ಕನಸಿನ ತಂಡದಲ್ಲಿ ಫೆಡರರ್-ಹಿಂಗಿಸ್

ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೆನಿಸ್ ವಿಭಾಗದಲ್ಲಿ ಪಾಲ್ಗೊಳ್ಳಲಿರುವ ಸ್ವಿಜರ್ಲೆಂಡ್ ತಂಡದಲ್ಲಿ ಆ ದೇಶದ...
ರೋಜರ್ ಫೆಡರರ್ ಹಾಗೂ ಮಾರ್ಟಿನಾ ಹಿಂಗಿಸ್
ರೋಜರ್ ಫೆಡರರ್ ಹಾಗೂ ಮಾರ್ಟಿನಾ ಹಿಂಗಿಸ್
Updated on: 
ರಿಯೊ ಡಿ ಜನೈರೊ: ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೆನಿಸ್ ವಿಭಾಗದಲ್ಲಿ ಪಾಲ್ಗೊಳ್ಳಲಿರುವ ಸ್ವಿಜರ್ಲೆಂಡ್ ತಂಡದಲ್ಲಿ ಆ ದೇಶದ ಅಗ್ರ ಆಟಗಾರರಾದ ರೋಜರ್ ಫೆಡರರ್ ಹಾಗೂ ಮಾರ್ಟಿನಾ ಹಿಂಗಿಸ್ ಸೇರ್ಪಡೆಗೊಂಡಿದ್ದಾರೆಂದು ಐಬಿಎನ್ ಲೈವ್ ವರದಿ ಮಾಡಿದೆ. 
ಒಲಿಂಪಿಕ್ಸ್ ಟೆನಿಸ್‍ನಲ್ಲಿ ಪದಕ ಗೆಲ್ಲುವ ಕನಸಿನ ತಂಡವೊಂದನ್ನು ಕಟ್ಟುವ ಯತ್ನಕ್ಕೆ ಆ ದೇಶದ ಟೆನಿಸಿಗರು ಜೋಡಿಸಿದ್ದು, ಈ ನಿಟ್ಟಿನಲ್ಲಿ, ಒಲಿಂಪಿಕ್ಸ್ ಮಿಶ್ರ ಡಬಲ್ಸ್ ನಲ್ಲಿ ತಮ್ಮೊಂದಿಗೆ ಕಣಕ್ಕಿಳಿಯುವಂತೆ ಹಿಂಗಿಸ್ ಇದೇ ವರ್ಷದಾರಂಭದಲ್ಲಿ ಫೆಡರರ್‍ಗೆ ಮನವಿ ಸಲ್ಲಿಸಿದ್ದರು. 
ಆ ಮನವಿಗೆ ಫೆಡರರ್ ಈಗ ಹಸಿರು ನಿಶಾನೆ ತೋರಿದ್ದಾರೆ. ಹಾಗಾಗಿ, ಈ ಇಬ್ಬರೂ ಮಹಾಕ್ರೀಡಾಕೂಟದ ಮಿಶ್ರ ಡಬಲ್ಸ್‍ನಲ್ಲಿ ಆಡುವುದು ನಿಶ್ಚಿತ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com