ತೆಲಂಗಾಣ ಮಣಿಸಿದ ಕರ್ನಾಟಕ

ಅಮೂಲ್ಯ ಕಮಲ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕರ್ನಾಟಕ ವನಿತಾ ತಂಡ ತೆಲಂಗಾಣ ವನಿತಾ ತಂಡವನ್ನು 3-1 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ...
ಫುಟ್ ಬಾಲ್ (ಸಂಗ್ರಹ ಚಿತ್ರ)
ಫುಟ್ ಬಾಲ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಅಮೂಲ್ಯ ಕಮಲ್ ಅವರ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಕರ್ನಾಟಕ ವನಿತಾ ತಂಡ ತೆಲಂಗಾಣ ವನಿತಾ ತಂಡವನ್ನು 3-1 ಗೋಲುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ.

ತಿರುಚಿಯಲ್ಲಿ ನಡೆಯುತ್ತಿರುವ 21ನೇ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ವನಿತಾ ತಂಡ ಮೊದಲ ಪಂದ್ಯದಲ್ಲೇ ಜಯದ ನಗೆಬೀರಿತು. ಪಂದ್ಯದ ಮೊದಲಾರ್ಧ ಮುಗಿಯುವ ಕೊನೇ ಕ್ಷಣದಲ್ಲಿ ಕರ್ನಾಟಕ ಪರ ಅಮೂಲ್ಯ 41ನೇ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ತಂದುಕೊಟ್ಟರು. ಆನಂತರ 69 ಹಾಗೂ 89ನೇ ನಿಮಿಷಗಳಲ್ಲಿ ಗೋಲು ಬಾರಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದರು. ತೆಲಂಗಾಣ ಪರ ರೋಜಾ 78ನೇ ನಿಮಿಷದಲ್ಲಿ ಗೋಲು ಹೊಡೆದರು. ಸೋಮವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಪಾಂಡಿಚೇರಿ ವಿರುದ್ಧ ಕರ್ನಾಟಕ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com