

ಕೋಲ್ಕತಾ: ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಭಾನುವಾರ ಬಂಗಾಳ ತಂಡವನ್ನು ಪ್ರಕಟಿಸಲಾಗಿದ್ದು, ಆರಂಭಿಕ 2 ಟಿ20 ಪಂದ್ಯಗಳಿಗೆ ವೇಗಿ ಮೊಹಮದ್ ಶಮಿ ಲಭ್ಯರಾಗ ಲಿದ್ದಾರೆ. ಆರಂಭಿಕ ಎರಡು ಪಂದ್ಯಗಳಿಗೆ ಶಮಿ ಲಭ್ಯವಾಗಿರುವು ದರಿಂದ ಅಲೋಕ್ ಪ್ರತಾಪ್ ಸಿಂಗ್ ಅವರನ್ನು 16ನೇ ಆಟಗಾರನಾಗಿ ಆಯ್ಕೆ ಮಾಡಿ ದ್ದೇವೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ. ಬಂಗಾಳ ತಂಡ: ಮನೋಜ್ ತಿವಾರಿ (ನಾಯಕ), ಲಕ್ಷ್ಮಿ ರತನ್ ಶುಕ್ಲಾ, ವೃದ್ಧಿಮಾನ್ ಸಾಹ, ಶ್ರೀವಾಸ್ತವ್ ಗೋಸ್ವಾಮಿ, ಸುದೀಪ್ ಚಟರ್ಜಿ, ದೆಬಬ್ರತಾ ದಾಸ್, ಪಂಕಜ್ ಶಾ, ಪ್ರಮೋದ್ ಚಾಂಡಿಲಾ, ಅಮೀರ್ ಗನಿ, ಪ್ರಗ್ಯಾನ್ ಓಜಾ, ಸಯನ್ ಶೇಖರ್, ಮೊಹಮದ್ ಶಮಿ, ಅಶೋಕ್ ದಿಂಡಾ, ಮುಖೇಶ್ ಕುಮಾರ್, ಅನುರಾಗ್ ತಿವಾರಿ, ಅಲೋಕ್ ಪ್ರತಾಪ್.