ ಜಪಾನ್‍ನ ಯಶುಹಿರೊ ಸುಜುಕಿ ವಿರುದ್ಧ 1-2 ಅಂಕಗಳಿಂದ ಪರಾಭವಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com