ಕೆಪಿಎಲ್ ಟಿಕೆಟ್ ಮಾರಾಟ ಆರಂಭ

ಇದೇ ತಿಂಗಳು 3ರಿಂದ ಆರಂಭವಾಗಲಿರುವ ನಾಲ್ಕನೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಟಿಕೆಟ್ ಮಾರಾಟ ಆರಂಭವಾಗಿದೆ...
ಕೆಪಿಎಲ್ ಟೂರ್ನಿ (ಸಂಗ್ರಹಚಿತ್ರ)
ಕೆಪಿಎಲ್ ಟೂರ್ನಿ (ಸಂಗ್ರಹಚಿತ್ರ)

ಹುಬ್ಬಳ್ಳಿ: ಇದೇ ತಿಂಗಳು 3ರಿಂದ ಆರಂಭವಾಗಲಿರುವ ನಾಲ್ಕನೇ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಟಿಕೆಟ್ ಮಾರಾಟ ಆರಂಭವಾಗಿದೆ.

ಹುಬ್ಬಳ್ಳಿಯಲ್ಲಿ ಮೊದಲ ಹಂತದ ಟೂರ್ನಿ ನಡೆಯಲಿದ್ದು, ಇಲ್ಲಿನ ರಾಜನಗರ ಕ್ರೀಡಾಂಗಣ ಹಾಗೂ ಓಯಾಸಿಸ್ ಮಾಲ್‍ನಲ್ಲಿ ಟಿಕೆಟ್ ಕೇಂದ್ರಗಳನ್ನು ತೆರೆಯಲಾಗಿದೆ. ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಟಿಕೆಟ್ ಮಾರಾಟ ನಡೆಯಲಿದೆ. ಇನ್ನು ಆನ್‍ಲೈನ್ ಮೂಲಕವೂ ಟಿಕೆಟ್ ಪಡೆಯಬಹುದಾಗಿದ್ದು hಣಣಠಿ://iಟಿ.booಞmಥಿshoತಿ.ಛಿom. ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಈ ಬಾರಿಯ ಟಿಕೆಟ್ ದರ  ರು. 25 ಮತ್ತು ರು.45 ಆಗಿದೆ.ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ನಮ್ಮ ಶಿವಮೊಗ್ಗ, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್, ಹುಬ್ಬಳ್ಳಿ ಟೈಗರ್ಸ್, ಬಳ್ಳಾರಿ ಟಸ್ಕರ್ಸ್ ಮತ್ತು  ಆಲ್ ಸ್ಟಾರ್ ತಂಡಗಳು ಟೂರ್ನಿಯಲ್ಲಿ ಸೆಣಸಲಿವೆ. ಹುಬ್ಬಳ್ಳಿಯಲ್ಲಿ ಸೆ.3ರಿಂದ 10ರವರೆಗೆ ಪಂದ್ಯಗಳು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com