

ಮೆಲ್ಬರ್ನ್: ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರ ಕನಸಿನ `ಭಾರತೀಯ ಟೆಸ್ಟ್ ತಂಡ'ದಲ್ಲಿ ಸಚಿನ್ ತೆಂಡೂಲ್ಕರ್ 4ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದು, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿಗೆ ತಂಡದ ನಾಯಕತ್ವ ವಹಿಸಲಾಗಿದೆ.
ಬುಧವಾರ ಅವರು ಸಾಮಾಜಿಕ ಜಾಲತಾಣ ನೂತನ ಫೇಸ್ಬುಕ್ ಅಪ್ ಡೇಟ್‍ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಆರಿಸಲು ಮುಂದಾಗಿದ್ದಾರೆ. ಅದರಲ್ಲಿ, ದಿಗ್ಗಜ ತೆಂಡೂಲ್ಕರ್ 4ನೇ ಕ್ರಮಾಂಕದಲ್ಲಿದ್ದರೆ, ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಹಾಗೂ ಹಿರಿಯ ನವಜೋತ್ ಸಿಧು ಆರಂಭಿಕರಾಗಿದ್ದಾರೆ. ಇನ್ನು, ತಡೆಗೋಡೆಯೆಂದೇ ಖ್ಯಾತಿವೆತ್ತ 3ನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಇದ್ದಾರೆ. ಆದರೆ, 5ನೇ ಹಾಗೂ 6ನೇ ಸ್ಥಾನದಲ್ಲಿ ವಿವಿಎಸ್ ಲಕ್ಷ್ಮಣ್ ಹಾಗೂ ಮೊಹಮ್ಮದ್ ಅಜರುದ್ದೀನ್‍ರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲದಲ್ಲಿದ್ದೇನೆ ಎಂದು ವಾರ್ನ್ ಹೇಳಿಕೊಂಡಿದ್ದಾರೆ.