

ನವದೆಹಲಿ: ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಬರೋಡಾ 6 ವಿಕೆಟ್‍ಗಳ ಸುಲಭ ಜಯ ದಾಖಲಿಸಿತು.
ದೆಹಲಿಯ ಪಲಾಮ್ `ಎ' ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ತ್ರಿಪುರಾ, ಕೇವಲ 58 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಾಯಕ ಮುರಾಸಿಂಗ್ 10 ರನ್ ಗಳಿಸಿದ್ದೇ ಆ ತಂಡದ ಬ್ಯಾಟ್ಸ್ ಮನ್ ಗಳ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿತು! ಬರೋಡಾದ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ 5 ವಿಕೆಟ್ ಕಬಳಿಸಿ ತ್ರಿಪುರಾ ಶೀಘ್ರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆನಂತರ, ತನ್ನ ಇನಿಂಗ್ಸ್ ಆರಂಬಿsಸಿದ ಬರೋಡಾ ಆರಂಭದಲ್ಲಿ ಎಡವಿದರೂ, 6.1 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಜಯದ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರ್: ತ್ರಿಪುರಾ 22.2 ಓವರ್‍ಗಳಲ್ಲಿ 58 (ಮುರಾಸಿಂಗ್ 10, ಬಾನಿಕ್ 6; ಸ್ವಪ್ನಿಲ್ 25ಕ್ಕೆ 5, ಯೂಸುಫ್ ಪಠಾಣ್ 24ಕ್ಕೆ 3); ಬರೋಡಾ 6.1 ಓವರ್ಗಳಲ್ಲಿ 4 ವಿಕೆಟ್ ಗೆ 61 (ಆಂಬಟಿ ರಾಯುಡು ಅಜೇಯ 31, ದೀಪಕ್ ಹೂಡಾ 11; ಚಿರಂಜಿತ್ ಪಾಲ್ 27ಕ್ಕೆ 3, ಸ್ವಪನ್ ದಾಸ್ 19ಕ್ಕೆ 1).